Ultimate magazine theme for WordPress.

ನೀವೇನಾದ್ರು ಹೊಸದಾಗಿ ಸೈಟ್ ಖರೀದಿಸುತ್ತೀರಾ, ಈ ದಾಖಲೆಗಳ ಬಗ್ಗೆ ಗಮನವಿರಲಿ

0 10

ನಗರ ಪ್ರದೇಶದಲ್ಲಿ ಸೈಟ್ ಖರೀದಿಸುವುದು ಸುಲಭವಲ್ಲ. ಸೈಟ್ ಖರೀದಿಸುವಾಗ ಹಲವು ದಾಖಲೆಗಳನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಸೈಟ್ ಖರೀದಿಸುವಾಗ ಯಾವ ದಾಖಲೆಗಳನ್ನು ಪರಿಶೀಲಿಸಬೇಕು ಹಾಗೂ ಯಾವ ರೀತಿಯಲ್ಲಿ ಮೋಸ ಮಾಡುತ್ತಾರೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ.

ಒಂದೆ ಸೈಟ್ ಸುಮಾರು ಜನರಿಗೆ ಮಾರಾಟ ಮಾಡಿರುತ್ತಾರೆ ಅಂತಹ ಸೈಟ್ ಅನ್ನು ಖರೀದಿ ಮಾಡಿದರೆ ಮೋಸ ಹೋಗುವ ಸಂಭವ ಇರುತ್ತದೆ ಈ ಬಗ್ಗೆ ನ್ಯಾಯಾಲಯದಲ್ಲಿ ದೂರು ನೀಡಿದರೆ ಸುಮಾರು ವರ್ಷಗಳು ಕಳೆಯುತ್ತದೆ ಹೊರತು ನ್ಯಾಯ ಸಿಗುವುದಿಲ್ಲ. ಕೆಲವರು ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡುತ್ತಾರೆ ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. ಸರ್ಕಾರಿ ಸೌಲಭ್ಯಗಳಿಗೆ ಇರುವ ಜಾಗವನ್ನು ಮಾರಾಟ ಮಾಡುತ್ತಾರೆ.

ಅಂತ ಸೈಟ್ ಖರೀದಿ ಮಾಡಿದರೆ ಮುಂದೊಂದು ದಿನ ಸರ್ಕಾರ ಜಾಗವನ್ನು ಮಟ್ಟುಗೋಲು ಹಾಕುವ ಸಂಭವವಿರುತ್ತದೆ. ರಸ್ತೆ ಅಳತೆಯನ್ನು ಸೈಟ್ ನ ಅಳತೆಯೊಂದಿಗೆ ಸೇರಿಸಿ ಸೈಟ್ ನ ಅಳತೆ ಜಾಸ್ತಿ ಇದೆ ಎಂದು ನಂಬಿಸಿ ಮಾರಾಟ ಮಾಡುವವರು ಇರುತ್ತಾರೆ. ಸೈಟ್ ಖರೀದಿಸುವಾಗ ರಾಜಕಾಲುವೆ, ರೋಡ್, ಕಾಲ್ದಾರಿ, ಚರಂಡಿ ಮರು ಮಾರ್ಗ, ರಸ್ತೆ ಅಗಲೀಕರಣ ಈ ಎಲ್ಲಾ ವಿಷಯಗಳ ಬಗ್ಗೆ ಸರಿಯಾಗಿ ಪರಿಶೀಲಿಸಬೇಕು.

