ಈ ವೃದ್ದೆಯನ್ನು ಬಿಕ್ಷುಕಿ ಅಂದುಕೊಂಡ್ರು ಆದ್ರೆ ನಿಜಾಂಶ ಗೊತ್ತಾಗುತ್ತಿದ್ದಂತೆ ಅಲ್ಲಿದ್ದ ಜನರಿಗೆ ಶಾಕ್

0 1,190

ಮಹಿಳೆಯನ್ನು ಬಿಕ್ಷುಕಿ ಎಂದು ತಿಳಿದ ಪೊಲೀಸರಿಗೆ ನಿಜಾಂಶ ಗೊತ್ತಾದ ನಂತರ ತಾಯಿಯ ಮಮತೆಯ ಬಗ್ಗೆ ಆಶ್ಚರ್ಯವಾಯಿತು ಹಾಗಾದರೆ ಪೊಲೀಸರಿಗೆ ಗೊತ್ತಾದ ನಿಜಾಂಶವನ್ನು ಈ ಲೇಖನದ ಮೂಲಕ ತಿಳಿಯೋಣ.

ಗ್ರೇಟರ್ ನೋಯ್ಡಾದಲ್ಲಿ ಭಿಕ್ಷೆ ಬೇಡುತ್ತಿದ್ದವರನ್ನು ಭಿಕ್ಷೆ ಬೇಡುವುದನ್ನು ನಿಲ್ಲಿಸಿ ವಯಸ್ಸಾದವರನ್ನು ವೃದ್ಧಾಶ್ರಮಕ್ಕೆ ಕೈ ಕಾಲು ಗಟ್ಟಿ ಇರುವವರನ್ನು ಚಿಕ್ಕ ಪುಟ್ಟ ಕೆಲಸಕ್ಕೆ ಸೇರಿಸುವ ನಿರ್ಧಾರ ಕೈಗೊಂಡಿತು. ಅದೇ ರೀತಿ ವಯಸ್ಸಾದ 86 ವರ್ಷದ ಮಹಿಳೆಯನ್ನು ವಶಪಡಿಸಿಕೊಳ್ಳಲು ಪೊಲೀಸರು ಹೋದರು ಆಗ ಅಜ್ಜಿಯ ಬಳಿ ಸಣ್ಣ ಚೀಲವಿತ್ತು ಅದರಲ್ಲೇನಿದೆ ತೆಗೆದು ತೋರಿಸು ಎಂದು ಬಲವಂತ ಮಾಡಿದರೂ ಅಜ್ಜಿ ತೆಗೆದು ತೋರಿಸಲಿಲ್ಲ ನಂತರ ಪೊಲೀಸರೆ ಚೀಲವನ್ನು ತೆಗೆದು ನೋಡಿದಾಗ ಅದರಲ್ಲಿ 2 ಲಕ್ಷ ರೂಪಾಯಿ ಹಣವಿತ್ತು ಮೊದಲಿಗೆ ಪೊಲೀಸರಿಗೆ ಅಜ್ಜಿ ಕಳ್ಳತನ ಮಾಡಿರಬೇಕೆಂದು ಅನಿಸಿತ್ತು ನಂತರ ಅದರ ಬಗ್ಗೆ ಅಜ್ಜಿಯನ್ನು ವಿಚಾರಿಸಲಾಯಿತು.

ಅಜ್ಜಿಗೆ ಇಬ್ಬರು ಗಂಡುಮಕ್ಕಳಿದ್ದರು ಮತ್ತು ಉತ್ತರಪ್ರದೇಶದ ಫರೀದಾಬಾದ್ ನಲ್ಲಿ 10 ಎಕರೆ ಜಮೀನು ಇತ್ತು. 13 ವರ್ಷಗಳ ಹಿಂದೆ ಅಜ್ಜಿಯ ಗಂಡ ತೀರಿಹೋದ ಮೇಲೆ ಅಜ್ಜಿಯ ಮಕ್ಕಳು ಇಬ್ಬರು ಐದೈದು ಎಕರೆಯಂತೆ ಹಂಚಿಕೊಂಡು ಅಜ್ಜಿಯನ್ನು ಮನೆಯಿಂದ ಹೊರಹಾಕಿಬಿಟ್ಟರು. ಆಗ ಅಜ್ಜಿಗೆ ಏನು ಮಾಡಬೇಕೆಂದು ಗೊತ್ತಾಗದೆ ನೋಯ್ಡಾಗೆ ಬಂದು ಭಿಕ್ಷೆ ಬೇಡಲು ಶುರುಮಾಡಿದರು 13 ವರ್ಷ ದಲ್ಲಿ ಭಿಕ್ಷೆ ಬೇಡುತ್ತಾ ಬಂದ ಹಣದಲ್ಲಿ ಕೇವಲ ಊಟದ ಖರ್ಚನ್ನು ಮಾಡಿ ಮಿಕ್ಕಿದ್ದೆಲ್ಲ ಎತ್ತಿಟ್ಟಿದ್ದಾರೆ ಆದ್ದರಿಂದ ತನ್ನ ಬಳಿ ಇಷ್ಟು ಹಣವಿದೆ ಎಂದು ಅಜ್ಜಿ ಹೇಳಿದಳು. ನಂತರ ಅಜ್ಜಿಯ ದೊಡ್ಡಮಗನಿಗೆ ವಿಚಾರ ತಿಳಿಸಿ ಅವರನ್ನು ಮನೆಗೆ ಕರೆದುಕೊಂಡು ಹೋಗಲು ಪೊಲೀಸರು ಹೇಳಿದಾಗ ಆ ಮಕ್ಕಳು ಬರಲು ಮುಂದಾಗಲಿಲ್ಲ ಹಾಗೂ ಅಜ್ಜಿಯನ್ನು ಆಶ್ರಮಕ್ಕೆ ಸೇರಿಸಿಬಿಡಿ ಎಂದು ಪೊಲೀಸರಿಗೆ ಹೇಳಿದರು ಇಷ್ಟಾದರೂ ಅಜ್ಜಿ ತನ್ನ ಬಳಿ ಇದ್ದ 2 ಲಕ್ಷ ಹಣವನ್ನು ತನ್ನ ಮೊಮ್ಮಕ್ಕಳಿಗೆ ಹಂಚಿಬಿಡಿ ಎಂದು ತನ್ನ ತಾಯ್ತನವನ್ನು ಮೆರೆದಿದ್ದಾರೆ. ತಂದೆ ತಾಯಿ ನಮ್ಮನ್ನು ಕಷ್ಟಪಟ್ಟು ಹೆತ್ತು ಹೊತ್ತು ಸಾಕಿರುತ್ತಾರೆ. ಅವರ ಅರ್ಧ ಜೀವನವನ್ನು ನಮಾಗಾಗಿ ಮುಡಿಪಾಗಿಡ್ತಾರೆ ಆದರೆ ನಾವು ದೊಡ್ಡವರಾದ ಮೇಲೆ ಅವರಿಗೆ ಮೂರೊತ್ತು ಊಟ ಹಾಕಲು ಸಹ ಹಿಂಜರಿಯುತ್ತೇವೆ. ನಾವು ಅವರನ್ನು ಕಡೆಗಣಿಸಿದರೂ ಅವರು ನಮ್ಮನ್ನು ಕಡೆಗಣಿಸುವುದಿಲ್ಲ.

Leave A Reply

Your email address will not be published.