ಬೆರಳ ಉಗುರು ಹೀಗೆ ಆಗಿದ್ಯಾ? ಒಂದು ವಾರದಲ್ಲಿ ನಿವಾರಿಸುತ್ತೆ ಈ ಮನೆಮದ್ದು

0 1,474

ಉಗುರು ತುಂಬಾ ಚೆನ್ನಾಗಿ ಕಾಣಬೇಕು ಎಂದು ಕೆಲವರು ಲಕ್ಷ್ಯ ವಹಿಸುತ್ತಾರೆ. ಆದರೂ ಕೆಲವರಿಗೆ ಉಗುರಿನ ಸುತ್ತ ನೋವುಗಳು ಕಾಣಿಸಿಕೊಳ್ಳಬಹುದು. ಹಾಗೆಯೇ ಒಬ್ಬರಿಗೆ ಏನಾದರೂ ತೊಂದರೆ ಆದಲ್ಲಿ ಕಿರಿಕಿರಿ ಅನಿಸುತ್ತದೆ. ಬಹಳ ನೋವುಂಟಾಗುತ್ತದೆ. ಹಾಗೆಯೇ ಉಗುರಿನ ಅಂದ ಕೂಡ ಹಾಳಾಗುತ್ತದೆ. ಕಾಲು ಉಗುರಿನಲ್ಲಿ ಕೆಲವರಿಗೆ ನೋವು ಆಗುವುದು ಜಾಸ್ತಿ. ಆದ್ದರಿಂದ ಅದರ ಪರಿಹಾರದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೆಲವರಿಗೆ ಕಾಲಿನ ಹೆಬ್ಬೆಟ್ಟಿನಲ್ಲಿ ನಂಜು ಉಂಟಾಗುತ್ತದೆ. ಇದರಿಂದ ಬಹಳ ನೋವಾಗಿರುತ್ತದೆ. ಹಲವರು ಇದಕ್ಕೆ ನೇಲ್ ಪಾಲಿಶ್ ಗಳನ್ನು ಹಚ್ಚುತ್ತಾರೆ. ಇದರಿಂದ ಸ್ವಲ್ಪ ನೋವು ಕಡಿಮೆಯಾಗುತ್ತದೆ. ಹಾಗೆಯೇ ಕೆಲವು ಮನೆಮದ್ದುಗಳನ್ನು ಮಾಡುತ್ತಾರೆ. ಇದು ಸಹ ಒಳ್ಳೆಯದು. ಏಕೆಂದರೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಆಗುವುದಿಲ್ಲ. ಹಾಗೆಯೇ ಇದಕ್ಕೆ ವೈದ್ಯರ ಬಳಿ ಕೂಡ ಹೋಗಬಹುದು. ವೈದ್ಯರ ಹತ್ತಿರ ಹೋದರೆ ಉಗುರು ಕೀಳಲು ಸಹ ಹೇಳಬಹುದು. ಆದರೆ ಇಂಗ್ಲೀಷ್ ಮಾತ್ರೆಗಳನ್ನು ನೀಡುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಕೆಲವೊಂದು ರೋಗಗಳಿಗೆ ಇಂಗ್ಲಿಷ್ ಮಾತ್ರೆಗಳು ಬೇಕೇ ಬೇಕು. ಆದರೆ ಉಗುರಿನ ಸಮಸ್ಯೆಗೆ ಮನೆಯ ಮದ್ದನ್ನು ಬಳಸಿದರೆ ಒಳ್ಳೆಯದು. ಮನೆಮದ್ದುಗಳು ಕೈಯಲ್ಲಿ ಇದ್ದಾಗ ಇಂಗ್ಲಿಷ್ ಮಾತ್ರೆಗಳಿಂದ ದೂರ ಇರುವುದು ಒಳ್ಳೆಯದು. ಆಪಲ್ಸೈಡರ್ ವಿನೆಗರ್ ನ್ನು ಒಂದು ಚಮಚ ತೆಗೆದುಕೊಂಡು ಅದಕ್ಕೆ 5 ರಿಂದ 6ಹನಿ ಟೀ ಟ್ರೀ ಆಯಿಲ್ ನ್ನು ಹಾಕಬೇಕು. ಇದನ್ನು ಚೆನ್ನಾಗಿ ಕಲಸಿ ಹತ್ತಿಯ ಚೂರನ್ನು ತೆಗೆದುಕೊಂಡು ಅದರಿಂದ ಕಾಲಿನ ಉಗುರಿಗೆ ಹಚ್ಚಬೇಕು. ಕೆಲವರಿಗೆ 7 ದಿನಕ್ಕೆ ಇದು ಕಡಿಮೆಯಾಗುತ್ತದೆ. ಆದರೆ ಇನ್ನೂ ಕೆಲವರಿಗೆ 10ದಿನಗಳು ಬೇಕಾಗಬಹುದು.

ನಿಂಬೆಹಣ್ಣು ಇದು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಹಾಗೆಯೇ ನಿಂಬೆಹಣ್ಣು ಎಲ್ಲರ ಮನೆಯಲ್ಲೂ ಇರುತ್ತದೆ. ನಿಂಬೆಹಣ್ಣಿನ ರಸವನ್ನು ನಂಜಾದ ಉಗುರಿಗೆ ಹಾಕಬೇಕು. ಸ್ವಲ್ಪ ಉರಿಯುತ್ತದೆ. ಆದರೆ ಇದನ್ನು ಎರಡು ದಿನಗಳ ಕಾಲ ಮಾಡಿದರೆ ಸಂಪೂರ್ಣವಾಗಿ ಕಡಿಮೆ ಮಾಡಿಕೊಳ್ಳಬಹುದು. ಯಾವುದೇ ರೀತಿಯ ಉಗುರಿನ ಸಮಸ್ಯೆ ಇದ್ದರೂ ನಿಂಬೆಹಣ್ಣನ್ನು ಬಳಸುವುದರಿಂದ ಕಡಿಮೆಯಾಗುತ್ತದೆ. ಆದ್ದರಿಂದ ಇಲ್ಲಿ ಹೇಳಿರುವ ಯಾವುದೇ ಸಲಹೆಯನ್ನು ಅನುಸರಿಸಬಹುದು.

Leave A Reply

Your email address will not be published.