ಲವಂಗದ ಈ ಉಪಾಯ ನಿಮ್ಮ ಅದೃಷ್ಟವನ್ನೇ ಬದಲಿಸಬಹುದು

0 5

ಜಗತ್ತಿನಲ್ಲಿ ಬಹುತೇಕ ಜನರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಆರ್ಥಿಕ ಸಮಸ್ಯೆ ಎಲ್ಲಾದಕ್ಕೂ ಮೂಲ ಕಾರಣವಾಗಿರುತ್ತದೆ ಈ ಒಂದು ಆರ್ಥಿಕ ಸಮಸ್ಯೆಯಿಂದ ಹೊರಬರಲು ಎಲ್ಲರೂ ಕೂಡ ಅನೇಕ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ, ಆದರೆ ಫಲ ಎಲ್ಲರಿಗೂ ಸಿಗುವುದಿಲ್ಲ ಆದರೆ ನಾವು ಈ ಕೆಳಗೆ ಹೇಳಲಾಗಿರುವ ಒಂದು ಚಿಕ್ಕ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿರುವ ಆರ್ಥಿಕ ಸಮಸ್ಯೆ ದೂರವಾಗಿ ನಿಮ್ಮ ಮನೆಗೆ ಆಷ್ಟ ಐಶ್ವರ್ಯ ಪ್ರಾಪ್ತಿಯಾಗುವುದಂತು ಖಂಡಿತ ಸದಾ ಕಾಲ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಯೂರುತ್ತಾಳೆ.

ಮನೆಯಲ್ಲೇ ಇರುವಂತಹ ಲವಂಗದಿಂದ ಈ ಒಂದು ಚಿಕ್ಕ ಪರಿಹಾರವನ್ನು ಮಾಡುವುದರಿಂದ ನಿಮ್ಮ ಮನೆಯ ಎಲ್ಲ ಸಮಸ್ಯೆಗಳು ಬಗೆಹರಿದು ನಿಮ್ಮ ಮನೆಗೆ ಧನಲಕ್ಷ್ಮಿ ಒಲಿದುಬರುತ್ತಾಳೆ, ಲವಂಗದ ಈ ಒಂದು ಉಪಾಯ ಬದಲಿಸಲಿದೆ ನಿಮ್ಮ ಅದೃಷ್ಟ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಪೂಜೆ ಅಡುಗೆ ಜೊತೆಗೆ ಔಷಧವಾಗಿಯೂ ಲವಂಗವನ್ನು ಬಳಸಲಾಗುತ್ತದೆ. ಲವಂಗ ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರಮಾಡುತ್ತದೆ, ಈ ಲವಂಗದ ಅನೇಕ ಉಪಯೋಗಗಳ ಬಗ್ಗೆ ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ ಅದೇ ರೀತಿ ಮುಖ್ಯವಾಗಿ ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೆ ಈ ಲವಂಗವನ್ನು ಬಳಸಲಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ

ನಾವು ಈ ಕೆಳಗೆ ಹೇಳಲಾಗಿರುವ ಪರಿಹಾರ ಕ್ರಮವನ್ನು ಶನಿವಾರ ಮತ್ತು ಸೋಮವಾರ ಬೆಳಗ್ಗಿನ ಸಮಯದಲ್ಲಿ ನೀವು ಅನುಸರಿಸಬೇಕಾಗುತ್ತದೆ, ಕರ್ಪೂರದ ಜೊತೆಗೆ ಲವಂಗವನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ನಾವು ಮೇಲೆ ಹೇಳಿರುವ ವಾರಗಳಲ್ಲಿ ಬೆಳಗ್ಗಿನ ಸಮಯದಲ್ಲಿ ಹಚ್ಚಿ ಉರಿಸಬೇಕಾಗುತ್ತದೆ ನಂತರ ಇದರಿಂದ ಬರುವ ಬೂದಿಯನ್ನು ನೀವು ನಿಮ್ಮ ಮನೆಗೆ ಸಿಂಪಡಿಸಬೇಕಾಗುತ್ತದೆ ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಿ ಅದೃಷ್ಟ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ

ಹಾಗೆಯೇ ನೀವೆನಾದ್ರೂ ಬೇರೆಯವರಿಂದ ಸಾಲ ಪಡೆದು ಅದನ್ನು ತೀರಿಸಲಾಗದೆ ಒದ್ದಾಡುತ್ತಿದ್ದರೆ ಅಮಾವಾಸ್ಯೆ ಅಥವಾ ಹುಣ್ಣಿಮೆಯ ದಿನ ನೀವು ಹನ್ನೊಂದರಿಂದ ಹನ್ನೆರಡು ಲವಂಗಗಳನ್ನು ಕರ್ಪೂರದ ಜೊತೆಗೆ ಹಚ್ಚಿ ಸಂಕಲ್ಪ ಮಾಡುವುದರಿಂದ ನಿಮ್ಮ ಸಂಕಲ್ಪ ಶೀಘ್ರದಲ್ಲೇ ಸಿದ್ಧಿಸಿ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುವುದರಲ್ಲಿ ಅನುಮಾನವೇ ಇಲ್ಲ

ನೀವೆನಾದ್ರೂ ನಿಮ್ಮ ವ್ಯಾಪಾರ ವ್ಯವಹಾರಗಳ ಬಗ್ಗೆ ಮಾತುಕತೆ ನಡೆಸಲು ಬೇರೆಯವರ ಬಳಿಗೆ ಹೊರಡುತ್ತಿದ್ದರೆ ಆ ಸಮಯದಲ್ಲಿ ಎರಡು ಲವಂಗಗಳನ್ನು ಬಾಯಿಯಲ್ಲಿ ಹಾಕಿಕೊಂಡು ಹೋಗಿ ನಂತರ ಸ್ಥಳಕ್ಕೆ ಹೋದಾಗ ಆ ಲವಂಗಗಳನ್ನು ಉಗಿದು ನಂತರ ನಿಮ್ಮ ವ್ಯಾಪಾರ ವ್ಯವಹಾರಗಳ ಬಗ್ಗೆ ಚರ್ಚಿಸುವುದರಿಂದ ನೀವು ಅಂದುಕೊಂಡಂತೆ ವ್ಯಾಪಾರ ವ್ಯವಹಾರಗಳು ಕೈಗೂಡುತ್ತವೆ.

Leave A Reply

Your email address will not be published.