ಕೆಲವೊಮ್ಮೆ ಮನೆಯಲ್ಲಿ ಬಟ್ಟೆ ತೊಳೆಯುವಾಗ ಕಠಿಣವಾದ ಕಲೆಗಳನ್ನು ನಿವಾರಿಸಲು ಹಲವು ಕಟ್ಸ ಪಡಬೇಕಾಗುತ್ತದೆ ಅಂತಹ ಕಠಿಣವಾದ ಎಣ್ಣೆ ಕಲೆಗಳನ್ನು ಬಟೆಗಳಿಂದ ಮುಕ್ತಿ ಪಡಿಸುವ ಸುಲಭ ವಿಧಾನ ಯಾವುದು ಅನ್ನೋದನ್ನ ತಿಳಿದುಕೊಳ್ಳೋಣ. ಹೌದು ಸ್ನೇಹಿತರೆ ನಾವು ಹೊಸ ಹೊಸ ಬಟ್ಟೆಗಳನ್ನ ಹಾಕಿಕೊಂಡು ಚನ್ನಾಗಿ ರೆಡಿ ಆಗಿ ರೇಷ್ಮೆ ಸೀರೆ, ಹಾಗೂ ಒಳ್ಳೆ ಬಟ್ಟೆಗಳನ್ನ ಹಾಕ್ಕೊಂಡು ಪಾರ್ಟಿ ಪಂಕ್ಷನ್ ಹೀಗೆ ಹಲವುಕಡೆಗಳಿಗೆ ಹೋಗುತ್ತೇವೆ, ಆದರೆ ಅಲ್ಲಿ ನಮಗೆ ತಿಳಿಯದ ಹಾಗೆ ತಿಂಡಿ ತಿನಿಸುಗಳನ್ನ, ಎಣ್ಣೆಯ ಪದಾರ್ಥಗಳನ್ನ ನಮ್ಮ ಬಟ್ಟೆಗಳಮೇಲೆ ಬೀಳಿಸಿಕೊಳ್ಳುತ್ತೇವೆ ಇದರಿಂದ ಬಟ್ಟೆಯಮೇಲೆ ಎಣ್ಣೆಯ ಕಲೆಗಳಾಗಿತ್ತವೆ, ಕೆಲವೊಮ್ಮೆ ಹಬ್ಬ ಹರಿದಿನಗಳಲ್ಲಿ ದೇವಸ್ಥಾನಗಳಿಗೆ ಹೋಗಿರುತ್ತೇವೆ, ಆಗ ಅಲ್ಲಿ ಎಣ್ಣೆತಾಗಿ ಬಟ್ಟೆಗಳಮೇಲೆ ಕಲೆಗಳು ಹಾಗೆ ಉಳಿದುಬಿಡುತ್ತವೆ.

ಇನ್ನು ಕೆಲವೊಮ್ಮೆ ಅಡುಗೆ ಮಾಡುವಾಗ ಅಥವಾ ಏನನ್ನಾದರೂ ತಿಂದಾಗ ಅದನ್ನ ಬಟ್ಟೆಮೇಲೆ ಬೀಳಿಸಿಕೊಂಡು ಬಟ್ಟೆಗಳ ಮೇಲೆ ಎಣ್ಣೆಯ ಕಲೆಗಳಾಗುತ್ತವೆ, ಇದೆಲ್ಲದರಿಂದ ಮುಕ್ತಿಯನ್ನ ಹೊಂದಲು ನಾವಿಂದು ನಿಮಗೆ ಒಂದು ಒಳ್ಳೆಯ ಟಿಪ್ಸ್ ನೀಡುತ್ತೀದ್ದೇವೆ, ಇದನ್ನ ಬಳಸಿ ನಿಮ್ಮ ಬಟ್ಟೆಗಳ ಮೇಲೆ ಆಗಿರುವಂತ ಕಲೆಗಳನ್ನ ನಿವಾರಿಸಿಕೊಳ್ಳಿ.

