ನಾಟಿಕೋಳಿ ಸಾಕಾಣಿಕೆಯ ಬಗ್ಗೆ ಆಸಕ್ತಿ ಇದ್ರೆ ಇದನೊಮ್ಮೆ ನೋಡಿ

0 23

ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದ ಸಮೀಪ ಇರುವ ರೈಲ್ವೆ ಸ್ಟೇಶನ್ ಬಳಿ ಇವರ ಆಫಿಸ್ ಹಾಗೂ ನಾಟಿಕೋಳಿ ಫಾರ್ಮ್ ಇದೆ. ಇದನ್ನ ಅವರು ರೈತರಿಗೆ 60ಸಾವಿರ ರೂಪಾಯಿಗೆ 1000 ಕೋಳಿ ಮರಿಗಳನ್ನ ನೀಡುತ್ತಾರೆ. ಇದರ ಜೊತೆಗೆ 100 ಕೋಳಿಗಳನ್ನ ಬೇರೆಯಾಗಿ ಯಾವುದೇ ಚಾರ್ಜ್ ಇಲ್ಲದೆಯೇ ಕೊಡುತ್ತಾರೆ. ಯಾಕಂದ್ರೆ ದಾರಿ ಮಧ್ಯದಲ್ಲಿ ಸಕಾಣಿಕೆಯ ಸಮಯದಲ್ಲಿ ಎಲ್ಲಿಯಾದರೂ ಕೋಳಿ ಮರಿಗಳು ಸಾವನ್ನಪ್ಪಿದರೆ, ರೈತರಿಗೆ ನಷ್ಟ ಆಗಬಾರದು ಅಂತ ಈ ಉದ್ದೇಶದಿಂದ 100 ಕೋಳಿಗಳನ್ನ ಎಕ್ಷ್ಟ್ರಾ ಆಗಿ ಕೊಡ್ತಾರೆ. ಕರ್ನಾಟಕದಲ್ಲಿ ಯಾವ ಸ್ಥಳಗಳಿಗೆ ಆದರೂ ಕೂಡ ಇವರದ್ದು ಸಾಕಾಣಿಕೆಯ ಖರ್ಚು ಇರಲ್ಲ ಉಚಿತವಾಗಿ ಟ್ರಾನ್ಸ್ಫೋರ್ಟ್ ಮಾಡಿ ಕೊಡುತ್ತಾರೆ. ನಾಟಿ ಕೋಳಿ ಮರಿಗಳಿಗೆ ವ್ಯಾಕ್ಸಿನೇಷನ್ ಹಾಗೂ ಫೀಡಿಂಗ್ ಗೆ ಅವರೇ ಕೊಡುತ್ತಾರೆ. ಅಥವಾ ಅವರು ಹೇಳಿದ ಆಹಾರವನ್ನೇ ನೀಡಬೇಕು. ಯಾಕಂದ್ರೆ ಮೊದಲೇ ಕೋಳಿಗಳಿಗೆ ಸೆಟ್ ಆಗುವ ಆಹಾರವನ್ನು ನೀಡಿರುತ್ತಾರೆ. ಇದರಿಂದ ಕೋಳಿಮರಿಗಳು ಚೆನ್ನಾಗಿ ಬೆಳೆಯುತ್ತವೆ.

