ನುಗ್ಗೆ ಸೊಪ್ಪಿನಲ್ಲಿದೆ ಸಕ್ಕರೆಕಾಯಿಲೆ ಸೇರಿದಂತೆ 20 ಕ್ಕೂ ಹೆಚ್ಚು ಕಾಯಿಲೆಗಳನ್ನು ತಡೆಯುವ ಗುಣ

0 73

ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ನುಗ್ಗೆಕಾಯಿಯನ್ನು ಇಷ್ಟ ಪಡದವರು ಅತಿ ವಿರಳ. ನುಗ್ಗೆಕಾಯಿ ಮಾತ್ರವಲ್ಲದೆ ನುಗ್ಗೆಯ ಎಲೆಗಳು ಅಂದರೆ ನುಗ್ಗೆ ಸೊಪ್ಪು ಕೂಡ ಅಷ್ಟೇ ಪ್ರಯೋಜನಕಾರಿ. ನುಗ್ಗೆಕಾಯಿ ಅಷ್ಟೇ ಅಲ್ಲ, ಎಲೆ, ಬೇರು, ಹೂ, ತೊಗಟೆ ಎಲ್ಲವೂ ಆರೋಗ್ಯದ ದೃಷ್ಟಿಯಿಂದ ಮಹತ್ವ ಪಡೆದಿವೆ. ಹಾಗಾಗಿ ಇದು ಕೇವಲ ತರಕಾರಿಯಲ್ಲ, ಪೋಷಕಾಂಶಗಳ ಭಂಡಾರ ಎಂದರೆ ತಪ್ಪಾಗಲಿಕ್ಕಿಲ್ಲ. ನುಗ್ಗೆಕಾಯಿ ಮೊರಿಂಗೆಸೀ ಕುಟುಂಬಕ್ಕೆ ಸೇರಿದ್ದು ಇದರ ವೈಜ್ಞಾನಿಕ ಹೆಸರು ಮೊರಿಂಗಾ ಒಲೀಫೆರಾ. ನುಗ್ಗೆಯಲ್ಲಿ ಸುಮಾರು 20 ಪ್ರಕಾರದ ಅಮೈನೊ ಆಮ್ಲಗಳು ಹಾಗೂ 16 ಆಂಟಿ ಆಕ್ಸಿಡೆಂಟಗಳು ಇರುತ್ತವೆ. ನುಗ್ಗೆಕಾಯಿ ಸಾಮಾನ್ಯ ತರಕಾರಿಗಳಲ್ಲಿ ಒಂದು.

ಇದು ಉತ್ತಮ ಔಷಧಿಯ ಗುಣಗಳನ್ನು ಪಡೆದುಕೊಂಡಿದೆ. ಇದರ ಸಸ್ಯದ ಸೊಪ್ಪು ಉತ್ಕರ್ಷಣ ನಿರೋಧಕ ಮತ್ತು ಜೈವಿಕ ಸಕ್ರಿಯ ಸಸ್ಯ ಸಂಯುಕ್ತಗಳಿಂದ ಕೂಡಿದೆ. ಆಂಟಿ ಫಂಗಲ್, ಆಂಟಿ ವೈರಲ್, ಆಂಟಿ-ಡಿಪ್ರೆಸೆಂಟ್ ಮತ್ತು ಉರಿಯೂತದಂತಹ ಗುಣಲಕ್ಷಣಗಳೊಂದಿಗೆ ಅನೇಕ ಔಷಧೀಯ ಗುಣಗಳನ್ನು ಒಳಗೊಂಡಿದೆ.

