ಹೆಸರಿನ ಮೊದಲ ಅಕ್ಷರ ‘N’ ಆಗಿದ್ದರೆ ಇವರ ಗುಣ ಸ್ವಭಾವ ಹೇಗಿರತ್ತೆ ನೋಡಿ

0 12

ನಿಮ್ಮ ಹೆಸರು N ಅಕ್ಷರದಿಂದ ಆರಂಭ ಆಗುತ್ತಾ? ಹಾಗಿದ್ದರೆ ನಿಮ್ಮ ಹೆಸರು, ಗುಣ ಲಕ್ಷಣ ಹಾಗೂ ನಿಮ್ಮ ಚಟುವಟಿಕೆಗಳು ಯಾವ ರೀತಿ ಇರುತ್ತವೆ ಅನ್ನೋದನ್ನ ನೋಡೋಣ. N ಅಕ್ಷರಕ್ಕೆ ಸಂಖ್ಯೆ 5 ಬರುತ್ತದೆ ಈ ಸಂಖ್ಯೆ ಕಲ್ಪನೆ ಮತ್ತು ಸ್ವಾತಂತ್ರ್ಯ ಮತ್ತು ವಿನೋಧವನ್ನು ಪ್ರತಿನಿಧಿಸುತ್ತದೆ. ಈ ಹೆಸರಿನ ವ್ಯಕ್ತಿಯು ಸಾಮಾನ್ಯವಾಗಿ ಸಕ್ರಿಯ, ಧೈರ್ಯಶಾಲಿ ಹಾಗೂ ಅಷ್ಟಾಗಿ ಸಂಪ್ರದಾಯವನ್ನು ಅಷ್ಟಾಗಿ ಪಾಲಿಸದ ವ್ಯಕ್ತಿಗಳು ಆಗಿರುತ್ತಾರೆ. ಕೆಲವು ಊಹಿಸಲು ಆಗದಂತಹ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಇಷ್ಟೇ ಅಲ್ಲದೆ N ಅಕ್ಷರದಿಂದ ಆರಂಭ ಆಗುವ ಹೆಸರಿನ ವ್ಯಕ್ತಿಗಳಿಗೆ ಸ್ವಲ್ಪ ಇಂದ್ರಿಯಗಳ ಬಗ್ಗೆ ಆಕರ್ಷಣೆ ಜಾಸ್ತಿ. ಹಾಗಾಗಿ ಆದಷ್ಟು ಬೇಗ ಹೊಸ ವಿಷಯಗಳಿಗೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾರೆ.

ಸಂಖ್ಯೆ ಐದರ ಶಕ್ತಿಯು ಇಂತಹ ವ್ಯಕ್ತಿಗಳನ್ನು ಅವಕಾಶವಾದಿ ಮತ್ತು ಪ್ರಾಯೋಗಿಕ ಮನಸ್ಕನನ್ನಾಗಿ ಬೆಳೆಸಲು ಸಹಾಯ ಮಾಡುತ್ತದೆ. ಇಂತಹ ವ್ಯಕ್ತಿಗಳಿಗೆ ಅನುಸರಿಸುವ ಗುಣ ಸ್ವಲ್ಪ ಜಾಸ್ತಿಯಾಗಿಯೇ ಇರುತ್ತದೆ ಅದನ್ನ ಸ್ವಲ್ಪ ಕಡಿಮೆ ಮಾಡಿಕೊಂಡರೆ ಒಳ್ಳೆಯದು. ಅಷ್ಟೇ ಅಲ್ಲದೇ N ಅಕ್ಷರದಿಂದ ಆರಂಭ ಆಗುವ ಹೆಸರಿನ ವ್ಯಕ್ತಿಗಳು ತುಂಬಾ ಚಲವಾದಿಗಳು ಹಾಗೂ ಹಠವಾಧಿಗಳು ಆಗಿರುತ್ತಾರೆ. ಇವರು ಅಂದುಕೊಂಡಿದ್ದನ್ನು ಸಾಧಿಸುವವರೆಗೂ ಬಿಡದೇ ಸಾಧಿಸುವ ಚಲವನ್ನು ಹೊಂದಿರುತ್ತಾರೆ.

