ತುಳಸಿ ಗಿಡ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರತ್ತೆ. ಆದರೆ ಎಲ್ಲರ ಮನೆಯಲ್ಲೂ ಕೂಡಾ ತುಳಸಿ ಗಿಡ ದಟ್ಟವಾಗಿ ಚೆನ್ನಾಗಿ ಬೆಳೆಯಲ್ಲ ಬೇಗನೆ ಒಣಗಿ ಹೋಗತ್ತೆ. ಯಾಕೆ ತುಳಸೀ ಗಿಡ ದಟ್ಟವಾಗಿ ಬೆಳೆಯಲ್ಲ ಯಾಕೆ ಬೇಗ ಒಣಗಿ ಹೋಗತ್ತೆ ಅನ್ನೋದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ.

ತುಳಸೀ ಗಿಡಗಳಲ್ಲಿ ಎರಡು ವಿಧ ಒಂದು ಹಸಿರು ತುಳಸಿ ಮತ್ತೆ ಇನ್ನೊಂದು ಕಪ್ಪು ತುಳಸಿ. ಕಪ್ಪು ತುಳಸಿಯನ್ನು ಕೃಷ್ಣ ತುಳಸಿ ಎಂದೂ ಸಹ ಕರೆಯುತ್ತಾರೆ. ಹಸಿರು ತುಳಸಿಯನ್ನ ರಾಮ್ ಎಂದೂ ಕಪ್ಪು ತುಳಸಿಯನ್ನು ಶಾಮ್ ಎಂದೂ ಕರೆಯುತ್ತಾರೆ. ಒಂದು ಮಾತಿದೆ. ತುಳಸೀ ಗಿಡ ಒಣಗುತ್ತಾ ಬಂದರೆ, ಏನಾದರೂ ಅಶುಭ, ಕೆಡಕು ಆಗತ್ತೆ ಅಂತ ಹೇಳ್ತಾರೆ ಆದರೆ ಇದು ಎಷ್ಟರ ಮಟ್ಟಿಗೆ ನಿಜವೋ ಸುಳ್ಳೋ ?ತುಳಸೀ ಗಿಡ ತುಂಬಾ ಸೂಕ್ಷ್ಮವಾದ ಗಿಡ. ಇದು ಯಾಕೆ ಒಣಗುತ್ತೆ ಅನ್ನೋದರ ಬಗ್ಗೆ ಹಲವಾರು ಕಾರಣಗಳು ಇವೆ.

ಕೃಷ್ಣ ತುಳಸಿ ಗಿಡದ ಬೀಜಗಳು ಗಾಳಿಗೆ ಹಾರಿಕೊಂಡು ಬಂದು ಹಾಗೇ ಬರೀ ನೆಲದಲ್ಲಿ ಹುಟ್ಟಿಕೊಂಡರೆ ಇದು ತನಗೆ ಬೇಕಾದಷ್ಟು ಜಾಗದಲ್ಲಿ ತನ್ನ ಬೇರುಗಳನ್ನು ಹರಡಿಕೊಂಡು ನೀರೂ ಸಹ ಇಲ್ಲದೆಯೇ ಚೆನ್ನಾಗಿ ಬೆಳೆಯುತ್ತದೆ. ಇದು ೨ / ೩ ತಿಂಗಳು ಚೆನ್ನಾಗಿ ಬೆಳೆಯುತ್ತೆ ನಂತರ ನಿಧಾನವಾಗಿ ಒಣಗಲು ಶುರು ಆಗತ್ತೆ. ಪಾಟ್ ಅಲ್ಲಿ ತುಳಸೀ ಗಿದವನ್ನ ಬೆಳೆಯುವವರು ಸುಮಾರು ೧೨ ಇಂಚಿನ ಪಾಟ್ ನಲ್ಲಿ ಬೆಳೆಸಬೇಕು. ಕಟ್ಟೆಯಲ್ಲಿ ಬೃಂದಾವನದ ತರ ತುಳಸಿ ಗಿಡ ನೆಡಲು ಮಧ್ಯದಲ್ಲಿ ಸಿಮೆಂಟ್ ನಿಂದ ತುಂಬದೆ ಖಾಲಿ ಜಾಗ ಬಿಟ್ಟಿರುತ್ತಾರೆ. ಇದರಿಂದ ಬೇರು ಭೂಮಿಯ ಒಳಗೆ ಹೋಗತ್ತೆ ಹಾಗಾಗಿ ಇಂತಹ ತುಳಸಿ ಗಿಡಗಳು ಚೆನ್ನಾಗಿ ಬೆಳೆಯುತ್ತದೆ. ತುಳಸೀ ಗಿಡ ದೊಡ್ಡದಾಗಿ ಬೆಯುತ್ತಾ ಹೋದಂತೆ ಅದರಲ್ಲಿ ಹೂವುಗಳು ಬಿಡಲು ಆರಂಭ ಆಗತ್ತೆ. ಆ ಹುವುಗಳನ್ನ ಆಗಾಗ ಚಿವುಟಿ ತೆಗೆಯುತ್ತಾ ಇರಬೇಕು. ಹೀಗೆ ಅವುಗಳನ್ನ ಚಿವುಟಿ ತೆಗೆದರೆ ಅಲ್ಲಿ ಮತ್ತೆ ಹೊಸದಾಗಿ ಎಲೆಗಳು ಚಿಗುರಲು ಆರಂಭ ಆಗತ್ತೆ.