ನುಗ್ಗೆ ಸೊಪ್ಪನ್ನು ತಾಜಾ ರೂಪದಲ್ಲಿ ಇರುವಾಗಲೇ ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಆದರೆ ಎಲ್ಲಾ ಸಮಯದಲ್ಲೂ ಈ ಸೊಪ್ಪು ಸಿಗಲು ಸ್ವಲ್ಪ ಕಷ್ಟ. ಹಾಗಾಗಿ ಮಾರುಕಟ್ಟೆಯಲ್ಲಿ ದೊರೆಯುವ ನುಗ್ಗೆ ಸೊಪ್ಪಿನ ಪುಡಿ ಅನ್ನು ಚಹಾ, ಕಷಾಯ, ಅನ್ನದ ಜೊತೆಗೆ ಅಥವಾ ಸಲಾಡ್‍ಗಳಿಗೆ ಸೇರಿಸಿಕೊಂಡು ಸವಿಯಬಹುದು ಇದರಿಂದ ಅನೇಕ ಸಮಸ್ಯೆ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ. ನುಗ್ಗೆ ಸೊಪ್ಪಿನಲ್ಲಿ ಹೇರಳ ಪ್ರಮಾಣದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಸಿ, ವಿಟಮಿನ್ ಬಿ 6 ಹಾಗೂ ರೈಬೋಫ್ಲೆವಿನ್ ಇರುತ್ತದೆ. ಇದಲ್ಲದೆ ಇದು ಪೊಟ್ಯಾಸಿಯಂ, ವಿಟಮಿನ್ ಎ, ವಿಟಮಿನ್ ಇ ಹಾಗೂ ಮ್ಯಾಗ್ನೆಷಿಯಂಗಳ ಆಗರವಾಗಿದೆ. ನುಗ್ಗೆ ಸೊಪ್ಪಿನ ಎಲೆಗಳಿಂದ ತಯಾರಿಸಲಾಗಿರುವ ಪೌಡರ್ ಹೇರಳ ಪ್ರಮಾಣದಲ್ಲಿ ಪ್ರೋಟಿನ್ ಹೊಂದಿದೆ. ಒಂದು ದೊಡ್ಡ ಸ್ಪೂನ್ ಪೌಡರ್ ನಲ್ಲಿ 3 ಗ್ರಾಂ ಪ್ರೋಟಿನ್ ಹಾಗೂ ಅತ್ಯಾವಶ್ಯಕ ಅಮೈನೊ ಆಸಿಡ್ ಗಳನ್ನು ಹೊಂದಿರುತ್ತದೆ. ಇವು ದೇಹದ ಖಂಡಗಳಗಳಿಗೆ ಶಕ್ತಿ ನೀಡಿ ಉತ್ಪಾದನೆ ಹಾಗೂ ಮನಸ್ಥಿತಿಯನ್ನು ಸುಧಾರಿಸುತ್ತದೆ.