ಸಂಶೋಧಕ ಮತ್ತು ಪತ್ತೇದಾರಿ ಕೆಲಸಗಳಿಗೆ ಈ N ಅಕ್ಷರದ ಹೆಸರಿನ ವ್ಯಕ್ತಿಗಳು ಬಹಳ ಸೂಕ್ತರು. ಬೌದ್ಧಿಕ, ಕಲ್ಪನಾತ್ಮಕ ಮತ್ತು ತನಿಕಾತ್ಮಕ ಮತ್ತು ಕಲಿಕಾ ಸಾಮರ್ಥ್ಯ ಹೊಂದಿದ ವ್ಯಕ್ತಿ ಇವರಾಗಿರುತ್ತಾರೆ. ಜೀವನದಲ್ಲಿ ನಿರಂತರ ಚಟುವಟಿಕೆಯನ್ನು ಅನುಸರಿಸುತ್ತಾ ಬಾಳುತ್ತಾರೆ. ಅಂತರದಲ್ಲಿ ಬದಲಾಗುವ ಜೀವನ ಶೈಲಿ ಇವರದ್ದಾಗಿರುತ್ತದೆ. ಜೀವನದಲ್ಲಿ ಬದಲಾವಣೆಯನ್ನು ಮತ್ತು ಹೊಸ ಅನುಭವಗಳನ್ನು ಸ್ವಾಗತಿಸುತ್ತಾರೆ. ಮತ್ತು ಅವರ ಆಲೋಚನೆಯ ಸ್ವಾತಂತ್ರ್ಯ, ಕ್ರಿಯೆ ಕಲ್ಪನೆಗಳು ಮತ್ತು ಜೀವನ ಶೈಲಿಯಲ್ಲಿ ಸ್ವಾತಂತ್ಯ್ರವನ್ನು ಬಯಸುತ್ತಾರೆ.

ಯಾವುದೋ ಒಂದು ಕಾರ್ಯವನ್ನು ಕೈಗೆತ್ತಿಕೊಂಡು ಸಂಪೂರ್ಣವಾಗಿ ವಿಭಿನ್ನ ರೀತಿಯಲ್ಲಿ ಇವರು ಯೋಚನೆ ಮಾಡುತ್ತಾ ಚಲಿಸುತ್ತಾ ಇರುತ್ತಾರೆ. ಇದು ಇವರ ಸ್ವಾಭಿಕಾವದ ಗುಣ ಆಗಿರುತ್ತದೆ. ಬದಲಾವಣೆಯು ಜೀವನ ಮತ್ತು ಅದರ ಎಲ್ಲದರ ಬಗ್ಗೆಯೂ ಕುತೂಹಲವನ್ನು ಇವರಲ್ಲಿ ಇಡುತ್ತದೆ. ಅಸೂಯೆಗೆ ಒಳಗಾಗುವುದು ಇದು ಇವರ ಅತ್ಯಂತ ಕೆಟ್ಟ ಗುಣ. N ಅಕ್ಷರದನ್ನು ಆರಂಭ ಆಗುವ ಹೆಸರನ್ನು ಹಿಂದಿರುವ ವ್ಯಕ್ತಿಗಳು ಹೇಗೆ ಇರುತ್ತಾರೆ ಅಂತ ಗೊತ್ತಾದ್ರೆ ಅವರೇ ಅವರಲ್ಲಿ ಇರುವಂತಹ ಕೆಟ್ಟ ಗುಣಗಳನ್ನು ಸ್ವಲ್ಪ ಬದಲಾಯಿಸಿಕೊಂಡರೂ ಜೀವನದಲ್ಲಿ ಮುಂದೆ ಬೆಳೆಯಲು ತುಂಬಾ ಅನುಕೂಲ ಆಗುತ್ತದೆ.

Leave A Reply

Your email address will not be published.