ಸಗಣಿಯಿಂದ ತಿಂಗಳಿಗೆ ಲಕ್ಷ ಲಕ್ಷ ಆಧಾಯ ಗಳಿಸುವ ಹೊಸ ಬಿಸಿನೆಸ್ ಗೊತ್ತೇ

0 2,258

ಹಿ೦ದೂ ಧರ್ಮ ಅಥವಾ ಹಿ೦ದೂ ಸ೦ಸ್ಕೃತಿಯಲ್ಲಿ ಗೋವಿಗೆ ಹಾಗೂ ಗೋಮಾತೆಯ ಸಗಣಿಗೆ ಅತ್ಯ೦ತ ಪವಿತ್ರವಾದ ಸ್ಥಾನಮಾನವನ್ನು ಕಲ್ಪಿಸಲಾಗಿದ್ದು ಅತ್ಯ೦ತ ಪವಿತ್ರವೆ೦ದು ಪರಿಗಣಿಸಲ್ಪಟ್ಟಿದೆ. ಹಿ೦ದೂ ಧರ್ಮದಲ್ಲಿ ಪ್ರಾಣಿಗಳಿಗೆ ಪ್ರತಿಯಾಗಿ ಗೌರವವನ್ನು ಸಲ್ಲಿಸುವುದ೦ತೂ ಅತ್ಯ೦ತ ಹಳೆಯ ಸ೦ಪ್ರದಾಯವಾಗಿದೆ. ಅದರಲ್ಲೂ ವಿಶೇಷವಾಗಿ ಗೋವನ್ನು ಪವಿತ್ರವಾದ ಜೀವಿಯೆ೦ದು ಹಿಂದೂ ಧರ್ಮಶಾಸ್ತ್ರಗಳಲ್ಲಿ ಪರಿಗಣಿಸಿರಲು ಹಲವಾರು ಕಾರಣಗಳಿವೆ. ಅದೇ ರೀತಿ ಗೋವಿನ ಸಗಣಿಯನ್ನು ಕೂಡಾ ಪವಿತ್ರವೆಂದು ತಿಳಿಯಲಾಗುತ್ತದೆ. ಈ ಸಗಣಿಯಿಂದ ಸಾಕಷ್ಟು ಔಷಧೀಯ ಪ್ರಯೋಜನಗಳು ಸಹ ಇರುವುದರಿಂದ ಇದರ ಬೇಡಿಗೆ ಇತ್ತೀಚೆಗೆ ಹೆಚ್ಚೇ ಆಗಿದೆ ಎನ್ನಬಹುದು. ಕೆಲವೊಮ್ಮೆ ಕೆಲವು ವಿಚಾರಗಳು ನಂಬಲಿಕೆ ಆಗದಿದ್ದರೂ ಅದರ ಸತ್ಯಾಸತ್ಯತೆ ತಿಳಿದ ಮೇಲೆ ಖಂಡಿತ ನಂಬಲೇಬೇಕು ಅನಿಸುತ್ತದೆ. ಇದೇನಪ್ಪ ಸಗಣಿಯಿಂದ ತಿಂಗಳಿಗೆ 2 ಲಕ್ಷ ಆದಾಯ ಗಳಿಸೋದು ಅಂತಾ ನಿಮಗೆ ನಗು ಬರುವುದು ಸಹಜ ಆದರೆ ಇದು ನಿಜ. ಹಾಗಿದ್ದರೆ ಇದರ ಕಾರ್ಯ ವೈಖರಿ ಹೇಗೆ ಅನ್ನೋದನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸರ್ಕಾರ ಈಗಾಗಲೇ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಳಸುವುದನ್ನು ನಿಷೇಧ ಮಾಡಿದೆ ಇದೇ ಕಾರಣಕ್ಕಾಗಿಯೇ ಪೇಪರ್ ನಿಂದ ತಯಾರಾಗಿರುವ ಕೈಚೀಲಗಳಿಗೆ ಬಹಳಷ್ಟು ಬೇಡಿಕೆ ಶುರುವಾಗಿದೆ. ಹಾಗೂ ಪೇಪರ್ ಕೈಚೀಲಗಳು ಪರಿಸರಪ್ರೇಮಿಗಳ ಆದ್ಯತೆಯು ಆಗಿದೆ. ಹಾಗಾಗಿ ಪರಿಸರಸ್ನೇಹಿ ಪೇಪರ್ ಕೈಚೀಲಗಳ ಉತ್ಪಾದನೆಗೆ ಸುಲಭ ಉಪಾಯಗಳ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಆದರೆ ಹಸುವಿನ ಸಗಣಿಗು, ಪರಿಸರ ಸ್ನೇಹಿ ಪೇಪರ್ ಚೀಲಕ್ಕು ಏನು ಸಂಬಂಧ ಅಂತಾ ಯೋಚನೆ ಬರುವುದು ಸಹಜ ಇದರ ವಿವರಣೆ ಇಲ್ಲಿದೆ ನೋಡಿ.

