ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಹಲವಾರು ಪ್ರವಾಸಿ ತಾಣಗಳನ್ನು ಇರಿಸಿಕೊಂಡಿದೆ. ವಿಶ್ವ ವಿಖ್ಯಾತ ಜೋಗ ಜಲಪಾತ ಒಂದೇ ಅಲ್ಲದೆ ಸಿಗಂಧೂರು ಚೌಡೇಶ್ವರಿ, ಕೊಲ್ಲೂರು ಮೂಕಾಂಬಿಕೆ ಅಂತಹ ಧಾರ್ಮಿಕ ಕ್ಷೇತ್ರಗಳು ಕೂಡಾ ಇದೆ. ರಾಜ್ಯದ ಪ್ರಮುಖ ದೇವಸ್ಥಾನಗಳು ಇರುವ ಈ ಸ್ಥಳಕ್ಕೆ ಪ್ರತಿ ನಿತ್ಯ ಭೇಟಿ ಕೊಡುವ ಭಕ್ತರ ಸಂಖ್ಯೆ ಅಪಾರವಾದದ್ದು. ಅಷ್ಟೇ ಅಲ್ಲದೆ ಪ್ರವಾಸಕ್ಕೆ ಅಂತ ಹೋಗುವ ಜನರೂ ಸಹ ಈ ದೇವಸ್ಥಾನಕ್ಕೆ ಭೇಟಿ ನೀಡಿಯೇ ಹೋಗುತ್ತಾರೆ. ಆದ್ರೆ ಇಲ್ಲಿಗೆ ಬರಬೇಕು ಅಂದರೆ ಈಗ ಇರುವ ದಾರಿ ಸುತ್ತಿ ಬಳಸಿ ಬರುವ ರಸ್ತೆ ಮಾರ್ಗ. ಇದನ್ನ ಕಡಿಮೆ ಮಾಡಬೇಕು ಎಂದೇ ರಾಜ್ಯ ಸರ್ಕಾರ ಶರಾವತಿ ಹಿನ್ನೀರಿಗೆ ಕೇಬಲ್ ಆಧಾರಿತ ಸೇತುವೆಯನ್ನು ನಿರ್ಮಾಣ ಮಾಡುತ್ತಿದೆ.

ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಶ್ರೀ ಬಿ ಎಸ್ ಯಡಿಯೂರಪ್ಪನವರು ಕೇಂದ್ರ ಮಂತ್ರಿ ನಿತಿನ್ ಗಢ್ಕರಿ ಅವರೊಂದಿಗೆ ಮಾತನಾಡಿ ಸುಮಾರು 450 ಕೋಟಿ ವೆಚ್ಚದಲ್ಲಿ ಕೇಬಲ್ ಆಧಾರಿತ ಬ್ರಿಡ್ಜ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ ಇದು ನಮ್ಮ ದೇಶದಲ್ಲಿಯೇ ಈ ಟೆಕ್ನಾಲಜಿಯನ್ನು ಹೊಂದಿರುವ ಎರಡನೇ ಸೇತುವೆ ಆಗಿದೇ. ಇದು ಸುಮಾರು 2125 ಮೀಟರ್, 2.14 ಕಿಲೋಮೀಟರ್ ಉದ್ದ ಮತ್ತು 16 ಮೀಟರ್ ಅಗಲವನ್ನ ಈ ಸೇತುವೆ ಹೊಂದಿರತ್ತೆ. ಇದರಿಂದ ಕಡಿಮೆ ಸಮಯದಲ್ಲಿ ತಲುಪಬಹುದಾದ ಮಲೆನಾಡು ಮತ್ತು ದಕ್ಷಿಣ ಕರ್ನಾಟಕದ ಸಂಪರ್ಕ ಸೇತುವೆ ಇದಾಗತ್ತೆ.

ಸಾಗರ ತಾಲೂಕಿನ ಶರಾವತಿ ನದಿಯ ಹಿನ್ನೀರಿಗೆ 423.15 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದ್ದು, ನಿರ್ಮಾಣ ಮುಗಿದ ನಂತರ ದೇಶದ ಎರಡನೇ ಅತೀ ದೊಡ್ಡ ಕೇಬಲ್ ಆಧಾರಿತ ಬ್ರಿಡ್ಜ್ ಎಂಬ ಹೆಗ್ಗಳಿಕೆಗೆಗೆ ಇದು ಪಾತ್ರ ಆಗಲಿದೇ. ಇದರ ಜೊತೆಗೇ ಶರಾವತಿ ಆಣೆಕಟ್ಟು ಮುಳುಗಡೆಯಿಂದ ಸಂಪರ್ಕ ಇಲ್ಲದೇ ಹಿಂದುಳಿದ, ಹೊಳೆಬಾಗಿಲು, ಸಿಗಂಧೂರು, ಕಳಸವಲ್ಲಿ, ತುಮೂರು ಈ ಭಾಗಗಳ ಅಭಿವೃದ್ಧಿಯೂ ಕೂಡಾ ಆಗತ್ತೆ. ಸಿಗಂಧೂರು ಚೌಡೇಶ್ವರಿ ಹಾಗೂ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನ ಇವೆರಡರ ನಡುವೆ ಸಂಪರ್ಕವನ್ನು ಈ ಸೇತುವೆ ನಿರ್ಮಿಸುತ್ತದೆ.

