Post office recruitment 2024: ಇಂಡಿಯನ್ ಪೋಸ್ಟ್ ಆಫೀಸ್ ಆಗಾಗ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡುತ್ತಲೆ ಇರುತ್ತದೆ. ನಿರುದ್ಯೋಗಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಇಂಡಿಯನ್ ಪೋಸ್ಟ್ ಆಫೀಸನಲ್ಲಿ (Post Office) ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವೆಲ್ಲ ಅರ್ಹತೆಗಳಿರಬೇಕು, ಅರ್ಜಿಯನ್ನು ಸಲ್ಲಿಸುವ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಇಂಡಿಯನ್ ಪೋಸ್ಟ್ ಆಫೀಸ್ ಎಸ್ಎಸ್ಎಲ್ ಸಿ ಪಾಸಾದವರಿಗೆ ಉತ್ತಮ ಹುದ್ದೆಯ ಅವಕಾಶವನ್ನು ನೀಡಿದೆ. ಎಸ್ಎಸ್ಎಲ್ ಸಿ ಪಾಸಾದವರು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗವನ್ನು ಪಡೆಯಬಹುದು. ಪೋಸ್ಟ್ ಆಫೀಸ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿರುವ ಖಾಲಿ ಹುದ್ದೆಗಳ ವಿವರ, ಹುದ್ದೆಗೆ ವೇತನ, ಅರ್ಜಿ ಸಲ್ಲಿಕೆಯ ವಿವರದ ಬಗ್ಗೆ ತಿಳಿದುಕೊಳ್ಳಬೇಕು. ಸರ್ಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ಅಂಚೆ ಇಲಾಖೆಯ ಈ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಈ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕೆಲವು ಅರ್ಹತೆಗಳಿರಬೇಕು. ಅಭ್ಯರ್ಥಿಯು ಎಸ್ಎಸ್ಎಲ್ ಸಿ ಪಾಸ್ ಆಗಿರಬೇಕು. ಈ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗೆ ಕನಿಷ್ಠ 18 ರಿಂದ ಗರಿಷ್ಠ 40ವರ್ಷ ವಯಸ್ಸಾಗಿರಬೇಕು. ಸರ್ಕಾರದ ನಿಯಮಗಳ ಪ್ರಕಾರ ಎಸ್ ಸಿ ಎಸ್ ಟಿ ವರ್ಗದವರಿಗೆ ಮೂರು ವರ್ಷ ಮತ್ತು ಓಬಿಸಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಇದೆ. ಈ ಬೃಹತ್ ನೇಮಕಾತಿ ಅಧಿಸೂಚನೆಯ ಮೂಲಕ ಸುಮಾರು 32,000 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಸರ್ಕಾರಿ ಹುದ್ದೆಯಲ್ಲಿ ಆಯ್ಕೆ ಆದವರಿಗೆ 12 ರಿಂದ 14,000 ರೂಪಾಯಿ ವೇತನವನ್ನು ನೀಡಲಾಗುವುದು ಮತ್ತು ಸರ್ಕಾರದಿಂದ ಇರುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ.

ಈ ಸರ್ಕಾರಿ ನೌಕರಿಗೆ ಅರ್ಜಿ ಸಲ್ಲಿಸಲು ಬಯಸುವವರು ನೂರು ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮಹಿಳೆಯರು ಎಸ್ ಸಿ ಎಸ್ ಟಿ ಪಿಡಬ್ಲ್ಯೂಡಿ ಅಭ್ಯರ್ಥಿಗಳು ಯಾವುದೆ ಶುಲ್ಕ ಕಟ್ಟುವಂತಿಲ್ಲ. ಈ ಸರ್ಕಾರಿ ಉದ್ಯೋಗಕ್ಕೆ ಆಯ್ಕೆಯಾದವರು ನಿಯೋಜಿತವಾದ ಪೋಸ್ಟ್ ಆಫೀಸ್ ನ ದೈನಂದಿನ ಕಾರ್ಯಾಚರಣೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಈ ಸರ್ಕಾರಿ ಉದ್ಯೋಗಗಳಿಗೆ ಯಾವುದೆ ಲಿಖಿತ ಪರೀಕ್ಷೆ ನಡೆಸಲಾಗುವುದಿಲ್ಲ. ಉದ್ಯೋಗಕ್ಕಾಗಿ ಆಯ್ಕೆಯನ್ನು ಕೇವಲ ಮೆರಿಟ್ ಆಧಾರದ ಮೇಲೆ ಮಾಡಲಾಗುತ್ತದೆ. ಪೋಸ್ಟ್ ಆಫೀಸ್ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಬಯಸಿದರೆ ಆಯಾ ಅಧಿಕೃತ ವೆಬ್ ಸೈಟ್ ಗೆ ಹೋಗಿ ಸಂಪೂರ್ಣ ವಿವರಗಳನ್ನು ನಮೂದಿಸಿ ಅರ್ಜಿ ಸಲ್ಲಿಸಿ. ಈ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 26 ಎಂದು ನಿಗದಿಪಡಿಸಲಾಗಿದೆ. ಈ ಮಾಹಿತಿಯನ್ನು ಉದ್ಯೋಗ ಹುಡುಕುತ್ತಿರುವವರಿಗೆ ತಪ್ಪದೆ ತಿಳಿಸಿ.

By

Leave a Reply

Your email address will not be published. Required fields are marked *