ಸಾಮಾನ್ಯವಾಗಿ ಎಲ್ಲರೂ ಮನೆ ಕಟ್ಟುವ ಆಸೆಯನ್ನು ಹೊಂದಿರುತ್ತಾರೆ ಆದರೆ ಮನೆ ಕಟ್ಟುವುದು ಸುಲಭವಾಗಿಲ್ಲ. ಹೀಗಿರುವಾಗ ಮನೆ ಕಟ್ಟಲು ಸರ್ಕಾರದಿಂದ ಸೌಲಭ್ಯ ಸಿಗಲಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಈಗಿನ ಕಾಲದಲ್ಲಿ ನಮ್ಮದೆ ಸ್ವಂತ ಮನೆಯನ್ನು ಕಟ್ಟುವುದು ಎಷ್ಟು ಕಷ್ಟ ಎಂಬ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ ಎಂದು ಹೇಳಬಹುದು. ಜೀವನದಲ್ಲಿ ಒಂದು ಮನೆಯನ್ನು ಕಟ್ಟಬೇಕು ಎಂದರೆ ನಾವು ಲಕ್ಷಗಟ್ಟಲೆ ಸಾಲವನ್ನು ಮಾಡಬೇಕಾಗಿದೆ. ಇನ್ನು ಶ್ರೀಮಂತರು ಯಾವುದೆ ಸಮಸ್ಯೆ ಇಲ್ಲದೆ ಮನೆಯನ್ನು ಕಟ್ಟುತ್ತಾರೆ ಆದರೆ ಬಡವರು ಒಂದು ಚಿಕ್ಕದಾದ, ಚೊಕ್ಕದಾದ ಮನೆಯನ್ನು ಕಟ್ಟಬೇಕು ಎಂದರೆ ಬ್ಯಾಂಕಿನಲ್ಲಿ ಅಥವಾ ಇತರೆ ಕಡೆಗಳಲ್ಲಿ ಸಾಲವನ್ನು ಮಾಡುತ್ತಾರೆ.

ಇನ್ನು ನಮ್ಮ ದೇಶದಲ್ಲಿ ಈಗಾಗಲೆ ಬಡವರಿಗಾಗಿ ಹಲವು ಯೋಜನೆಗಳು ಜಾರಿಯಲ್ಲಿದೆ. ಸರ್ಕಾರ ಇನ್ನೂ ಕೂಡ ಕೆಲವು ಯೋಜನೆಯನ್ನು ಜಾರಿಗೆ ತರುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ಇದೀಗ ದೇಶದಲ್ಲಿ ಇನ್ನೊಂದು ಹೊಸ ಯೋಜನೆ ಜಾರಿಗೆ ಬಂದಿದ್ದು ಇದು ಜನರ ಖುಷಿಗೆ ಕಾರಣವಾಗಿದೆ.

ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ರಾಜ್ಯದ ಜನರಿಗೆ ಬಂಪರ್ ಗುಡ್ ನ್ಯೂಸ್ ನೀಡಿದ್ದಾರೆ. ಪರಿಶಿಷ್ಟ ಜಾತಿಯ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ನೆರವನ್ನು ರಾಜ್ಯ ಸರ್ಕಾರವು 1.70 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ ನಿರ್ಧಾರವನ್ನು ಮಾಡಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.

ಈಗ ಪರಿಶಿಷ್ಟ ಜಾತಿಯ ಬಡ ಕುಟುಂಬದವರಿಗೆ ಮನೆ ಕಟ್ಟುವುದಕ್ಕೆ ನೀಡಲಾಗುತ್ತಿರುವಂತಹ ನೆರವು 1.70 ಲಕ್ಷ ಯಾವುದಕ್ಕೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ನೆರವನ್ನು 5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು. ಪರಿಶಿಷ್ಟ ಜಾತಿಯ ಬಡ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷಕ್ಕೆ ನೆರವು ಹೆಚ್ಚಿಸುವಂತೆ ಪ್ರಸ್ತಾವನೆಗೆ ಅನುಮತಿ ಕೋರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶೀಘ್ರದಲ್ಲೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಮತ್ತು ಆ ಬಳಿಕ ಮನೆ ಹೆಚ್ಚಳದ ನೆರವಿನ ಆದೇಶವನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

ಕೊರೋನ ಲಾಕ್ ಡೌನ್ ನಂತರದ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ರಾಜ್ಯ ಸರ್ಕಾರವು ಒಂದು ವರ್ಷಗಳ ಕಾಲ ಇಲಾಖೆಯಲ್ಲಿ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದು ಅವರು ಹೇಳಿದರು. ಇನ್ನು ಸದ್ಯ ಪರಿಶಿಷ್ಟ ಜಾತಿಯ ಬಡ ಕುಟುಂಬಗಳಿಗೆ ಈ ಯೋಜನೆ ಜಾರಿಯಲ್ಲಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ವರ್ಗದವರಿಗೆ ಜಾರಿಗೆ ಬರುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಹೊಸ ಯೋಜನೆ ನಿಜಕ್ಕೂ ಬಹಳ ಉಪಯುಕ್ತವಾಗಿದ್ದು ಎಲ್ಲರಿಗೂ ವಸತಿ ಭಾಗ್ಯ ದೊರೆಯಲಿದೆ.

Leave a Reply

Your email address will not be published. Required fields are marked *