ಒಂದು ಕಾಲದಲ್ಲಿ ಟೀನೇಜ್ ಹುಡುಗರ ನಿದ್ದೆಗೆಡಿಸಿದ್ದರು ಇವರು. ದಶಕಗಳಿಗೂ ಹೆಚ್ಚು ಕಾಲ ಟಾಪ್ ನಟಿಯಾಗಿ ಮಿಂಚಿದ್ದ ನಟಿ ಪ್ರೇಮ.ಇವರು ಈಗ ಮತ್ತೆ ಸುದ್ದಿಯಾಗುತ್ತಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಟಿ ಪ್ರೇಮ ಅವರು ಅವರ ವ್ಯೆವಾಹಿಕ ಜೀವನದ ಬಗ್ಗೆ ಕೇಳಿದಾಗ ಏನು ಉತ್ತರಿಸಲಿಲ್ಲ ಅದರ ಬಗ್ಗೆ ನಾವು ಇಲ್ಲಿ ನೋಡೋಣ.

ಚಿತ್ರರಂಗದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿದ್ದ ಕಾಲದಲ್ಲಿಯೇ ಚಿತ್ರರಂಗವನ್ನು ತೊರೆದು ಮದುವೆ ಆದರು.ಆದರೆ ಮದುವೆ ನಂತರವೇ ವಿಚ್ಛೇದನ ಪಡೆದದ್ದು ಯಾಕೆ?ಗಂಡ ಅಷ್ಟೊಂದು ದೊಡ್ಡ ಉಪಾಯ ಮಾಡಿದ್ದರಾ?ಎಂದು ಎಲ್ಲರಿಗೂ ಕಾಡುವ ಪ್ರಶ್ನೆಯಾಗಿದೆ.

ಉಪೇಂದ್ರ ನಿರ್ದೇಶನದ ಓಂ ಸಿನೆಮಾವನ್ನು ಶಿವರಾಜ್ ಕುಮಾರ್ ಜೊತೆ ಮಾಡಿ ಕರ್ನಾಟಕದಾದ್ಯಂತ ಮನೆ ಮಾತಾದವರು ಪ್ರೇಮ. ಸೌಂದರ್ಯದ ಮೂಲಕ ಆಗಿನ ಕಾಲದ ಟೀನೇಜ್ ಹುಡುಗರ ಕ್ರಶ್ ಆಗಿದ್ದರು ಇವರು. ಕನ್ನಡದ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಪ್ರೇಮರವರ ಬಗ್ಗೆ ವ್ಯೆವಾಹಿಕ ಜೀವನದ ಬಗ್ಗೆ ಹೇಳುತ್ತಾರೆ ಎಂಬ ಊಹೆ ಇತ್ತು.ಆದರೆ ಮೌನವೇ ಅವರ ಉತ್ತರವಾಗಿತ್ತು.ಆದರೆ ಈಗ ಅದಕ್ಕೆ ಉತ್ತರ ಸಿಕ್ಕಿದೆ.

ಉದ್ಯಮಿ ಜೀವನ್ ಅವರನ್ನು 2006ರಲ್ಲಿ ಮದುವೆಯಾದರು.ಆದರೆ 2016ರಲ್ಲಿ ವಿಚ್ಛೇದನವನ್ನು ಕೋರಿ ಅರ್ಜಿಯನ್ನು ಸಲ್ಲಿಸಿದರು. ಇದಕ್ಕೆ ಕಾರಣವೇನೆಂದರೆ ಮದುವೆಗೆ ಮುಂಚೆ ಸಾಫ್ಟ್ವೇರ್ ಇಂಜಿನಿಯರ್ ಅಂತ ಹೇಳಿಕೊಂಡಿದ್ದ ಗಂಡ ಉದ್ಯಮಿ ಎನ್ನುವುದು ಮದುವೆಯ ನಂತರ ಗೊತ್ತಾಗುತ್ತದೆ.

ಮದುವೆಯ ನಂತರ ಪ್ರೇಮಾಗೆ ನಟಿಸಲು ಇಷ್ಟವಿರುವುದಿಲ್ಲ. ಆದರೆ ಪ್ರೇಮಾ ಸಿನೆಮಾಗಳಲ್ಲಿ ನಟಿಸಿ ಚೆನ್ನಾಗಿ ದುಡಿದು ಕೋಟಿ ಕೋಟಿ ಹಣವನ್ನು ಸಂಪಾದಿಸಿ ಆ ಹಣದಿಂದ ಐಷಾರಾಮಿ ಜೀವನ ನಡೆಸಬೇಕೆಂಬುದು ಜೀವನ್ ಅವರ ಆಸೆಯಾಗಿತ್ತಂತೆ.ಗಂಡ ಒಬ್ಬ ಇಂಜಿನಿಯರ್ ದುಡಿಯುತ್ತಾನೆ ಸುಖವಾಗಿ ಜೀವನ ನಡೆಸಬಹುದು ಎಂದು ಆಸೆ ಇಟ್ಟುಕೊಂಡಿದ್ದರು.ಇದು ಅವರಿಗೆ ಶಾಕ್ ಆಯಿತು.ಇದು ಅವರು ವಿಚ್ಛೇದನ ನೀಡಲು ಕಾರಣವಾಗಿದೆ.

Leave a Reply

Your email address will not be published. Required fields are marked *