ವೃದ್ಧೆಯ ಸೇವೆ ಮಾಡಿದ ಆಟೋ ಚಾಲಕ, ಈತನ ನಿಯತ್ತಿಗೆ ವೃದ್ಧೆಯಿಂದ ಸಿಕ್ತು 1ಕೋಟಿ ಗಿಫ್ಟ್

0 1

ಇವತ್ತಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆ ಕಡಿಮೆಯಾಗುತ್ತಿದೆ. ಅಣ್ಣ ತಮ್ಮಂದಿರ ಮದ್ಯೇ ಕುಟುಂಬದವರ ಮದ್ಯೆ ಸರಿಯಾದ ಹೊಂದಾಣಿಕೆ ಇರುವುದಿಲ್ಲ ಇನ್ನು ಸೇವೆ ಮಾಡಿದವರಿಗೆ ಪ್ರತಿ ಫಲ ಕೊಡುವಂತದು ದೂರದ ಮಾತು. ಅಂತಹದರಲ್ಲಿ ಒಡಿಸ್ಸಾದ ಕಟಕ್ ನಲ್ಲಿ ಒಬ್ಬ ವೃದ್ಧೆ ತನಗಾಗಿ ಸೇವೆಸಲ್ಲಿಸಿದ ಆಟೋ ಚಾಲಕನಿಗೆ ಒಂದು ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ. ಹಾಗಾದರೆ ಆ ವ್ಯಕ್ತಿ ಆ ವೃದ್ಧೆಗೆ ಯಾವ ರೀತಿ ಸೇವೆ ಮಾಡಿದ್ದಾನೆ ಆಕೆ ಆತನಿಗೆ ಅಷ್ಟು ದೊಡ್ಡ ಮೊತ್ತದ ಆಸ್ತಿಯನ್ನು ನೀಡಲು ಕಾರಣವೇನು ಎಂಬುದರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತೆವೆ.

ಇಪ್ಪತ್ತೈದು ವರ್ಷ ಸೇವೆ ಮಾಡಿದ ರಿಕ್ಷಾಚಾಲಕರಿಗೆ ವೃದ್ದೆ ಒಂದು ಕೋಟಿ ರೂಪಾಯಿ ದಾನ ಮಾಡಿದ್ದಾಳೆ. ಇದು ತುಂಬಾ ಅಪರೂಪದ ಘಟನೆಯಾಗಿದೆ ತನಗಾಗಿ ಸೇವೆ ಮಾಡಿದವರಿಗೆ ಒಂದು ಕೋಟಿ ರೂಪಾಯಿ ಆಸ್ತಿಯನ್ನು ಕೊಟ್ಟಿದ್ದಾಳೆ. ಚಾಲಕನ ನಿಯತ್ತಿಗೆ ಆ ವೃದ್ಧೆ ತನ್ನ ಆಸ್ತಿಯ ಧಾನವಾಗಿ ಕೊಟ್ಟಿದ್ದಾಳೆ. ತನಗಾಗಿ ನಿಯತ್ತಿನಿಂದ ಇದ್ದವರಿಗೆ ಆಕೆ ಕೊಟ್ಟ ಬೆಲೆ ಇದು.

ಓಡಿಸ್ಸಾದ ಅರವತ್ತೈದು ವರ್ಷದ ಮೀನಾತಿ ಪಟ್ನಾಯಕ್ ತನಗಾಗಿ ಸುಮಾರು ಇಪ್ಪತ್ತೈದು ವರ್ಷದಿಂದ ದುಡಿದ ಆಟೋ ಚಾಲಕನಿಗೆ ಒಂದು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಚಿನ್ನಾಭರಣಗಳನ್ನು ಕೊಟ್ಟಿದ್ದಾರೆ. ಹಾಗಾದರೆ ಆ ವ್ಯಕ್ತಿ ಇವರಿಗೆ ಯಾವ ರೀತಿಯಾಗಿ ಸೇವೆಸಲ್ಲಿಸಿದ್ದಾರೆ ಎಂದರೆ ಆ ವ್ಯಕ್ತಿಯ ಹೆಸರು ಬದ್ದಾಸ್ ಅಮಾಲ್ ಅವರು ಇವರನ್ನು ತಾಯಿಯ ರೂಪದಲ್ಲಿ ಕಾಣುತ್ತಿದ್ದ ಅಮ್ಮ ಎಂದು ಕರೆಯುತ್ತಿದ್ದ.

