ರೈತರು ಬೆಳೆ ಬೆಳೆಯುವುದರ ಜೊತೆಗೆ ಕುರಿ, ಕೋಳಿ, ಹಸು, ಕರು, ಮೇಕೆ, ಈ ರೀತಿ ಎಷ್ಟೋ ಜಾನುವಾರುಗಳನ್ನು ಸಾಕಿ ಪಾಲನೆ ಪೋಷಣೆ ಮಾಡುವರು. ಕುರಿ, ಕೋಳಿ ಸಾಕುವ ಜನರಿಗೆ 25 ರಿಂದ 50 ಲಕ್ಷ ರೂಪಾಯಿಗಳ ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ. ರೈತರು ಅರ್ಜಿ ಸಲ್ಲಿಕೆ ಮಾಡಬಹುದು.

ಸರ್ಕಾರ ದೇಶದ ಆರ್ಥಿಕ ಬೆನ್ನೆಲುಬು ಆಗಿರುವ ರೈತರಿಗೆ (farmers) ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಸೌಲಭ್ಯವನ್ನು ಒದಗಿಸಿ ಕೊಡುತ್ತಿದೆ. ಇದಕ್ಕೆ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಈ ಸೌಲಭ್ಯ ಕೊಡಲು ಮುಂದಾಗಿದೆ.

ರಾಜ್ಯದಲ್ಲಿ ವಾಸ ಮಾಡುವ ರೈತರಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ( State Congress government ) ವಿವಿಧ ಪ್ರಮುಖ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ, ಕುರಿ, ಕೋಳಿ ಸಾಕಾಣಿಕೆ ಮಾಡುವವರು 25 ರಿಂದ 50 ಲಕ್ಷ ರೂಪಾಯಿಗಳ ತನಕ ನೆರವು ಪಡೆದುಕೊಳ್ಳಬಹುದು.

2024 NLM scheme ( National live stock mission ) ಈ ಯೋಜನೆ, ವಿಶೇಷವಾಗಿ ರೈತರಿಗೆ ಮತ್ತು ರೈತಾಪಿ ಕುಟುಂಬದವರಿಗಾಗಿ ಮಾತ್ರ ಜಾರಿ ಮಾಡಿರುವ ಯೋಜನೆಯಾಗಿದೆ. ರೈತರು ಅವರ ಹೊಲಗಳಲ್ಲಿ ಬೆಳೆ ಬೆಳೆಯುವುದರೊಂದಿಗೆ ಸ್ವಲ್ಪ ಹಣ ಗಳಿಕೆಗಾಗಿ ಕುರಿ, ಕೋಳಿ, ಹಂದಿ, ಹಸು ಮೊದಲಾದ ಸಾಗಾಣಿಕೆ ಮಾಡುವುದಾದರೆ 25 ರಿಂದ 30 ಲಕ್ಷ ರೂಪಾಯಿಗಳ ಸಹಾಯಧನ ( subsidy ) ವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಮಾಡಲು ಬೇಕಾಗಿರುವ ಡಾಕ್ಯುಮೆಂಟ್ಸ್’ಗಳು ( needed documents ) ಭೂ ದಾಖಲೆ ಅಥವಾ ಪಹಣಿ ಪತ್ರ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ರೈತರ ಹೊಲದ ಜಿಪಿಎಸ್ ( GPS ) ಫೋಟೋ, ಸ್ವಂತ ಭೂಮಿ ಇಲ್ಲದೆ ಇರುವವರು ಬಾಡಿಗೆ ಭೂಮಿ ಪಡೆದಿದ್ದರೆ ಅದರ ಅಗ್ರಿಮೆಂಟ್ ಪೇಪರ್, ತರಬೇತಿ ಪತ್ರ ಅಥವಾ ಅನುಭವ ಹೊಂದಿರುವ ಸ್ವಯಂ ಘೋಷಣ ಪತ್ರ

ಅರ್ಜಿ ಸಲ್ಲಿಸುವುದು ಹೇಗೆ ಎಂದರೆ ( How to apply ) ರೈತರು ಹತ್ತಿರದ ಸೈಬರ್ ಸೆಂಟರ್ ( cyber centre ) ಗೆ ಹೋಗಿ ಅಲ್ಲಿ ಆನ್ಲೈನ್ ಮೂಲಕ ಅಗತ್ಯ ಡಾಕ್ಯುಮೆಂಟ್ಸ್’ಗಳನ್ನು ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ಅವರ ಮೊಬೈಲ್ ಮತ್ತು  ಕಂಪ್ಯೂಟರ್ಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು

https://nlm.udyamimitra.in/ ಇದು National livestock mission ( NLM ) ನ ಅಧಿಕೃತ ವೆಬ್ಸೈಟ್ ಆಗಿದ್ದು. ಈ ವೆಬ್ಸೈಟ್’ಗೆ ಹೋಗಿ, ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಿಗುವ ಸಹಾಯಧನವನ್ನು ಪಡೆದುಕೊಳ್ಳಬಹುದು. ಎಷ್ಟು ದೊಡ್ಡ ಮಟ್ಟದಲ್ಲಿ ಪಶು ಸಂಗೋಪನೆ ಮಾಡುವರೋ ಅದಕ್ಕೆ, ತಕ್ಕಂತೆ ಸಹಾಯಧನ ಸಿಗುತ್ತದೆ. ರೈತರು ಸರ್ಕಾರದಿಂದ ಇದರ ಸದುಪಯೋಗ ಪಡಿಸಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!