ಕೃಷಿಭೂಮಿಯನ್ನು ವಸತಿ ಪ್ರದೇಶ ಎಂದು ಹೇಳಿಕೊಂಡು ಮಾರಾಟ ಮಾಡುತ್ತಾರೆ. ಪೂರ್ಣ ಹಕ್ಕು ಹೊಂದಿರದ ಆಸ್ತಿಗಳನ್ನು ಮಾರಾಟ ಮಾಡುವ ಸಲುವಾಗಿ ಸೈಟ್ ನ ನಕಲಿ ದಾಖಲೆಗಳನ್ನು ಪರಿಶೀಲನೆಗೆ ಕೊಡಬಹುದು ಆದರೆ ಅವು ನಕಲಿ ದಾಖಲೆಗಳೆಂದು ಸುಲಭವಾಗಿ ಗೊತ್ತಾಗುವುದಿಲ್ಲ. ದಲ್ಲಾಳಿಗಳು ದುಬಾರಿ ಹಣವನ್ನು ವಸೂಲಿ ಮಾಡಬಹುದು. ಲೇಔಟ್ ಮಾಡದೆ ಕೃಷಿಭೂಮಿಯನ್ನು ನಿವೇಶನ ಮಾಡಿ ಮಾರಾಟ ಮಾಡಬಹುದು. ಸ್ಥಳೀಯ ಸಂಸ್ಥೆಗಳು ಅಂದರೆ ಪುರಸಭೆ, ನಗರಸಭೆ, ನಗರಪಾಲಿಕೆಗಳ ಅನುಮತಿ ಇಲ್ಲದೆ ವ್ಯವಹಾರ ಮಾಡುವುದು.

ಸ್ಥಳೀಯ ವಿದ್ಯುತ್ ಕಛೇರಿಯಿಂದ ಅನುಮತಿ ಪಡೆಯದೆ ಮಾರಾಟ ಮಾಡುತ್ತಿರುತ್ತಾರೆ. ನಕಲಿ ಮರಣ ಪ್ರಮಾಣ ಪತ್ರವನ್ನು ತೋರಿಸಿ ವಂಶಾವಳಿ ಪ್ರಮಾಣ ಪತ್ರದಿಂದ ಉತ್ತರಾಧಿಕಾರಿಯನ್ನು ತೆಗೆದುಹಾಕುತ್ತಾರೆ ಇದರಿಂದ ಖರೀದಿಯ ನಂತರ ಕುಟುಂಬದವರು ಕೇಸ್ ಹಾಕುವ ಸಂಭವವಿರುತ್ತದೆ. ಕೆಲವೊಮ್ಮೆ ತೋರಿಸುವ ಸೈಟ್ ಒಂದಾಗಿದ್ದರೆ ಮಾರಾಟಮಾಡುವ ಸೈಟ್ ಬೇರೆಯಾಗಿರುತ್ತದೆ.

ಸೈಟ್ ಖರೀದಿ ಮಾಡುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಅಥವಾ ಮಹಾನಗರ ಪಾಲಿಕೆ ಅಡಿಯಲ್ಲಿ ಸೈಟ್ ಬರುತ್ತದೆಯೊ ಇಲ್ಲವೊ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಲೇಔಟ್ ಮ್ಯಾಪ್ ಅನ್ನು ಪರಿಶೀಲಿಸಬೇಕು. ಸೈಟ್ ಇಲ್ಲಿಯವರೆಗೂ ಯಾರಿಂದ ಯಾರು ಯಾರಿಗೆ ಮಾರಾಟವಾಗಿದೆ ಎಂಬುದನ್ನು ಒಳಗೊಂಡಿರುವ ಮ್ಯುಟೇಷನ್ ರಿಪೋರ್ಟ್ ಪರಿಶೀಲಿಸಬೇಕು.