ತುಳಸೀ ಗಿಡಕ್ಕೆ ಜಾಸ್ತಿ ನೀರು ಬೇಕಾಗಿಲ್ಲ ಕಡಿಮೆ ನೀರು ಸಾಕಾಗತ್ತೆ. ಜಾಸ್ತಿ ನೀರು ಹಾಕಿದ್ರೂ ಕೂಡಾ ತುಳಸಿ ಗಿಡ ಕೊಳೆತು ಹೋಗತ್ತೆ. ತುಳಸಿ ಗಿಡದ ಮಣ್ಣನ್ನು ಗಟ್ಟಿ ಆಗೋಕೆ ಬಿಡಬಾರದು. ಇದರ ಬೇರಿಗೆ ಗಾಳಿ ಆಡೋದಕ್ಕೆ ಜಾಗ ಬೇಕಾಗತ್ತೆ ಹಾಗಾಗಿ ವಾರಕ್ಕೆ ಒಂದು ಬಾರಿ ಅಥವಾ ೧೫ ದಿನಕ್ಕೊಮ್ಮೆ ಆದರೂ ಸಹ ಮಣ್ಣನ್ನು ಸಡಿಲಗೊಳಿಸುತ್ತಾ ಇರಬೇಕು. ತುಳಸಿ ಗಿಡದ ಬುಡದಲ್ಲಿ ಆಗಾಗ ಒಣಗಿದ ಎಲೆಗಳು ಬೀಳುತ್ತಾ ಇರತ್ತೆ ಅದನ್ನ ಕೂಡಾ ಅಷ್ಟಷ್ಟು ದಿನಕ್ಕೆ ತೆಗೆಯುತ್ತಾ ಇರಬೇಕು. ತುಳಸಿ ಕಟ್ಟೆಯಲ್ಲಿ ಇತ್ತ ಗಿಡವನ್ನು ನಾವು ಮತ್ತೆ ರೀ ಪಾಟ್ ಮಾಡೋಕೆ ಆಗಲ್ಲ ಹಾಗಾಗಿ ೫ / ೬ ತಿಂಗಳಿಗೆ ಒಮ್ಮೆ ಆದರೂ ಸ್ವಲ್ಪ ಮಣ್ಣನ್ನು ಬಿಡಿಸಿ ತೆಗೆದು ಬೇರೆ ಮಣ್ಣು ಮತ್ತು ಗೊಬ್ಬರವನ್ನು ಹಾಕಬಹುದು. ಮಣ್ಣನ್ನು ಬಿಡಿಸುವಾಗ ಬೇರುಗಳಿಗೆ ಜಾಸ್ತಿ ತೊಂದರೆ ಆಗದ ಹಾಗೇ ಬಿಡಿಸಬೇಕು. ಇದಕ್ಕೆ ಜಾಸ್ತಿ ಕಾಂಪೋಸ್ಟ್ ಹಾಕಬಾರದು ಮಣ್ಣು ಚೆನ್ನಾಗಿ ಇದ್ದರೆ ಸಾಕಗತ್ತೆ ೮೦% ಮಣ್ಣು ಹಾಗೂ ೨೦% ಮಾತ್ರ ಕಾಂಪೋಸ್ಟ ಅನ್ನು ಸೇರಿಸಬೇಕು.