ನುಗ್ಗೆ ಸೊಪ್ಪಿನಲ್ಲಿ ಜಠರದ ಆಕ್ಸಿಡಿಕರಣವನ್ನು ತಡೆಯಲು ಪಾಲಿಫೆನೋಲ್ಸ್ ಗಳ ಹೈ ಕಾಂಸನ್ಟ್ರೆಶನ್ ಇರುತ್ತದೆ. ಲಿವರ್ ಫೈಫ್ರೋಸಿಸ್ ಕಡಿಮೆ ಮಾಡಲು ಹಾಗೂ ಲೀವರ್ ಗೆ ಆಗುವ ಹಾನಿ ತಪ್ಪಿಸಲು ನುಗ್ಗೆ ಸೊಪ್ಪು ಸೇವಿಸುವುದು ಉತ್ತಮ. ನುಗ್ಗೆ ಸೊಪ್ಪಿನ ಪೌಡರ್ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ದೂರಗೊಳಿಸುತ್ತದೆ. ಇದರಿಂದ ನಿದ್ರಾಹೀನತೆ ಸಮಸ್ಯೆ ಕೂಡ ದೂರವಾಗುತ್ತದೆ. ಇದು ನಮ್ಮ ತ್ವಚೆಯನ್ನು ಕೂಡ ಸುಂದರಗೊಳಿಸುತ್ತದೆ. ನುಗ್ಗೆಸೊಪ್ಪಿನ ಪೌಡರ್ ನಿಂದ ತಯಾರಿಸಲಾಗಿರುವ ಫೆಸ್ ಪ್ಯಾಕ್ ನಿಂದ ಮೊಡವೆ, ಕಲೆಗಳು ಹಾಗೂ ಪಿಂಪಲ್ಸ್ ಗಳಂತಹ ಸಮಸ್ಯೆಗಳನ್ನು ನಿವಾರಿಸಬಹುದು. ಇದರಿಂದ ತ್ವಚೆಗೆ ಪೋಷಣೆ ಸಿಗುತ್ತದೆ ಮತ್ತು ನೈಸರ್ಗಿಕವಾಗಿ ತ್ವಚೆ ಹೊಳೆಯಲಾರಂಭಿಸುತ್ತದೆ. ಚಳಿಗಾಲದ ದಿನಗಳಲ್ಲಿ ಶೀತ, ನೆಗಡಿ, ಕೆಮ್ಮು ಮತ್ತು ವೈರಲ್ ಇನ್ಫೆಕ್ಷನ್ ಗಳಂತಹ ಸಮಸ್ಯೆಗಳು ಸಾಮಾನ್ಯ. ಇಂತಹುದರಲ್ಲಿ ನುಗ್ಗೆ ಸೊಪ್ಪಿನ ಸೇವನೆ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದಾಗಿದೆ.

ನುಗ್ಗೆ ಸೊಪ್ಪು ರಕ್ತದಲ್ಲಿ ಇರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ಇದನ್ನು ಮಧುಮೇಹಿಗಳು ಗಣನೀಯವಗಿ ಸೇವಿಸುವುದರಿಂದ ಮಧು ಮೇಹ ಮತ್ತು ರಕ್ತದೊತ್ತಡದಂತಹ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡುವುದು. ಈ ಸಂಗತಿಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆ ಹಾಗೂ ವರದಿಗಳನ್ನು ಸಾಭೀತು ಪಡಿಸಲಾಗಿದೆ. ಉರಿಯೂತವು ದೇಹದ ನೈಸರ್ಗಿಕ ಪ್ರಕ್ರಿಯೆಗಳಲ್ಲಿ ಒಂದು. ಇದು ದೇಹಕ್ಕೆ ರಕ್ಷಣಾತ್ಮಕ ವಿಧಾನದಲ್ಲಿ ಸಹಾಯ ಮಾಡುವುದು. ಆದರೆ ದೀರ್ಘ ಕಾಲಗಳ ವರೆಗೆ ಮುಂದು ವರಿದರೆ ಇದನ್ನು ಅತ್ಯಂತ ಹಾನಿಕಾರಕ ಸಮಸ್ಯೆ ಎಂದು ಸಹ ಹೇಳಲಾಗುವುದು. ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣ ಇದ್ದರೆ ಪರಿಣಾಮಕಾರಿಯಾದ ರೀತಿಯಲ್ಲಿ ನಿಯಂತ್ರಣದಲ್ಲಿ ಇಡುವುದು. ಅಧಿಕ ಕೊಲೆಸ್ಟ್ರಾಲ್ ಅಥವಾ ಹಾನಿಕಾರಕ ಕೊಬ್ಬುಗಳು ಹೃದಯದ ಆರೋಗ್ಯವನ್ನು ಹಾಳು ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳ ನಿಯಂತ್ರಣದಲ್ಲಿ ಇಟ್ಟು, ಅನಗತ್ಯವಾದ ಕೊಬ್ಬನ್ನು ತೆಗೆಯುವುದು. ಜೊತೆಗೆ ಹೃದಯ ಸಂಬಂಧಿ ಅನೇಕ ಸಮಸ್ಯೆ ಗಳನ್ನು ನಿಯಂತ್ರಣದಲ್ಲಿ ಇಡುವುದು.