ಮೀನಾತಿ ಪಟ್ನಾಯಕ್ ಅವರು ಎಲ್ಲಿಗೆ ಹೋಗಬೇಕು ಎಂದರು ಅವನು ಇವರನ್ನು ಪುಲಾರಿಯಲ್ಲಿ ಕರೆದುಕೊಂಡು ಹೋಗುತ್ತಿದ್ದ. ಜೊತೆಗೆ ಅವರ ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಪ್ರತಿಯೊಂದು ಸಮಯದಲ್ಲೂ ಅವನು ಇವರ ಕುಟುಂಬದ ಜೊತೆ ನಿಂತಿರುತ್ತಿದ್ದ. ಕಳೆದ ವರ್ಷ ಎರಡು ಸಾವಿರದ ಇಪ್ಪತ್ತರ ಜನವರಿಯಲ್ಲಿ ಅರವತ್ತೆಂಟು ವರ್ಷದ ಇವರ ಪತಿ ಕ್ಯಾನ್ಸರ್ ಕಾರಣದಿಂದ ಮರಣ ಹೊಂದಿರುತ್ತಾರೆ.

ಕಳೆದ ಜನವರಿಯಲ್ಲಿ ಇವರ ಮೂವತ್ತು ವರ್ಷದ ಮಗಳು ಹೃದಯಾಘಾತದಿಂದ ಸಾವನ್ನಪ್ಪುತ್ತಾಳೆ. ಹಾಗಾಗಿ ಒಬ್ಬಂಟಿಯಾದ ವೃದ್ಧೆಗೆ ಬದ್ದಾಸ್ ಅಮಾಲ್ ಅವರು ಸಮಾಧಾನ ಮಾಡುವುದು ಅವರ ಕುಟುಂಬದವರಂತೆ ಅವರಿಗೆ ಸಹಾಯ ಮಾಡುತ್ತಿರುತ್ತಾರೆ. ಹಾಗಾಗಿ ಆ ವೃದ್ಧೆ ಒಂದು ಬಲವಾದ ನಿರ್ಧಾರವನ್ನು ತೆಗೆದುಕೊಂಡು ತನ್ನ ಮೂರಂತಸ್ತಿನ ಕಟ್ಟಡವನ್ನು ಇವರ ಹೆಸರಿಗೆ ಬರೆಯುತ್ತಾರೆ ಚಿನ್ನಾಭರಣಗಳನ್ನು ಕೊಡುತ್ತಾರೆ.

ಪ್ರಾರಂಭದಲ್ಲಿ ವೃದ್ಧೆಯ ಒಬ್ಬ ಸಹೋದರ ಮೂರು ಜನ ಸಹೋದರಿಯರು ವಿರೋಧ ವ್ಯಕ್ತಪಡಿಸುತ್ತಾರೆ ಆದರೆ ಇವರು ಬಲವಾಗಿ ಪಟ್ಟುಹಿಡಿದು ತನಗೆ ಸೇರಿದ ಆಸ್ತಿಯನ್ನು ನೀಡುವುದಾಗಿ ವಾದ ಮಾಡುತ್ತಾರೆ. ಬದ್ದಾಸ್ ಅಮಾಲ್ ಅವರು ಕೂಡ ಇದನ್ನು ತೆಗೆದುಕೊಳ್ಳುವುದಕ್ಕೆ ಒಪ್ಪುವುದಿಲ್ಲ ನಾನು ನಿಮ್ಮ ಸೇವೆಯನ್ನು ಮಾಡಿರುವುದು ಆಸ್ತಿಪಾಸ್ತಿ ಗಾಗಿ ಅಲ್ಲ ಎಂದು ಹೇಳುತ್ತಾರೆ.

ನೀವು ನನ್ನನ್ನು ಮಗ ಎಂದು ಪರಿಗಣಿಸಿದಿರಿ ನಾನು ನಿಮ್ಮನ್ನು ತಾಯಿ ಎಂದು ಪರಿಗಣಿಸಿದೆ ನಿಮ್ಮ ಸೇವೆ ಮಾಡಿದೆ ಎಂದು ಹೇಳುತ್ತಾರೆ. ಹಾಗಿದ್ದರೂ ಕೂಡ ಮೀನಾತಿ ಪಟ್ನಾಯಕ್ ಅವರು ಒತ್ತಾಯವನ್ನು ಮಾಡಿ ತನ್ನ ಆಸ್ತಿಯನ್ನು ಸಂಪೂರ್ಣವಾಗಿ ಅವರಿಗೆ ಬರೆದುಕೊಡುತ್ತಾರೆ ಇದು ಬಹಳಷ್ಟು ಶ್ಲಾಘನೆಗೆ ಒಳಗಾಗಿದೆ. ಇವತ್ತಿನ ದಿನಗಳಲ್ಲಿ ಇಂತಹ ವಿಶಾಲ ಮನೋಭಾವದ ವ್ಯಕ್ತಿಗಳು ಕಾಣಸಿಗುವುದು ತುಂಬಾ ವಿರಳ.

Leave A Reply

Your email address will not be published.