ಚಿರಂಜೀವಿ ಸರ್ಜಾ ಅವರು ಎಲ್ಲರನ್ನೂ ಅಗಲಿ ಸರಿ ಸುಮಾರು ಎರಡು ತಿಂಗಳುಗಳೇ ಕಳೆದಿದೆ. ಸಹೋದರ ಧ್ರುವ ಸರ್ಜಾ ಅವರಿಗೆ ಅಣ್ಣನ ಅಗಲಿಕೆಯ ನೋವು ಇನ್ನೂ ಮಾಸಿಲ್ಲ ಅಂತ ಅನಿಸುತ್ತದೆ. ನಿನ್ನೆ ಅಣ್ಣನ ಸಮಾಧಿಯ ಬಳಿ ಹೋಗಿದ್ದ ಧ್ರುವ ಸರ್ಜಾ ಚಿರು ನೆನಪಲ್ಲಿ ಮಾಡಿದ್ದಾದರೂ ಏನೂ? ಅಣ್ಣನ ನೆನಪಲ್ಲಿ ಭಾವುಕರಾಗಿ ಎನು ಹೇಳಿದ್ದಾರೆ ಎಂದು ಇಲ್ಲಿ ನೋಡೋಣ.

ತನ್ನ ಅಣ್ಣನನ್ನು ಕಳೆದುಕೊಂಡು ನೋವಿನಲ್ಲಿ ಇರುವ ಧ್ರುವ ಸರ್ಜಾ ತನ್ನ ಅಣ್ಣನನ್ನು ನೋಡಲು ಎಂದು ಆಗಾಗ ಚಿರು ಸಮಾಧಿಯ ಬಳಿ ಹೋಗಿ ಬರುತ್ತಾರೆ. ಅದೇ ರೀತಿ ನಿನ್ನೆ ಕೂಡಾ ಧ್ರುವ ಸರ್ಜಾ ಅವರು ಚಿರು ಸಮಾಧಿಯ ಬಳಿ ಭೇಟಿ ನೀಡಿದ್ದಾರೆ. ಅಷ್ಟೇ ಅಲ್ಲದೆ ತನ್ನ ಅಣ್ಣನ ಬಗ್ಗೆ ಈ ರೀತಿ ಆಗಿ ಬರೆದುಕೊಂಡಿದ್ದಾರೆ.

ಚಿರು ನನಗೆ ಅಣ್ಣ ಮಾತ್ರ ಅಲ್ಲ, ನನ್ನ ಬೆಸ್ಟ್ ಫ್ರೆಂಡ್, ನನ್ನ ಗೈಡ್, ನನ್ನ ಧೈರ್ಯ, ನನ್ನ ಎಲ್ಲವೂ ಆಗಿದ್ದವರು. ನನ್ನ ಪಾಲಿನ ನಿಜವಾದ ಹೀರೋ ಚಿರು. ನಿಜಕ್ಕೂ ಭೌತಿಕವಾಗಿ ನನ್ನಣ್ಣ ಚಿರು ನಮ್ಮ ಜೊತೆ ಇರದೇ ಇರಬಹುದು ಆದರೆ ನನ್ನ ಜೀವನದ ಪ್ರತೀ ಹೆಜ್ಜೆ ಪ್ರತೀ ಯಶಸ್ಸು ಹಾಗೂ ಪ್ರತೀ ಸಂದರ್ಭದಲ್ಲಿಯೂ ಅಣ್ಣಾ ಇದ್ದಾನೆ. ನನ್ನ ಜೀವನದಲ್ಲಿ ನನ್ನ ಹಿಂದೆ ನಿಂತು ಧೈರ್ಯ ತುಂಬಿ ಮುನ್ನಡೆಸುತ್ತಾ ಒಂದು ಶಕ್ತಿಯಾಗಿ ನನ್ನ ಜೊತೆ ಇದ್ದಾನೆ. ಆತ ಚಿರಂಜೀವಿ ನನ್ನ ಬಿಟ್ಟು ಎಲ್ಲೂ ಹೋಗಿಲ್ಲ. ಅವನ ನೆನಪು ಮತ್ತಷ್ಟು ಮಗದಷ್ಟು ಕಾಡುತ್ತಲೇ ಇರುತ್ತದೆ ಆ ಮೂಲಕ ನನ್ನ ಅಣ್ಣ ನನ್ನ ಕಣ್ಣಲ್ಲಿ, ನನ್ನ ನೆನಪುಗಳಲ್ಲಿ ಚಿರಂಜೀವಿ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

By

Leave a Reply

Your email address will not be published. Required fields are marked *