ಯಾರು ಇವರ ಬಳಿ ನಾಟಿಕೋಳಿ ಮರಿಗಳನ್ನ ತೆಗೆದುಕೊಂಡು ಹೋಗಿರುತ್ತೀರೋ ಅವರಿಗೆ ಅಲ್ಲಿಯ ಸ್ಟಾಫ್ಸ್ ಪ್ರತೀ ದಿನ 9 ರಿಂದ 10 ಗಂಟೆಯ ಒಳಗೆ ಒಂದು ಕಾಲ್ ಮಾಡಿ ಯಾವ ವ್ಯಾಕ್ಸಿನೇಷನ್ ಯಾವ ಟೈಮ್ ಗೆ ಸರಿಯಾಗಿ ಕೊಡಬೇಕು ಅನ್ನೋದರ ಬಗ್ಗೆ ಮಾಹಿತಿ ನೀಡುತ್ತಾರೆ. ಹಾಗೆ ಅದರ ಜೊತೆಗೆ ನಿಮಗೂ ಸಹ ಏನಾದರೂ ಮಾಹಿತಿ ಬೇಕಿದ್ದಲ್ಲಿ ಅಥವಾ ಏನಾದರೂ ಅನುಮಾನ ಇದ್ದರೆ ಅವರನ್ನ ಕೇಳಿ ಬಗೆಹರಿಸಿಕೊಳ್ಳಬಹುದು. ಒಂದುವೇಳೆ ಕೋಳಿಗಳಿಗೆ ಏನಾದ್ರು ಅನಾರೋಗ್ಯ ಕಂಡು ಬಾಂದರೆ ಮೊದಲು ಇವರು ಫೋನ್ ಕಾಲ್ ಮೂಲಕವೇ ವಿಚಾರಿಸುತ್ತರೆ ಆದ್ರೂ ಕಡಿಮೆ ಆಗದೇ ಇದ್ದಲ್ಲಿ ಅವರ ಕಂಪನಿ ಕಡೆಯಿಂದಲೇ ಡಾಕ್ಟರ್ ಸೌಲಭ್ಯ ಇರುವುದರಿಂದ ಡಾಕ್ಟರ್ ಗಳನ್ನು ನಿಮ್ಮ ಮನೆಗೆ ಕಳುಹಿಸಿಕೊಡುತ್ತಾರೆ. ಡಾಕ್ಟರ್ ಗಳಿಗೂ ಕೂಡಾ ರೈತರು ಯಾವುದೇ ಚಾರ್ಜ್ ಕೊಡಬೇಕಾದ ಅಗತ್ಯ ಇರಲ್ಲ ಅದನ್ನೂ ಕೂಡಾ ಕಂಪನಿಯೇ ನೋಡಿಕೊಳ್ಳುತ್ತದೆ.

ಕೋಳಿ ಮರಿಗಳು ಬೆಳೆದು ದೊಡ್ಡದಾದ ನಂತರ ಕೆಲವು ಸಂದರ್ಭಗಳಲ್ಲಿ ಜನರು ರೈತರಿಗೆ ತಾನೇ ಕೋಳಿಗಳನ್ನ ತೆಗೆದುಕೊಳ್ಳುವುದಾಗಿ ತಿಳಿಸಿ ಮೋಸ ಮಾಡುವ ಸಾಧ್ಯತೆ ಇರತ್ತೆ. ಅದಕ್ಕಾಗಿಯೇ, ಈ ಕಂಪನಿ ಕಡೆಯಿಂದಲೇ ಒಂದು ಅಗ್ರಿಮೆಂಟ್ ಮಾಡಿಸಿಕೊಂಡು ಕೋಳಿಗಳನ್ನ ಅವರೇ ಖರೀದಿ ಕೂಡಾ ಮಾಡುತ್ತಾರೆ. ಕೋಳಿಗಳನ್ನ ತೆಗೆದುಕೊಳ್ಳುವಾಗ ಕೋಳಿ ಲೆಕ್ಕದಲ್ಲಿ ತೇಹೇದುಕೊಳ್ಳಲ್ಲ. ಕೇಜಿ ಲೇಜ್ಕದಲ್ಲಿ ತೆಗೆದುಕೊಂಡು ಪ್ರತೀ ಕೆಜಿ ಗೆ 180 ರೂಪಾಯ್ಯಿಗೆ ಕೊಂಡುಕೊಳ್ಳುತ್ತಾರೆ. ಒಂದು ತಿಂಗಳ ನಂತರ ಕೋಳಿ ಮರಿಗಳಿಗೆ ತರಕಾರಿ ರಾಗಿ ಇವುಗಳನ್ನೂ ಸಹ ನೀಡಬಹುದು. ಇದರಿಂದ ರೆಕ್ಕೆ ಉದರಲ್ಲ ಗಟ್ಟಿಯಾಗಿ ಬೆಳವಣಿಗೆ ಆಗತ್ತೆ. ಕೋಳಿಗಳನ್ನ ಮಾರಿದ ನಂತರ 1ಲಕ್ಷ 40 ಸಾವಿರದಿಂದ 1 ಲಕ್ಷ 50 ಸಾವಿರದವರೆಗೂ ಸಹ ರೈತರಿಗೆ ಲಾಭ ಆಗತ್ತೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9844440625 ೯೮೪೪೪೪೦೨೮೭

Leave A Reply

Your email address will not be published.