ಶ್ರದ್ಧೆ ಮತ್ತು ಪ್ರಯತ್ನ ಒಬ್ಬ ವ್ಯಕ್ತಿಯನ್ನು ಹೇಗೆ ಬಡಲಾಯಿಸುತ್ತದೆ ಎನ್ನುವುದಕ್ಕೆ ಬೆಂಗಳೂರಿನ ಈ ಮಹಿಳೆ ದೊಡ್ಡ ಉದಾಹರಣೆಯಾಗಿದ್ದಾಳೆ. ಒಂದು ಮಾಹಿತಿಯನ್ನು ತಿಳಿದು ಅದರ ಹಿಂದೆ ಬಿದ್ದು ಇವತ್ತು ಕೈ ತುಂಬಾ ಹಣ ಸಂಪಾದಿಸುವ ಮಹಿಳೆಯ ಬಗ್ಗೆ ನಾವು ಇಲ್ಲಿ ನೋಡೋಣ.

ಇವರ ಹೆಸರು ನಂದಿನಿ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.ತಂದೆ ದೇವಸ್ಥಾನದ ಪೂಜಾರಿಯಾಗಿ ಕೆಲಸ ಮಾಡುತ್ತಿದ್ದರು. ಓದಿನಲ್ಲಿ ಮುಂದಿದ್ದ ನಂದಿನಿ ಅವರು ಹೆಚ್ಚಿನ ಓದಿನ ಬಗ್ಗೆ ಅತಿ ದೊಡ್ಡ ಆಸೆ ಕಂಡಿದ್ದರು.

ಆದರೆ ಬಡತನ ಅವರ ಆಸೆ ಕೈ ಬಿಟ್ಟಿತ್ತು. PUC ಆದ ಮೇಲೆ ನಂದಿನಿ ಅವರಿಗೆ ಮದುವೆ ಮಾಡಿದರು. ಗಂಡ ಕೂಡ ದೇವಸ್ಥಾನದ ಪೂಜಾರಿಯಾಗಿದ್ದರು. ಟ್ರಾವೆಲ್ಲಿಂಗ್ ಏಜೆನ್ಸಿಯಲ್ಲಿ ಕೆಲಸಕ್ಕೆ ಸೇರಿದ ಅವರು ಹೇಗೋ ಜೀವನ ನಡೆಸುತ್ತಿದ್ದರು. ಆದರೆ ಒಂದು ದಿನ ಇವರ ತಂದೆ ಅನಿರೀಕ್ಷಿತವಾಗಿ ಮರಣ ಹೊಂದಿದರು.

ತನ್ನ ತಂಗಿಯ ಮದುವೆ ಮಾಡುವ ಜವಾಬ್ದಾರಿ ನಂದಿನಿ ಅವರ ಹೆಗಲಿನ ಮೇಲೆ ಬಿತ್ತು. ಚೆನ್ನಾಗಿ ದುಡಿದು ತನ್ನ ತಂಗಿಯನ್ನು ಒಳ್ಳೆಯ ಕಡೆ ಮದುವೆ ಮಾಡಬೇಕು ಎನ್ನುವ ಆಶಯ ಇವರದಾಗಿತ್ತು. ಸ್ನೇಹಿತರು ಹೇಳಿದ ಸಲಹೆಯಂತೆ ತನ್ನ ಎಲ್ಲಾ ಆಭರಣಗಳನ್ನು ಒತ್ತೆ ಇಟ್ಟು ಅದರಿಂದ ಬಂದ ಹಣದಿಂದ ಒಂದು ಕಾರನ್ನು ಖರೀದಿ ಮಾಡಿದರು.

ಕಾರನ್ನು ಖರೀದಿ ಮಾಡಿ ಊಬರ್ ನಲ್ಲಿ ಬಿಟ್ಟರು. ಆಗ ನಂದಿನಿ ಅವರಿಗೆ ಒಂದು ವಿಷಯ ತಿಳಿಯಿತು. ಅದೇ ಅವರ ಜೀವನವನ್ನು ಬದಲಾಯಿಸಿತು. ಅದಕ್ಕೆ ಒಂದು ಡ್ರೈವರ್ ನನ್ನು ಮಾಡಿದರೆ ಅವನು ಟ್ರಿಪ್ ಗಳನ್ನು ಮಾಡಿದರೆ ಮೂರುವರೆ ಸಾವಿರ ರೂಪಾಯಿ ಕಮಿಷನ್ ಬರುತ್ತದೆ ಎಂದು ತಿಳಿಯಿತು. ಹಾಗೇ ತಮಗೆ ತಿಳಿದಿರುವ ಡ್ರೈವರ್ಸ್ ನ್ನು ರೆಫರ್ ಮಾಡಿದರು.ಪೇಪರಿನಲ್ಲಿ ಜಾಹೀರಾತು ಹಾಕಿದರು.

ಹಾಗೆ ರೈಲ್ವೇಸ್ಟೇಷನ್, ಬಸ್ಟಾಂಡ್, ಇತರ ಜಾಗಗಳಿಗೆ ಹೋಗಿ ಊಬರ್ ನ ಮಾಹಿತಿ ನೀಡಿ ಡ್ರೈವರ್ ಗಳಿಗೆ ಸೇರುವಂತೆ ಹೇಳಿದರು.ಇದರಿಂದ ಹಣಗಳಿಸಲು ಪ್ರಾರಂಭಿಸಿದರು.ಈಗ 2000ಕ್ಕೂ ಹೆಚ್ಚು ಡ್ರೈವರ್ ಗಳನ್ನು ಹೊಂದಿದ್ದು ಪ್ರತಿ ತಿಂಗಳು ಎರಡು ಲಕ್ಕ್ಷಕ್ಕಿಂತಲೂ ಹೆಚ್ಚು ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.

ತನ್ನ ಸ್ವಂತ ಆಫೀಸ್ ತೆಗೆದಿರುವ ಇವರು 6ಜನರಿಗೆ ಉದ್ಯೋಗ ನೀಡಿದ್ದಾರೆ. ತಂಗಿಗೆ ಒಳ್ಳೆ ಕಡೆ ನೋಡಿ ಮದುವೆ ಮಾಡಿದ್ದಾರೆ.ಎಲ್ಲಾ ಸಾಲ ತೀರಿಸಿ ಒಂದು ಮನೆಯನ್ನು ಸಹ ಕಟ್ಟಿಕೊಂಡಿದ್ದಾರೆ. ಒಳ್ಳೆಯ ಶಾಲೆಗೆ ಮಗಳನ್ನು ಸೇರಿಸಿರುವ ಇವರು ಡಾಕ್ಟರ್ ಮಾಡುವ ಆಸೆ ಹೊಂದಿದ್ದಾರೆ. ಪ್ರಯತ್ನ ಮತ್ತು ಶ್ರದ್ಧೆ ಇವರ ಜೀವನವನ್ನೇ ಬದಲಾಯಿಸಿತು.ಇವೆರಡೂ ಎಂತಹವರ ಜೀವನವನ್ನಾದರೂ ಬದಲಾಯಿಸುತ್ತದೆ ಎನ್ನುವುದಕ್ಕೆ ಇವರು ಉದಾಹರಣೆ ಆಗಿದ್ದಾರೆ.

By

Leave a Reply

Your email address will not be published. Required fields are marked *