ಒಂದು ಎಕರೆ ಜಮೀನಿನಲ್ಲಿ ನುಗ್ಗೆಕಾಯಿಯನ್ನು ಬೆಳೆದು ಲಕ್ಷ ಲಕ್ಷ ಸಂಪಾದನೆ ಮಾಡಿರುವ ರೈತನ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಊರಿನ ಈ ರೈತನ ಹೆಸರು ಹಬೀದ್ ಪಾಷ. ಇವರಿಗೆ ತೋಟಗಾರಿಕೆ ಮಾಡಬೇಕು ಎಂದು ಅನಿಸಿದಾಗ ಸ್ನೇಹಿತರ ಬಳಿ ಸಲಹೆ ಕೇಳಿದಾಗ ಒಬ್ಬರು ನುಗ್ಗೆಕಾಯಿ ಬೆಳೆಯುವ ಸಲಹೆ ನೀಡಿದ್ದರು. ತೋಟಗಾರಿಕಾ ಇಲಾಖೆಯಿಂದ ಸಸಿಗಳನ್ನು ತಂದು ಬೆಳೆಸಿ ಅವುಗಳ ಜೊತೆ ಜೊತೆಗೆ ಒಂದೇ ಬೆಳೆಯನ್ನು ಬೆಳೆಯುವ ಬದಲು ಖಾಲಿ ಇರುವ ಜಾಗದಲ್ಲಿ ಕೊತ್ತಂಬರಿ, ಹೀರೆಕಾಯಿ, ಕೂಡಾ ಬೆಳೆಯಲು ಆರಂಭಿಸಿದ್ದರು. ಮೊದ ಮೊದಲು ಇವುಗಳನ್ನು ಹೇಗೆ ಮಾರಾಟ ಮಾಡುವುದು ಎನ್ನುವ ಸಮಸ್ಯೆ ಎದುರಾದರೂ ನಂತರ ಹತ್ತಿರದ ಅಂಗಡಿಗೆ ತೆಗೆದುಕೊಂಡು ಹೋಗಿ ಅಲ್ಲಿ ಮಾರಾಟ ಮಾಡಲು ಕೊಡುತ್ತಿದ್ದರು. ಇದರಿಂದ ಎಲ್ಲಾ ಮಾರಾಟ ಆಗುತ್ತಿತ್ತು.

ಇನ್ನು ಇವರು ಬೆಳೆದ ಯಾವುದೇ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ಹಸುವಿನ ಗೊಬ್ಬರ ಬಳಕೆ ಮಾಡಿದ್ದಾರೆ. ೪೦೦ ನುಗ್ಗೆ ಗಿಡಗಳನ್ನು ಬೆಳೆಸಿದ್ದು ಇವರ ಮೂಲ ಆದಾಯ ನುಗ್ಗೆಕಾಯಿ ಆಗಿದೆ. ಇದರ ಜೊತೆಗೆ ಕರಿಬೇವು , ನಿಂಬು ಗಿಡಗಳನ್ನೂ ಸಹ ಬೆಳೆಸಿದ್ದಾರೆ. ಹಾಗೆ ತಮ್ಮ ಜೊತೆ ಕೆಲಸಕ್ಕೆ ಬಂದವರಿಗೆ ಕೂಡಾ ಅವರು ಹಣ ತೆಗೆದುಕೊಳ್ಳದೆ ಇದ್ದಾಗ ಅವರಿಗೆ ೧೦೦ ನುಗ್ಗೆ ಗಿಡಗಳನ್ನೂ ನೀಡಿದ್ದಾರೆ. ಇವರ ಪ್ರಕಾರ ತಾವು ಬೇಳೇದಂತಹ ಬೆಳೆಗಳಿಂದ ಸಾಮಾನ್ಯವಾಗಿ ಎರಡು ಲಕ್ಷ ಆದಾಯ ಗಳಿಸಲು ಏನೂ ಯಾವುದೇ ಅಡ್ಡಿ ಇಲ್ಲ ಎಂದು ಹೇಳುತ್ತಾರೆ.

ಈ ವಿಡಿಯೋ ನೋಡಿ ಬೇರೆ ರೈತರಿಗೂ ಷೇರ್ ಮಾಡಿ ಇದರಿಂದ ಬೇರೆಯವರಿಗೂ ಸ್ಪೂರ್ತಿಯಾಗಬಹುದು ಧನ್ಯವಾದಗಳು

By

Leave a Reply

Your email address will not be published. Required fields are marked *