ಒಬ್ಬ ತಂದೆ ಮಗಳನ್ನು ಎಷ್ಟು ಪ್ರೀತಿಸುತ್ತಾನೆ ಅನ್ನೋದಕ್ಕೆ ಈ ಸ್ಟೋರಿ ನೋಡಿ.

0 0

ತಾಯಿ ಮಗುವನ್ನು ಒಂಭತ್ತು ತಿಂಗಳು ಹೊಟ್ಟೆಯಲ್ಲಿ ಇಟ್ಟುಕೊಂಡು ಹೋರುತ್ತಾಳೆ. ನಂತರ ಮಗುವಿಗೆ ಜನನ ನೀಡುತ್ತಾಳೆ. ಆದರೆ ತಂದೆ ತನ್ನ ಭುಜದ ಮೇಲೆ ಇಟ್ಟುಕೊಂಡು ಪ್ರಪಂಚ ತೋರಿಸುತ್ತಾನೆ. ಹುಟ್ಟಿದಾಕ್ಷಣದಿಂದ ಮಗುವಿಗೆ ಸುಂದರ ಲೋಕವನ್ನು ಸ್ರಷ್ಟಿಸುವವನು ತಂದೆ ಆಗಿರುತ್ತಾನೆ. ಅಪ್ಪಾ ಎನ್ನುವ ಭಾವನೆ ನಮ್ಮ ಮನಸ್ಸಿನಲ್ಲಿ ಬಂದ ತಕ್ಷಣ ಧೈರ್ಯ ಹುಟ್ಟುತ್ತದೆ. ಕಾರಣ ಎಂತಹ ಸಂದರ್ಭಗಳಲ್ಲೂ ತಂದೆ ಬೆನ್ನೆಲುಬಾಗಿ ನಿಲ್ಲುತ್ತಾರೆ ಎನ್ನುವುದು. ಈ ತಂದೆ ಕೂಡ ಸೂಪರ್ ಹೀರೊ ಅವರ ಬಗ್ಗೆ ನಾವು ಇಲ್ಲಿ ತಿಳಿಯೋಣ.

ಆಂಧ್ರಪ್ರದೇಶಕ್ಕೆ ಸೇರಿದ ನರಸಿಂಹಾಚಾರಿಗೆ ಒಬ್ಬಳೇ ಮಗಳು. ಮಗಳು ಹುಟ್ಟಿದಾಗ ಈತನ ಸಂತೋಷ ಎಲ್ಲಿಲ್ಲದಷ್ಟು. ಪ್ರತಿ ದಿನ ಪ್ರತಿ ಕ್ಷಣ ಮಗಳಿಗೆ ಏನಾದರೂ ಉಡುಗೊರೆ ಕೊಟ್ಟು ಸಂತೋಷದಲ್ಲಿ ಮುಳುಗಿಸುತ್ತಿದ್ದರು ಇವರು.ಮಗಳು ಬೆಳೆದು ನಿಂತಳು.ಮದುವೆ ಕೂಡ ಫಿಕ್ಸ್ ಆಯಿತು.ಪ್ರತಿ ಕ್ಷಣ ಮಗಳ ಬಗ್ಗೆ ಚಿಂತಿಸುತ್ತಿದ್ದ ಇವರು ಮದುವೆ ಪತ್ರಿಕೆಯನ್ನು ವಿಶೇಷವಾಗಿ ಮಾಡಿಸಿದ್ದಾರೆ.

ಪತ್ರಿಕೆಯ ಮೊದಲ ಪುಟದಲ್ಲಿ ಹೆತ್ತರೆ ಮಗಳನ್ನೇ ಹೇರಬೇಕು ಎಂದು ಮುದ್ರಿಸಿ ಮಗಳ ಹುಟ್ಟಿದಾಗಿನಿಂದ ಬಾಲ್ಯದಿಂದ ಜೊತೆಗಿರುವ ಸಂತೋಷದ ಕ್ಷಣಗಳ ಫೋಟೋಗಳನ್ನು ಹಾಕಿದ್ದಾರೆ. ಅಷ್ಟೇ ಅಲ್ಲದೇ ಇನ್ನೊಂದು ಪುಟದಲ್ಲಿ ಮಗಳ ಬಗ್ಗೆ ಕವಿತೆ ಬರೆದು ಕರೆಯೋಲೆ ಮಾಡಿಸಿದ್ದಾರೆ.

ಮಗಳು ಎಂದರೆ ಈ ತಂದೆಗೆ ಎಷ್ಟು ಪ್ರೀತಿ ಎಂದು ಇದರಿಂದಲೇ ಗೊತ್ತಾಗುತ್ತದೆ. ತಂದೆಯ ಕನಸುಗಳನ್ನು ಹೊತ್ತ ಈ ಲಗ್ನ ಪತ್ರಿಕೆಯನ್ನು ನೋಡಿದ ಮಗಳು ತಂದೆಯನ್ನು ಅಪ್ಪಿಕೊಂಡು ಕಣ್ಣೀರು ಹಾಕಿದಳಂತೆ.

ನಾವು ತಂದೆಯ ಬಗ್ಗೆ ಎಷ್ಟು ಆಲೋಚನೆ ಮಾಡುತ್ತೇವೋ ಆದರೆ ತಂದೆ ನಮ್ಮ ಬಗ್ಗೆ ದುಪ್ಪಟ್ಟು ಯೋಚನೆ ಮಾಡುತ್ತಾರೆ. ನಮ್ಮ ಏಳಿಗೆಗಾಗಿ ಬೇರೆಯವರ ಕಾಲು ಹಿಡಿಯಲು ಸಹ ಸಿದ್ಧ ಇರುತ್ತಾರೆ. ಅತಿಯಾದ ದುಃಖ ಎಂದರೆ ಮಗಳನ್ನು ಕಳೆದುಕೊಂಡು ಆಗುವ ದುಃಖ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ತಂದೆ ಮಗುವನ್ನು ಎಷ್ಟು ಪ್ರೀತಿ ಮಾಡುತ್ತಾರೆ ಎಂದು ಇದರಿಂದ ಗೊತ್ತಾಗುತ್ತದೆ. ಹಾಗಾಗಿ ಅವರು ನಮ್ಮಿಂದ ದೂರ ಹೋಗುವ ಮುನ್ನ ಅವರ ಬಗ್ಗೆ ಆಲೋಚಿಸೋಣ.ಅವರನ್ನು ಸಂತೋಷ ಇಡಲು ಪ್ರಯತ್ನಿಸೋಣ.

Leave A Reply

Your email address will not be published.