ಸಧ್ಯ ಸಿಗಂಧೂರಿನಿಂದ ಕೊಲ್ಲೂರಿಗೆ ರಸ್ತೆ ಮಾರ್ಗವಾಗಿ ಹೋಗಬೇಕು ಅಂದರೇ ಸುಮಾರು ೮೦ km ಸುತ್ತು ಹಾಕಿಕೊಂಡು ಹೋಗಬೇಕು. ಕೇಬಲ್ ಆಧಾರಿತ ಸೇತುವೆಯ ನಿಯಾನ ಆದ್ರೆ ಇಷ್ಟು ದೂರ ಕ್ರಮಿಸುವುದನ್ನು ತಪ್ಪಿಸಬಹುದು. ಜೊತೆಗೆ ಪ್ರಯಾಣಿಕರಿಗೂ ಹಾಗೂ ಸಾರಿಗೆ ಸಂಸ್ಥೆಗೂ ಕೂಡಾ ಇದು ಲಾಭ ಆಗಲಿದೆ. ಸಮಯದ ಉಳಿತಾಯದ ಜೊತೆಗೇ ವಾರ್ಷಿಕಾವಾಗಿ 32ಕೋಟಿ ಋಪಾಯಿ ಅಷ್ಟು ಇಂಧನ ಉಳಿತಾಯ ಕೂಡಾ ಆಗುತ್ತದೆ. ಈ ಒಂದು ಸೇತುವೆ ನಿರ್ಮಾಣ ಆಗುವುದರಿಂದ, ಸಿಗಂಧೂರು, ಕೊಲ್ಲೂರು, ಧರ್ಮಸ್ಥಳ, ಆನೆಗುಂದಿ, ಹಟ್ಟಿ ಅಂಗಡಿ ಹೀಗೆ ಮುಂತಾದ ದೇವಸ್ಥಾನಗಳಿಗೆ ಭೇಟಿ ನೀಡಲೂ ಸಹ ಸಂಪರ್ಕ ಕೊಂಡಿ ಆಗತ್ತೆ.

ಪಿಲ್ಲರ್ ಗಳನ್ನು ಬಳಸಿದ್ದರೂ ಸಹ ಕೇಬಲ್ ಗಳನ್ನು ಬಳಸಿ ಈ ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ.14 ಕಿಲೋಮೀಟರ್ ಉದ್ದ ಮತ್ತು 16 ಮೀಟರ್ ರಸ್ತೆಯಲ್ಲಿ, 11 ಮೀಟರ್ ರಸ್ತೆ ಹಾಗೂ ಎರಡೂ ಬದಿಯಲ್ಲಿ ತಲಾ 1.5 ಮೀಟರ್ ಅಷ್ಟು ಫುಟ್ ಪಾತ್ ಅನ್ನು ನಿರ್ಮಾಣ ಮಾಡಲಾಗುತ್ತದೆ. ದೇಶದಲ್ಲಿ ಈಗಾಗಲೇ ಒಂತಹ 6 ಸೇತುವೆಗಳು ಇದ್ದು ಇದು 7ನೇ ಸೇತುವೆ ಆಗಲಿದೆ. ರಾಜ್ಯದಲ್ಲಿ ಇಷ್ಟು ಉದ್ದದ ಮೊದಲ ಸೇತುವೆ ಎನಿಸಿಕೊಳ್ಳಲಿದೇ ಈ ಸೇತುವೆ. 2019 ಡಿಸೆಂಬರ್11 ರಿಂದಲೇ ಈ ಸೇತುವೆಯ ನಿರ್ಮಾಣ ಕಾರ್ಯ ಆರಂಭ ಆಗಿದ್ದು, ನಿಗದಿತವಾದ 36 ತಿಂಗಳುಗಳ ಕಾಲವಧಿಯಲ್ಲಿಯೇ ಇದು ಪೂರ್ಣಗೊಳ್ಳಲಿದೆ. ಹಾಗೂ ಮುಂದಿನ 10 ವರ್ಷಗಳ ಕಾಲ ಸೇತುವೆಯ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ವಹಿಸಿಕೊಡಲಾಗಿದೆ.

By

Leave a Reply

Your email address will not be published. Required fields are marked *