ವಾಹನಗಳಿಗೆ ಅಡ್ಡಗಟ್ಟಿ ದಂಡ ವಿಧಿಸುತ್ತಿದ್ದ ಪೊಲೀಸರಿಗೂ ಹೊಸ ನಿಯಮ ಜಾರಿ

0 4

ವಾಹನ ಸವಾರರಿಗೆ ಕೆಲವು ಟ್ರಾಫಿಕ್ ಪೊಲೀಸ್ ರಿಂದ ಸಮಸ್ಯೆಗಳಾಗುತ್ತಿತ್ತು. ಇದೀಗ ವಾಹನ ಸವಾರರಿಗೆ ಗೃಹ ಸಚಿವರಿಂದ ಸಿಹಿ ಸುದ್ದಿಯೊಂದು ದೊರೆತಿದೆ. ಹಾಗಾದರೆ ವಾಹನ ಸವಾರರಿಗೆ ಗೃಹ ಸಚಿವರು ನೀಡಿರುವ ಸಿಹಿ ಸುದ್ದಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ವಾಹನ ಸವಾರರಿಗೆ ಗೃಹ ಸಚಿವರಾದ ಆರಗ ಜ್ಞಾನೆಂದ್ರ ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟ್ರಾಫಿಕ್ ಸ್ಪಾಟ್ ಫೈನ್ ಕ್ಯಾನ್ಸಲ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ರಾಜ್ಯಾದ್ಯಂತ ವಾಹನಗಳನ್ನು ಅಡ್ಡಗಟ್ಟಿ ಸ್ಪಾಟ್ ಫೈನ್ ಕಲೆಕ್ಷನ್ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ

ಅಲ್ಲದೆ ಟ್ರಾಫಿಕ್ ಪೊಲೀಸರು ಬಳಸುತ್ತಿದ್ದ ಮಷೀನ್ ಗಳನ್ನು ಆಯಾ ಪೊಲೀಸ್ ಠಾಣೆಗಳಲ್ಲಿ ಸರಂಡರ್ ಮಾಡಲು ಸೂಚನೆ ನೀಡಿದ್ದಾರೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ಪಿಡಿಎ ಮಷೀನ್ ಗಳನ್ನು ಬಳಸಿ ಸ್ಪಾಟ್ ಫೈನ್ ಕಲೆಕ್ಷನ್ ಮಾಡುತ್ತಿದ್ದರು.

ಇತ್ತೀಚೆಗೆ ಪಿಡಿಎ ಮಷೀನ್ ಗಳ ವಿರುದ್ಧ ಸಾರ್ವಜನಿಕರಿಂದ ದೂರು ಬರುತ್ತಿತ್ತು. ಫೈನ್ ಕಟ್ಟಿದರೂ ಮಷೀನ್ ಗಳು ಹಿಂದಿನ ದಾಖಲೆಯನ್ನೆ ತೋರಿಸುತ್ತಿದ್ದವು. ಈ ಕುರಿತು ಮಾಹಿತಿಯನ್ನು ಪಡೆದಿದ್ದ ಗೃಹ ಸಚಿವ ಆರಜ ಜ್ಞಾನೇಂದ್ರ ಅವರು ಇದೀಗ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟ್ರಾಫಿಕ್ ಸ್ಪಾಟ್ ಫೈನ್ ಕ್ಯಾನ್ಸಲ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಟ್ರಾಫಿಕ್ ಜಂಟಿ ಆಯುಕ್ತ ರವಿಕಾಂತೇಗೌಡ ತಾತ್ಕಾಲಿಕವಾಗಿ ಪಿಡಿಎ ಮಷೀನ್ ಗಳ ಮೂಲಕ ಹಾಕುವ ಫೈನ್ ನಿಲ್ಲಿಸಲಾಗಿದ್ದು, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಡಿಜಿಟಲ್ ಕ್ಯಾಮೆರಾದಲ್ಲಿ ಸೆರೆಯಾಗಲಿದೆ ಎಂದು ಎಚ್ಚರಿಸಿದರು.

ಅವರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಫೈನ್ ರೆಸಿಪ್ಟ್ ಮನೆಗೆ ಬರಲಿದೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಈಗಲಾದರೂ ವಾಹನ ಸವಾರರು ನೆಮ್ಮದಿಯಿಂದ ವಾಹನ ಓಡಿಸಬಹುದು. ಟ್ರಾಫಿಕ್ ಪೊಲೀಸ್ ರು ಇನ್ನು ಮುಂದೆ ವಾಹನ ಸವಾರರ ಮೇಲೆ ಅನಾವಶ್ಯಕವಾಗಿ ದಂಡ ಹಾಕುವಂತಿಲ್ಲ. ವಾಹನ ಸವಾರರು ನಿಯಮಗಳನ್ನು ತಪ್ಪದೆ ಪಾಲಿಸಬೇಕು, ಅದೇ ರೀತಿ ಟ್ರಾಫಿಕ್ ಪೊಲೀಸ್ ರು ಕೂಡ ತಮ್ಮ ನಿಯಮಗಳನ್ನು ಸರಿಯಾಗಿ ಪಾಲಿಸಬೇಕು.

Leave A Reply

Your email address will not be published.