ಕನ್ನಡ ಚಿತ್ರರಂಗದ ಅದ್ಭುತ ಹಾಸ್ಯ ಕಲಾವಿದರಲ್ಲಿ ಬುಲೆಟ್ ಪ್ರಕಾಶ್ ಅವರು ಕೂಡ ಒಬ್ಬರು. ಅವರು ನಮ್ಮೊಂದಿಗಿಲ್ಲ ಎನ್ನುವುದು ದುಃಖದ ವಿಷಯ ಆದರೆ ಅವರ ಮಗ ಸಿನಿಮಾ ರಂಗಕ್ಕೆ ಬರಲು ಸಜ್ಜಾಗಿದ್ದಾನೆ. ಬುಲೆಟ್ ಪ್ರಕಾಶ್ ಅವರ ಬಗ್ಗೆ ಅವರ ಮಗ ಹೇಳಿರುವ ಕೆಲವು ಮಾತುಗಳನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದ ಅದ್ಭುತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾನೆ. ರಕ್ಷಕ್ ಅವರಿಗೆ ಅವರ ತಂದೆ ಇರುವಾಗ ಡೆಡಿಕೇಷನ್ ಬಗ್ಗೆ ಗಮನಹರಿಸು. ಜನರು ಒಳ್ಳೇಯದು ಮಾಡಿದರೂ ಮಾತನಾಡುತ್ತಾರೆ, ಕೆಟ್ಟದ್ದನ್ನು ಮಾಡಿದರೂ ಮಾತನಾಡುತ್ತಾರೆ. ಯಾರು ಏನೇ ಮಾತನಾಡಿದರೂ ತಲೆಕೆಡಿಸಿಕೊಳ್ಳದೆ ಪ್ರಯತ್ನವನ್ನು ಮಾಡುತ್ತಿರಬೇಕು. ನಿನ್ನ ಪ್ರಯತ್ನ ಪ್ರಾಮಾಣಿಕವಾಗಿ ಇದ್ದಾಗ ನೀನು ಯಾವ ಲೆವೆಲ್ ಗೆ ರೀಚ್ ಆಗಬೇಕೊ ಅಲ್ಲಿಗೆ ರೀಚ್ ಆಗುತ್ತೀಯಾ ಎಂದು ಹೇಳುತ್ತಿದ್ದರು. ಬುಲೆಟ್ ಪ್ರಕಾಶ್ ಅವರಿಗೆ ಆಕ್ಟ್ ಮಾಡಲು ಆಗುವುದಿಲ್ಲ, ಡೈಲಾಗ್ಸ್ ಮರೆತು ಹೋಗುತ್ತದೆ, ನಿಂತುಕೊಳ್ಳಲು ಆಗುವುದಿಲ್ಲ ಅವರಿಗೆ ಶಕ್ತಿ ಇಲ್ಲ ಎಂದು ಅಪಪ್ರಚಾರ ಮಾಡಿದ್ದರು ರಕ್ಷಕ್ ನನ್ನ ತಂದೆ ಪೊಗರು ಸಿನಿಮಾದ ಶೂಟಿಂಗ್ ನಲ್ಲಿ ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಯುತ್ತಿರುವಾಗ ಬಿಸಿಲಿನಲ್ಲಿ ಒಂದು ಪೇಜ್ ಡೈಲಾಗ್ಸ್ ಒಂದೇ ಶಾಟ್ ನಲ್ಲಿ ಹೇಳಿದ್ದಾರೆ. ಬುಲೆಟ್ ಪ್ರಕಾಶ್ ಅವರಿಗಿರುವ ಶಕ್ತಿ ಇಂದಿಗೂ ಇದೆ ಮುಂದೆ ನಾನು ಅವರ ಶಕ್ತಿಯನ್ನು ಉಳಿಸಿಕೊಂಡು ಹೋಗುತ್ತೇನೆ ಎಂದು ರಕ್ಷಕ್ ಅಭಿಮಾನಿಗಳಿಗೆ ಹೇಳಿದ್ದಾನೆ.