ನುಗ್ಗೆಸೊಪ್ಪಿನ ಪುಡಿ ಪ್ರತಿದಿನ ಉಪಯೋಗಿಸುತ್ತ ಹೋದರೆ ಮಧುಮೇಹಿಗಳ ಸಕ್ಕರೆ ನಿಯಂತ್ರಣ ಮಾಡಬಹುದು. ಕೊಲೆಸ್ಟ್ರೋಲ್ ಕಡಿಮೆ ಮಾಡುವಲ್ಲಿ ಸಹಾಯ ಮಾಡುವುದು ನುಗ್ಗೆಸೊಪ್ಪಿನ ಪುಡಿ ಸೇವನೆ ಕ್ಯಾನ್ಸರ್ ಮತ್ತು ಹೃದಯ ರೋಗಿಗಳಿಗೆ ಒಂದು ಉಪಯುಕ್ತ ಔಷಧಿ ಮತ್ತು ರಕ್ತದೊತ್ತಡ ಕಡಿಮೆ ಮಾಡುವುದು ಗರ್ಭಿಣಿಯರು ನುಗ್ಗೆಸೊಪ್ಪನ್ನು ಆಹಾರದಲ್ಲಿ ಉಪಯೋಗಿಸುತ್ತಾ ಹೋದರೆ ಹೆರಿಗೆ ನೋವನ್ನು ಕಡಿಮೆ ಮಾಡಿ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ. ಹೆರಿಗೆಯ ನಂತರ ತಾಯಿಯ ಎದೆ ಹಾಲು ಹೆಚ್ಚುವುದರ ಜೊತೆಗೆ ಗರ್ಭಿಣಿಯರ ಹಾಗೂ ತಾಯಿಯ ದಿನನಿತ್ಯದ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶದ ಅವಶ್ಯಕತೆಯನ್ನು ಪೂರೈಸುವುದು ಇದರಲ್ಲಿ ಜೀವಸತ್ವ ಮತ್ತು ಖನಿಜಗಳ ಪ್ರಮಾಣ ಅತ್ಯಧಿಕವಾಗಿರುವುದರಿಂದ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು ರಕ್ತಶುದ್ಧಿಕರಣದಲ್ಲಿಯೂ ಕೂಡ ನುಗ್ಗೆ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ.

ನುಗ್ಗೆ ಸೊಪ್ಪಿನ ಸೇವನೆಯಿಂದ ಪಚನಕ್ರಿಯೆಗೆ ಸಂಭಂದಿಸಿದ ತೊಂದರೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುವುದು. ನುಗ್ಗೆಯಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೇರಳವಾಗಿರುವುದರಿಂದ ಮೂಳೆಗಳನ್ನು ಸದೃಡವಾಗಿಡಲು ಉಪಯೋಗಕಾರಿ ಕಬ್ಬಿಣಾಂಶದ ಕೊರತೆಯಿಂದ ಪ್ರೌಢಾವಸ್ಥೆಯಲ್ಲಿ ಹಾಗೂ ಮಹಿಳೆಯರಲ್ಲಿ ಕಾಣಬರುವ ಅನೀಮಿಯ ಕಡಿಮೆ ಮಾಡುವಲ್ಲಿ ಒಳ್ಳೆಯ ಔಷಧಿಯಾಗಿ ಕಾರ್ಯ ನಿರ್ವಹಿಸುವುದು. ಯಾವುದೇ ರೀತಿಯ ವೆಚ್ಚವನ್ನು ಮಾಡದೇ ಮನೆಯಲ್ಲಿಯೇ ನುಗ್ಗೆಸೊಪ್ಪಿನ ಪೌಡರನ್ನು ತಯಾರಿಸಿ ಅದರ ಉಪಯೋಗ ದಿನನಿತ್ಯದ ಆಹಾರದಲ್ಲಿ ಉಪಯೋಗ ಮಾಡಬಹುದು.

Leave A Reply

Your email address will not be published.