ಎನ್ಕಂಬ್ರೆನ್ಸ್ ಸರ್ಟಿಫಿಕೇಟ್ ಅನ್ನು ಪರಿಶೀಲಿಸಬೇಕು ಇದರಿಂದ ಆ ಸೈಟ್ ಮೇಲೆ ಎಷ್ಟು ಸಾಲವಿದೆ ಎಂಬುದನ್ನು ತಿಳಿಯಬಹುದು. ನಿವೇಶನದ ಚಕ್ಕುಬಂದಿಯನ್ನು ಪರಿಶೀಲಿಸಬೇಕು. ನಿವೇಶನದ ಅಕ್ಕಪಕ್ಕದ ಜಮೀನು ಯಾರ ಹೆಸರಿಗಿದೆ ಎಂಬುದನ್ನು ತಿಳಿದಿರಬೇಕು. ನಿವೇಶನದ ಖರೀದಿ ಪತ್ರವನ್ನು ಪರಿಶೀಲಿಸಬೇಕು ಇದರಿಂದ ಆ ನಿವೇಶನದ ಹಿನ್ನೆಲೆ ತಿಳಿಯುತ್ತದೆ. ಭೂ ಪರಿವರ್ತನೆ ಆದೇಶ ಪತ್ರವನ್ನು ಪರಿಶೀಲಿಸಬೇಕು. ಖರೀದಿಸುತ್ತಿರುವ ಸೈಟ್ ಅಗ್ರಿಕಲ್ಚರ್ ಲ್ಯಾಂಡ್ ಅಥವಾ ನಾನ್ ಅಗ್ರಿಕಲ್ಚರ್ ಲ್ಯಾಂಡ್ ಆಗಿದೆಯಾ ಎಂಬುದನ್ನು ತಿಳಿಯಬೇಕು. ಟ್ಯಾಕ್ಸ್ ಪೇಡ್ ರಿಸೀಪ್ಟ್ ಅನ್ನು ಪರಿಶೀಲಿಸಬೇಕು.

ಈ ಖಾತಾ ಸರ್ಟಿಫಿಕೇಟ್ ಅನ್ನು ಪರಿಶೀಲಿಸಬೇಕು ಇದನ್ನು ಆನ್ಲೈನ್ ನಲ್ಲಿ ಪರಿಶೀಲಿಸಬಹುದು ಇದರಿಂದ ಆಸ್ತಿಗೆ ಸಂಬಂಧಿಸಿದ ಮಾಹಿತಿ ತಿಳಿಯುತ್ತದೆ. ಎ ಖಾತಾ ಮತ್ತು ಬಿ ಖಾತಾ ಸರ್ಟಿಫಿಕೇಟ್ ಪರಿಶೀಲಿಸಬೇಕು. ಎ ಖಾತಾ ಆಸ್ತಿ ತೆರಿಗೆಯನ್ನು ಸರಿಯಾಗಿ ಪಾವತಿಸಿ ಕಾನೂನುಬದ್ಧವಾಗಿ ಆ ಸೈಟಿಗೆ ಆಸ್ತಿಯ ಮಾಲೀಕತ್ವದ ದಾಖಲೆಯಾಗಿದೆ ಆದ್ದರಿಂದ ಎಖಾತಾ ಹಾಗೂ ಬಿಖಾತಾ ಸರ್ಟಿಫಿಕೇಟ್ ಹೊಂದಿರುವ ನಿವೇಶನವನ್ನು ಖರೀದಿ ಮಾಡಬಹುದು.

ಸೈಟ್ ನ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಮುನ್ಸಿಪಲ್ ಕಾರ್ಪೋರೇಷನ್ ಗೆ ಭೇಟಿ ನೀಡಿ ಸಿವಿಲ್ ಎಂಜಿನಿಯರ್ ಅವರನ್ನು ಕರೆದುಕೊಂಡು ಹೋಗಿ ಪರಿಶೀಲನೆ ಮಾಡಬೇಕು. ನಾಗರಿಕರು ಸೈಟ್ ಖರೀದಿಸುವಾಗ ಮೂಲಭೂತ ಸೌಲಭ್ಯಗಳಾದ ನೀರು, ರಸ್ತೆ, ಚರಂಡಿ, ವಿದ್ಯುತ್ ಸಂಪರ್ಕ ಮೊದಲಾದ ಲಭ್ಯತೆಗಳನ್ನು ತಿಳಿಯಬೇಕು. ನಿವೇಶನದ ಹಿನ್ನೆಲೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave A Reply

Your email address will not be published.