ತುಳಸಿ ಗಿಡಕ್ಕೆ ಹಸುವಿನ ಗೊಬ್ಬರ ಅಥವಾ ಎರೆಹುಳು ಗೊಬ್ಬರವನ್ನು ಮಾತ್ರ ಹಾಕಬೇಕು. ಕೆಮಿಕಲ್ಸ್ ಗೊಬ್ಬರವನ್ನು ಮಾತ್ರ ಹಾಕಲೇಬಾರದು. ಹೂವು ಆಗಿ ಒಣಗಿರುವ ಕಡ್ಡಿಗಳನ್ನು ತೆಗೆದುಹಾಕಬೇಕು. ಒಣಗಿದ ಕಡ್ಡಿಗಳು ಇದ್ರೆ ಪಕ್ಕದಲ್ಲಿ ಚಿಗುರುತ್ತ ಇರುವ ಕಡ್ಡಿಗಳೂ ಸಹ ಒಣಗಿ ಹೋಗುವ ಸಾಧ್ಯತೆ ಇರತ್ತೆ. ಬೀಜಗಳು ಬರೋಕೆ ಶುರು ಆದ ನಂತರ ಸಾಮಾನ್ಯವಾಗಿ ಆ ಗಿಡಗಳ ಅವಧಿ ಮುಗಿಯುತ್ತ ಬಂತು ಅಂತ ಅರ್ಥ. ಆಮೇಲೆ ನಿಧಾನವಾಗಿ ಒಣಗೋಕೆ ಶುರು ಆಗತ್ತೆ ಹಾಗಾಗಿ ಬೀಜಗಳನ್ನು ಕಟ್ ಮಾಡಿ ತೆಗೆಯಬೇಕು.

ಎಷ್ಟೇ ಕೇರ್ ತಗೊಂಡ್ರು ಕೂಡಾ ತುಳಸಿ ಗಿಡ ಒಣಗುತ್ತಾ ಇದ್ದರೆ ಚಿಂತೆ ಬೇಡವೇ ಬೇಡ. ಒಣಗಿದ ಬೀಜಗಳು ಇರತ್ತೆ ಅಲ್ವಾ ಒಣಗಿದ ಬೀಜಗಳನ್ನು ಮಣ್ಣಲ್ಲಿ ಹಾಕುವುದರಿಂದ ಬೇಗ ಗಿಡಗಳು ಮತ್ತೆ ಬೆಳೆಯುತ್ತವೆ. ಕೈಯಲ್ಲಿ ಬೀಜಗಳನ್ನು ಉಜ್ಜಿಕೊಂಡು ಒಂದು ಮಣ್ಣು ತುಂಬಿದ ಪಾಟ್ ಗೆ ಹಾಕಿ ಮಣ್ಣಿನಲ್ಲಿ ಬೀಜಗಳನ್ನ ಹರಡಿ ನಂತರ ಮೇಲಿನಿಂದ ಹಸುವಿನ ಗೊಬ್ಬರ ಅಥವಾ ಎರೆಹುಳು ಗೊಬ್ಬರವನ್ನು ಹಾಕಬೇಕು. ಒಂದು ವಾರ ಅಷ್ಟರಲ್ಲಿ ಬೀಜ ಮೊಳಕೆ ಒಡೆದ ಸಣ್ಣ ಸಣ್ಣ ಸಸಿಗಳು ಆಗತ್ತೆ. ತುಳಸೀ ಗಿಡದ ಬೀಜಗಳು ಗಾಳಿಗೆ ಹಾರಿ ಹೋಗಿಯೇ ಮತ್ತೆ ಸಸಿಗಳು ಹುಟ್ಟಿಕೊಳ್ಳತ್ತೆ. ಅದರಲ್ಲೇ ಯಾವುದಾದರೂ ಚೆನ್ನಾಗಿ ಇರೋದನ್ನ ನೆಡಬಹುದು.

ಸಾಮಾನ್ಯವಾಗಿ ತುಳಸಿ ಗಿಡಕ್ಕೆ ಯಾವುದೇ ಕ್ರಿಮಿಗಳು, ಹುಳಗಳು ಬರಲ್ಲ ಆದರೂ ಕೆಲವೊಮ್ಮೆ ಚಳಿಗಾಲದ ಸಮಯದಲ್ಲಿ ಕೆಲವು ಕ್ರಿಮಿಗಳು ಬರಬಹುದು. ಅದಕ್ಕೆ ಔಷಧಿಯಾಗಿ ಕಾಫಿ ಪೌಡರ್ ಅಥವಾ ಡಿಕಾಕ್ಷನ್ ಮತ್ತೆ ಡೇಟಾಲ್ ಅನ್ನು ಮಿಕ್ಸ್ ಮಾಡಿ ನೀರಿನಲ್ಲಿ ಬೆರೆಸಿ ಹಾಕಬೇಕು.

Leave a Reply

Your email address will not be published. Required fields are marked *