ಮಗನನ್ನು ರೈತನನ್ನಾಗಿ ಮಾಡಲು ಪ್ರಯತ್ನಿಸುತ್ತಿರುವ ತಂದೆ ತಾಯಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ರಾಜೇಂದ್ರ ಸಿಂಗ್ ಹಾಗೂ ಅವರ ಪತ್ನಿ ಚಂಚಲ್ ಕೌರ್ ಮೂಲತಃ ರಾಜಸ್ಥಾನದ ಅಜ್ಮೇರ್ ನವರಾಗಿದ್ದು, ಈ ದಂಪತಿಗೆ 11 ವರ್ಷದ ಮಗನಿದ್ದಾನೆ. ರಾಜೇಂದ್ರ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಅವರ ಪತ್ನಿ ಚಂಚಲ್ ಸರ್ಕಾರಿ ಸ್ಟ್ಯಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಬ್ಬರು ಇಂದೋರ್ ಬಳಿಯ ಹಳ್ಳಿಯೊಂದರಲ್ಲಿ ಒಂದೂವರೆ ಎಕರೆ ಜಮೀನು ಖರೀದಿಸಿದ್ದು ಅಲ್ಲಿ ಅವರು ತಮ್ಮ ಮಗ ಗುರುಭಕ್ಷ್ ಸಿಂಗ್‍ಗೆ ರೈತನಾಗಲು ತರಭೇತಿ ನೀಡುತ್ತಿದ್ದಾರೆ. ದೊಡ್ಡ ನಗರದಲ್ಲಿ ಲಕ್ಷಗಟ್ಟಲೇ ಹಣವನ್ನು ಸಂಪಾದನೆ ಮಾಡುತ್ತಿದ್ದರೂ ಶುದ್ಧ ಗಾಳಿ ಹಾಗೂ ನೀರಿಗಾಗಿ ಹಂಬಲಿಸುತ್ತೇವೆ ಈ ಕಾರಣದಿಂದಾಗಿ ಮಗನಿಗೆ ಬೇರೆ ಜೀವನ ನೀಡಲು ನಿರ್ಧರಿಸಿ ಇಂದೋರ್ ನಲ್ಲಿ ಜಮೀನು ಖರೀದಿಸಿರುತ್ತಾರೆ.

ಸಾವಯವ ಕೃಷಿಯಿಂದ ಹಿಡಿದು ಎಲ್ಲದರಲ್ಲೂ ಮಗ ತನ್ನ ತಾಯಿಗೆ ಸಹಾಯ ಮಾಡುತ್ತಿದ್ದಾನೆ. ಊರಿನಲ್ಲಿ ಆತನಿಗೆ ಸಾಕಷ್ಟು ಸ್ನೇಹಿತರು ಪರಿಚಯವಾಗಿದ್ದು ಗುರುಭಕ್ಷ್ ಅವರು ಸೋಲಾರ್ ಕುಕ್ಕಿಂಗ್ ಹಾಗೂ ಕೃಷಿ ವಿಧಾನಗಳನ್ನು ಕಲಿಯುತ್ತಾನೆ. ಜೊತೆ ಆಟವಾಡುವಾಗ ಅವರಿಂದಲೂ ಗುರುಭಕ್ಷ್ ಕಲಿಯುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ಶಿಕ್ಷಣ ಮತ್ತು ಜೀವನಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ ಆದರೆ ಅವರು ತಮ್ಮ ಮಕ್ಕಳಿಗೆ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ. 2016ರಲ್ಲಿ ಚಂಚಲ್ 90 ಸಾವಿರ ಸಂಬಳದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ 2017ರಲ್ಲಿ ಚಂಚಲ್ ತಮ್ಮ ಮಗನ ಜೊತೆ ಇಂಧೋರ್ ಶಿಫ್ಟ್ ಆಗಿದ್ದಾರೆ. ಅಲ್ಲಿ ಸಾವಯವ ಕೃಷಿಯಲ್ಲಿ ಪದ್ಮಶ್ರೀ ಡಾ. ಜಾನಕ್ ಪಾಲ್ಟಾ ಅವರಿಂದ ತರಬೇತಿ ಪಡೆದಿದ್ದಾರೆ. ಜೊತೆಗೆ ಸೋಲಾರ್ ಕುಕ್ಕಿಂಗ್, ಸೋಲಾರ್ ಡ್ರೈವಿಂಗ್ ಕಲಿತಿದ್ದಾರೆ. ರಾಜೇಂದ್ರ ಹಾಗೂ ಚಂಚಲ್ ಅವರ ಮನೆಯಲ್ಲಿ ಸೋಲಾರ್ ಕುಕ್ಕಿಂಗ್ ಮೂಲಕ ಅಡುಗೆ ಮಾಡಲಾಗುತ್ತದೆ. ಅಲ್ಲದೆ ಅವರ ಜಮೀನಿನಲ್ಲಿ ಸಾವಯವ ರೀತಿಯಲ್ಲಿ ಬೆಳೆದ ತರಕಾರಿಗಳನ್ನು ಅಡುಗೆ ಮಾಡಲು ಉಪಯೋಗಿಸುತ್ತಾರೆ. ಚಂಚಲ್ ಗುರುಭಕ್ಷ್‍ಗೆ ವಿದ್ಯಾಭ್ಯಾಸದ ಜೊತೆಗೆ ಭವಿಷ್ಯದ ಮಾದರಿ ರೈತನಾಗಲು ಕೃಷಿ ತರಬೇತಿ ನೀಡುತ್ತಿದ್ದಾರೆ. ಇವರ ಪ್ರಯತ್ನ ಶ್ಲಾಘನೀಯ.

Leave a Reply

Your email address will not be published. Required fields are marked *