ಪರಿಸರಸ್ನೇಹಿ ಪೇಪರ್ ಕೈಚೀಲವನ್ನು ತಯಾರು ಮಾಡಲು ಹಸುವಿನ ಸಗಣಿಯನ್ನು ಬಳಸಬಹುದಾಗಿದೆ. ಅಷ್ಟೇ ಅಲ್ಲದೆ ಹಸುವಿನ ಸಗಣಿಯಿಂದ ಪೇಪರ್ ತಯಾರು ಮಾಡಿ ಪ್ರತಿ ತಿಂಗಳಿಗೆ ಲಕ್ಷ ಲಕ್ಷ ಹಣ ಮಾಡುವ ಅವಕಾಶವೂ ಇದೆ. ಹಾಗಾದರೆ ಕಾಗದ ತಯಾರಿಕೆ ಮಾಡುವುದು ಹೇಗೆ ಅಂತಾ ನೋಡುವುದಾದರೆ, ಹಸುವಿನ ಸಗಣಿಯಿಂದ ಪೇಪರ್ ತಯಾರು ಮಾಡಬಹುದು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯ ಸಗಣಿ ಮೂಲಕ ಪೇಪರ್ ತಯಾರಿಸುವ ಉದ್ಯೋಗವನ್ನು ಆರಂಭಿಸಬಹುದಾಗಿದೆ ಸರ್ಕಾರವು ಈಗಾಗಲೇ ಗೊಬ್ಬರದಿಂದ ಕಾಗದ ತಯಾರಿಸುವ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ ಎಂಎಸ್ಎಂಇ ಸಚಿವಾಲಯವು ದೇಶದ ಪ್ರತಿ ಮೂಲೆಯಲ್ಲೂ ಗೊಬ್ಬರದ ಕಾಗದ ತಯಾರುಮಾಡುವ ಪ್ಲಾಂಟ್ ಸ್ಥಾಪಿಸುವ ಯೋಜನೆ ಕೂಡಾ ಮಾಡುತ್ತಿದೆ.

ಗೊಬ್ಬರದ ಕಾಗದ ತಯಾರಿಕೆಗೆ ಗೊಬ್ಬರದಿಂದ ಶೇಕಡ ಏಳರಷ್ಟು ಪ್ರಮಾಣ ಉಪಯುಕ್ತ ಮೆಟಿರಿಯಲ್ ಸಿಗುತ್ತದೆ. ಉಳಿದ 93ರಷ್ಟು ಗೊಬ್ಬರವನ್ನು ವೆಜಿಟೇಬಲ್ ಡೈ ಗೆ ನೀವು ಬಳಸಬಹುದಾಗಿದೆ. ಇದು ಸಂಪೂರ್ಣವಾಗಿ ಪರಿಸರಸ್ನೇಹಿ ಯಾಗಿರುವುದರಿಂದ ಬೇಡಿಕೆಯೂ ಹೆಚ್ಚಿದೆ ಹಾಗೂ ರಫ್ತಿಗೂ ಮುಕ್ತ ಅವಕಾಶವಿದೆ. ರೈತರಿಂದ ಹಸುವಿನ ಸಗಣಿಯನ್ನು ಪ್ರತಿ ಕೆಜಿಗೆ 5 ರೂಪಾಯಿಯಂತೆ ಖರೀದಿ ಮಾಡಬಹುದು. ಇದರಿಂದ ರೈತರಿಗೂ ಲಾಭದಾಯಕವಾಗುತ್ತದೆ ಸರ್ಕಾರ ಕೂಡ ಇದಕ್ಕೆ ನೆರವಾಗುತ್ತದೆ. ಇನ್ನೂ ಸಗಣಿಯಿಂದ ಪರಿಸರ ಸ್ನೇಹಿ ಚೀಲ ತಯಾರಿಸಲು ತಗಲಬಹುದಾದ ಖರ್ಚು ಎಷ್ಟು ಎಂದು ನೋಡುವುದಾದರೆ , ನೀವು ಗೊಬ್ಬರದ ಕಾಗದದ ಪ್ಲಾಂಟ್ ಸ್ಥಾಪಿಸಬೇಕಾದರೆ ನಿಮಗೆ ಸರಿ ಸುಮಾರು 15 ಲಕ್ಷ ಖರ್ಚು ಬೀಳಲಿದೆ, ಚಿಂತೆಬೇಡ ಇಂತಹ ಕರ್ಚು ಬರಿಸಲು ಸರ್ಕಾರದಿಂದ ಸಾಲ ಸೌಲಭ್ಯಗಳು ಸಿಗುತ್ತದೆ. ಇವುಗಳ ಲಾಭವನ್ನು ಪಡೆದುಕೊಂಡು ಒಂದು ಪ್ಲಾಂಟ್ನಲ್ಲಿ ಒಂದು ತಿಂಗಳಿಗೆ ಒಂದು ಲಕ್ಷ ಕಾಗದದ ತಯಾರಿಸಿ ಮಾರಾಟ ಮಾಡಬಹುದು.

Leave A Reply

Your email address will not be published.