ಬಟ್ಟೆಗಳಮೇಲೆ ಎಣ್ಣೆ ಚಲ್ಲಿರುವ ಜಾಗದಲ್ಲಿ ನಿಮ್ಮ ಮನೆಯಲ್ಲಿರುವ ಯಾವುದಾದರು ಹಳೆಯ, ಅಥವಾ ನಿಮ್ಮ ಮನೆಯಲ್ಲಿ ನೀವು ಬಳಸುವ ಪೌಡರ್ ತಗೆದುಕೊಂಡು ಎಣ್ಣೆಯ ಕಲೆ ಇರುವ ಜಾಗದಲ್ಲಿ ಹಿಂದೆ, ಮುಂದೆ ಹಾಕಿ ಸ್ವಲ್ಪ ಕೈ ಆಡಿಸಿ ಕೆಲವು ನಿಮಿಷಗಳ ಕಾಲ ಹಾಗೆಯೆ ಬಿಡಿ, ನಂತರ ಪೌಡರ್ ಅನ್ನ ತೆಗೆಯಿರಿ ಇದರಿಂದ ನಿಮ್ಮ ಬಟ್ಟೆಗೆ ಹತ್ತಿರುವ ಎಣ್ಣೆ ಶೇಕಡಾ ಎಪ್ಪತ್ತರಷ್ಟು ಕಡಿಮೆಯಾಗಿರುತ್ತದೆ.

ಇದಾದಬಳಿಕ ನೀವು ನಿಮ್ಮ ಮನೆಯಲ್ಲಿ ಬಳಸುವ ಸೋಪಿನ ಪುಡಿಯನ್ನ ಒಂದು ಬಟ್ಟಲಿನಲ್ಲಿ ಹಾಕಿ, ಅದಕ್ಕೆ ನೀವು ಪಾತ್ರೆ ತೊಳೆಯಲು ಬಳಸುವ ಲಿಕ್ವಿಡ್ ಅನ್ನ ಹಾಕಿ ಚನ್ನಾಗಿ ಕಲಸಿ, ಈಗಾಗಲೇ ಪೌಡರ್ ಹಾಕಿ ತೆಗೆದಿರು ಜಾಗದಲ್ಲಿ ಈ ಮಿಶ್ರಣವನ್ನ ಹಾಕಿ ಒಂದು ಟೂತ್ ಬ್ರೆಷ್ ನ ಸಹಾಯದಿಂದ ಉಜ್ಜಿ, ನಂತರ ನೀರಿನ ಸಹಾಯದಿಂದ ಸ್ವಚ್ಛಗೊಳಿಸಿದರೆ ನಿಮ್ಮ ಬಟ್ಟೆಗೆ ತಾಗಿರುವ ಎಣ್ಣೆಯ ಕಲೆ ನಿವಾರಣೆಯಾಗುತ್ತದೆ.

ನಿಮ್ಮ ರೇಷ್ಮೆ ಸೀರೆಗಳಿಗೆ ಅಥವಾ ನೀರಿಗೆ ಹಾಕದಂತಹ ಬಟ್ಟೆಗಳ ಮೇಲೆ ಎಣ್ಣೆಯ ಕಲೆಗಳಾಗಿದ್ದರೆ ಅದಕ್ಕೆ ಪೌಡರ್ ಅನ್ನು ಮಾತ್ರ ಬಳಸಿ ಸೋಪಿನ ಪುಡಿಯನ್ನ ಬಳಸಬೇಡಿ. ಸೋಪಿನ ಪುಡಿಯನ್ನ ಬಳಸಿದರೆ ಆ ಬಟ್ಟೆಯನ್ನ ನೀರಿಗೆ ಹಾಕಬೇಕಾಗುತ್ತದೆ, ಅದಕ್ಕಾಗಿ ಸೋಪಿನ ಪುಡಿಯನ್ನ ಬಳಸಬೇಡಿ ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

By

Leave a Reply

Your email address will not be published. Required fields are marked *