ಮದುವೆಯಾಗಿ ಬಹುದಿನದ ನಂತರ ಸಿಹಿ ಸುದ್ದಿ ಹಂಚಿಕೊಂಡ ನಿಖಿಲ್ ದಂಪತಿ

0 0

ದೇವೇಗೌಡರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ನಿಖಿಲ್ ಹಾಗೂ ರೇವತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕನ್ನಡ ಚಿತ್ರರಂಗದ ಯುವರಾಜ್ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ತಂದೆ ತಾಯಿ ಆಗುತ್ತಿರುವ ಸಂಭ್ರಮದಲ್ಲಿ ಇದ್ದಾರೆ. ಪತ್ನಿ ಹುಟ್ಟುಹಬ್ಬಕ್ಕೆ ನಿಖಿಲ್ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಇದೇ ವೇಳೆ ರೇವತಿ 5 ತಿಂಗಳ ಗರ್ಭಿಣಿ ಎಂದು ಮಾಧ್ಯಮಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಖಚಿತಪಡಿಸಿದ್ದಾರೆ. ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ, ಏಪ್ರಿಲ್ 17, 2020ರಂದು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಬಿಡದಿ ತೋಟದ ಮನೆಯಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನು ಇತ್ತೀಚೆಗೆ ಅಷ್ಟೇ ಒಂದು ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ನಿಖಿಲ್ ಕುಮಾರಸ್ವಾಮಿ ಈ ವಿಶೇಷ ಸಂದರ್ಭದಲ್ಲಿ ಪತ್ನಿಗಾಗಿ ಸುಂದರವಾದ ಪತ್ರವೊಂದನ್ನು ಬರೆದಿದ್ದಾರೆ. ವಿವಾಹದ ಫೋಟೋಗಳನ್ನು ಇನ್‌ಸ್ಟಗ್ರಾಂನಲ್ಲಿ ಶೇರ್ ಮಾಡಿ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸರಿಯಾಗಿ ಒಂದು ವರ್ಷದ ಹಿಂದೆ ಈ ದಿನ ನೀವು ನನ್ನ ಬದುಕಿಗೆ ಬಂದಿರಿ. ಅಲ್ಲಿಂದ ಇಲ್ಲಿಗೆ ನಮ್ಮ ಬದುಕಿನಲ್ಲಿ ಬಹಳಷ್ಟು ಮರೆಯಲಾಗದ ಸುಂದರ ಕ್ಷಣಗಳು ಬಂದು ಹೋಗಿವೆ. ನಾವಿಬ್ಬರೂ ನಮ್ಮಿಬ್ಬರನ್ನು ಕಂಡುಕೊಂಡಿದ್ದಕ್ಕೆ ಅದೃಷ್ಟಶಾಲಿಗಳು ಎಂದು ಬರೆದುಕೊಂಡಿದ್ದರು. ಬದುಕು ನೇರವಾದ ರಸ್ತೆ ಅಲ್ಲ ಎಂಬುದು ಅರಿವಾಗಿದೆ. ಅಲ್ಲಿ ಬಹಳಷ್ಟು ತಡೆಗಳಿವೆ. ನಾನು ಸರಾಗವಾಗಿ ಪ್ರಯಾಣಿಸುತ್ತಿರುವುದಕ್ಕೆ ನೀವೇ ಕಾರಣ ಎಂದಿದ್ದಾರೆ. ಹೆಣ್ಣಾಗಿ ಹುಟ್ಟುವುದು ಸುಲಭವಲ್ಲ. ನಾವು ನಮ್ಮ ಗುರಿಗಳನ್ನು ತಲುಪುತ್ತೇವೆ, ಸಾಧಿಸುತ್ತೇವೆ ಮತ್ತು ಕುಟುಂಬವನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರಿಸುತ್ತೇವೆ ಎಂದು ಖಚಿತಪಡಿಸಿಕೊಳ್ಳಲು ನೀವು ಮಾಡುವ ತ್ಯಾಗದ ಪ್ರಮಾಣವು ಪ್ರಶಂಸನೀಯಕ್ಕಿಂತ ಹೆಚ್ಚಾಗಿದೆ ಎಂದಿದ್ದಾರೆ. ಸಿಂಪಲ್ ಆಗಿರೋ ಸ್ಯಾಂಡಲ್‌ವುಡ್ ಕಪಲ್ ತೋರಿಕೆಗಿಂತ ಚಿಕ್ಕಪುಟ್ಟ ವಿಚಾರಗಳಲ್ಲೇ ಖುಷಿ ಕಾಣುತ್ತಾ ಖುಷಿಯಾಗಿದ್ದರು ನಿಖಿಲ್ ಹಾಗೂ ರೇವತಿ ಇಬ್ಬರೂ.

ರೇವತಿ ಅವರಿಗೆ ಈಗ ಐದು ತಿಂಗಳಾಗಿದ್ದು, ಹೊಸ ಅತಿಥಿಯಾ ಆಗಮನಕ್ಕಾಗಿ ಗೌಡ ಕುಟುಂಬ ತಯಾರಿ ನಡೆಸಿದೆ. ರೇವತಿ ಅವರ ಹುಟ್ಟುಹಬ್ಬದಂದೇ ಈ ಸುದ್ದಿಯನ್ನು ಮಾಧ್ಯದೆದುರು ಕುಮಾರಸ್ವಾಮಿ ಅವರ ಬಹಿರಂಗಪಡಿಸಿದ್ದಾರೆ. ರೇವತಿ ಗರ್ಭಿಣಿಯಾದಾಗಿನಿಂದಲೇ ಪತಿಯೊಂದಿಗೆ ಬಿಡದಿಯ ತೋಟದ ಮನೆಯಲ್ಲೇ ವಾಸವಾಗಿದ್ದಾರೆ. ಇಂದು ರೇವತಿ ಅಂಗವಿಕಲರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಂಗವಿಕಲರಿಗೆ ಬಟ್ಟೆ ಹಾಗೂ ಸಿಹಿ ನೀಡುವ ಮೂಲಕ ನಿಖಿಲ್​ ರೇವತಿ ಸಂಭ್ರಮಿಸಿದ್ದಾರೆ. ನಿಖಿಲ್ ರೇವತಿ ಮದುವೆ ಮೆಹಂದಿ ಸಮಯದಲ್ಲಿ ಸೆರೆ ಹಿಡಿದ ಪೋಟೋ ಹಂಚಿಕೊಂಡ ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ‘ಹ್ಯಾಪಿ ಬರ್ತಡೇ ಮೈ ಲವ್’ ಎಂದು ಬರೆದುಕೊಂಡಿದ್ದಾರೆ. ನಿಖಿಲ್ ತಂದೆಯಾಗುತ್ತಿರುವ ವಿಚಾರ ತಿಳಿದು, ಗೌಡರ ಕುಟುಂಬಕ್ಕೆ ಹೊಸ ಅತಿಥಿಯ ಆಗಮನ ಆಗುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ ಶುಭ ಹಾರೈಸಿದ್ದಾರೆ ಕೂಡ.

Leave A Reply

Your email address will not be published.