ಬುಲೆಟ್ ಪ್ರಕಾಶ್ ಅವರಿಗಾದ ಅಪಪ್ರಚಾರದ ಬಗ್ಗೆ ರಕ್ಷಕ್ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರ ಬಗ್ಗೆ ಅಪಪ್ರಚಾರ ಮಾಡುತ್ತಾರೆ ಹಾಗಿರುವಾಗ ಬುಲೆಟ್ ಪ್ರಕಾಶ್ ಅವರ ಬಗ್ಗೆಯೂ ಅಪಪ್ರಚಾರ ಮಾಡಿದ್ದಾರೆ. ಒಬ್ಬ ವ್ಯಕ್ತಿ ಯಶಸ್ಸಿನತ್ತ ಸಾಗುತ್ತಿದ್ದಾನೆ ಎಂದರೆ ಅವನನ್ನು ಕಾಲೆಳೆಯುತ್ತಾರೆ. ಕೆಲವರಿಗೆ ಬುಲೆಟ್ ಪ್ರಕಾಶ್ ಅವರನ್ನು ಬೀಳಿಸಬೇಕು ಅಂತ ಇತ್ತು ಬೀಳಿಸಿದ್ದಾರೆ ಕೊನೆಗೆ ಮುಗಿಸಬೇಕು ಅಂತ ಇತ್ತು ಮುಗಿಸಿದ್ದಾರೆ ಈಗ ಅದರ ಬಗ್ಗೆ ಮಾತು ಬೇಡ ಎಂದು ರಕ್ಷಕ್ ತಮ್ಮ ತಂದೆಯ ಬಗ್ಗೆ ದುಃಖದಿಂದ ಹೇಳಿದರು. ರಕ್ಷಕ್ ನನ್ನ ತಂದೆ ನನ್ನನ್ನು ಸಿನಿಮಾದಲ್ಲಿ ನಟಿಸಲು ಸಿದ್ಧಗೊಳಿಸಿದ್ದಾರೆ, ಆನ್ ಸ್ಕ್ರೀನ್ ನಲ್ಲಿ ನನ್ನನ್ನು ಅವರು ನೋಡಲಿಲ್ಲ ಆದರೆ ಆಫ್ ಸ್ಕ್ರೀನ್ ನಲ್ಲಿ ಮಗ ಏನು ಮಾಡುತ್ತಾನೆ ಎಂದು ನೋಡಿದ್ದಾರೆ ಅದು ನನಗೆ ತೃಪ್ತಿ ಇದೆ ಎಂದು ರಕ್ಷಕ್ ಹೇಳಿದನು.

ಬುಲೆಟ್ ಪ್ರಕಾಶ್ ಅವರು ನಮ್ಮೊಂದಿಗೆ ಇಲ್ಲದೆ ಇರುವುದು ಬೇಸರವಾಗುತ್ತದೆ, ಲಾಕ್ ಡೌನ್ ಇರುವುದರಿಂದ ಮನೆಯಲ್ಲಿ ಅವರ ಫೋಟೋಗಳನ್ನು ನೋಡುವುದರಿಂದ ಕಡಿಮೆ ಪ್ರಮಾಣದಲ್ಲಿ ಬೇಸರ ಆಗುತ್ತದೆ ಎಂದು ರಕ್ಷಕ್ ಹೇಳಿದನು. ಬುಲೆಟ್ ಪ್ರಕಾಶ್ ಅವರಿಗೆ ಪ್ರತಿದಿನ ನಾನ್ ವೆಜ್ ಊಟ ಬೇಕಿತ್ತು, ಬುಲೆಟ್ ಪ್ರಕಾಶ್ ಅವರು ಹೆಚ್ಚು ಊಟ ಮಾಡುತ್ತಾರೆ ಎಂಬ ಅಪಪ್ರಚಾರ ಕೇಳಿಬರುತ್ತಿತ್ತು ಆದರೆ ಅವರು ಕಡಿಮೆ ಊಟ ಮಾಡುತ್ತಿದ್ದರು ಎಂದು ರಕ್ಷಕ್ ಹೇಳಿಕೊಂಡಿದ್ದಾರೆ. ಬುಲೆಟ್ ಪ್ರಕಾಶ್ ಅವರ ಹಾಗೂ ರಕ್ಷಕ್ ತಂದೆ-ಮಗನ ಸಂಬಂಧ ತುಂಬಾ ಅನ್ಯೋನ್ಯವಾಗಿತ್ತು. ಇಬ್ಬರೂ ಎಲ್ಲಾ ವಿಷಯಗಳನ್ನು ಒಬ್ಬರಿಗೊಬ್ಬರು ಷೇರ್ ಮಾಡಿಕೊಳ್ಳುತ್ತಿದ್ದರು. ಅವರು ಮನೆಯಲ್ಲಿ ಸ್ತ್ರಿಕ್ಟ್ ಆಗಿರುವ ಸಮಯದಲ್ಲಿ ಸ್ತ್ರಿಕ್ಟ್ ಆಗಿರುತ್ತಿದ್ದರು. ಮಗನ ಹತ್ತಿರ ನೀನು ಈಗ ಕಷ್ಟಪಟ್ಟರೆ ಮುಂದೆ ಸುಖದಲ್ಲಿ ಇರುತ್ತೀಯಾ ಎಂದು ಹೇಳುತ್ತಿದ್ದರು. ಬುಲೆಟ್ ಪ್ರಕಾಶ್ ಅವರು ಮನೆಯಲ್ಲಿ ಬಹಳ ಕಾಮಿಡಿ ಮಾಡುತ್ತಾ ಇರುತ್ತಿದ್ದರು ಎಂದು ರಕ್ಷಕ್ ತಮ್ಮ ತಂದೆಯ ಬಗ್ಗೆ ಅಭಿಮಾನದಿಂದ ಹೇಳಿಕೊಂಡರು.

Leave a Reply

Your email address will not be published. Required fields are marked *