ಕೆಲವೊಂದು ವಿಚಿತ್ರ ದಂಪತಿಗಳನ್ನು ಯಾರೂ ಎಲ್ಲಿಯೂ ನೋಡಿರುವುದಿಲ್ಲ. ಇಲ್ಲಿ ನಾವು ಕೆಲವು ವಿಚಿತ್ರವಾಗಿದೆ ದಂಪತಿಗಳ ಬಗ್ಗೆ ತಿಳಿದುಕೊಳ್ಳೋಣ. ಮೊದಲ ಜೋಡಿ ಮೋನಿಕಾ ಮತ್ತು ಸಿದ್: ಇವರನ್ನ ನೋಡಿದ್ರೆ ಎಂತ ವಿಚಿತ್ರ ಜೋಡಿ ಅಂತ ಅನ್ನಿಸಬಹುದು. ಇವರಿಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸಿ ಮದುವೆ ಆದವರು. ಮೋನಿಕಾಳ ಈಗಿನ ತೂಕ 317 ಕೆಜಿ ಆದರೆ ಈಕೆಗೆ ತಾನು ಸಾವಿರ ಕೆಜಿ ಆಗಬೇಕೆಂಬ ಆಸೆಯಂತೆ ಇದಕ್ಕಾಗಿ ಈಕೆಯ ಗಂಡ ಕೂಡಾ ಇವಳಿಗೆ ಪ್ರತೀದಿನ ತಾನೇ ಆಹಾರವನ್ನು ತಯಾರಿಸಿ ತಿನ್ನಿಸುತ್ತಾನಂತೆ. ಇವರಿಬ್ಬರಿಗೆ ಮುದ್ದಾದ ಒಂದು ಮಗು ಕೂಡಾ ಇದೆ.

ಎರಡನೆಯ ಜೋಡಿ ಹೊರಾಲ್ಡ್ ನೆಸ್ಲಾಂಡ್ ಮತ್ತು ಕಜಸರಿನ್ ಕಜಸರಿನ್ ಅಕ್ಟ್ರೆಸ್ ಆಗಿದ್ದು, ಇವರು ಎಪ್ಪತ್ತು ವರ್ಷದ ಬೇಲಿನಿಯರ್ ಅನ್ನು ವಿವಾಹ ಆಗಿದ್ದಾರೆ. ಇವರು ಸಂತೋಷವಾಗಿ ಜೀವನ ನಡೆಸುತ್ತಾ ಇದ್ದು , ಪ್ರಾರ್ಥನೆ ಮತ್ತು ಧ್ಯಾನ ಮಾಡುವುದರಿಂದ ಉತ್ತಮ ಒಳ್ಳೆಯ ಜೋಡಿಯನ್ನು ಪಡೆಯಬಹುದು ಎನ್ನುವುದು ಇವರ ಅಭಿಪ್ರಾಯ.

ಮೂರನೇ ಜೋಡಿ ಸುಸನ್ನೆ ಎಮಾನ್ ಮತ್ತು ಪಾರ್ಕರ್ ಕ್ಲಾಕ್: ಸುಸನ್ನೆ ಎಮಾನ್ ತಾನು ಮೊದಲು ಹೇಳಿದ ಮೋನಿಕಾ ಗಿಂತಲೂ ೬೦೦ ಕೆಜಿ ಹೆಚ್ಚಬೇಕು ಅಂದರೆ, ೧೬೦೦ ಕೆಜಿ ಆಗಬೇಕು ಎಂಬ ಆಸೆಯಂತೆ. ಸುಸನ್ನೆ ಮತ್ತು ಪಾರ್ಕರ್ ನಡುವೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರೀತಿ ಉಂಟಾಗಿ ವಿವಾಹ ಆಗಿದ್ದರು. ಈಕೆಗೆ ತೂಕ ಹೆಚ್ಚಿಸಿಕೊಳ್ಳಲು ಒಂದು ಪ್ಲಸ್ ಪಾಯಿಂಟ್ ಎಂದರೆ ಈಕೆಯ ಗಂಡ ಪಾರ್ಕರ್ ಸ್ವತಃ ಶಫ್ ಆಗಿದ್ದು ಪ್ರತೀ ದಿನ ವಿಧ ವಿಧವಾದ ಆಗುಗೆಯನ್ನು ಮಾಡಿಸಿ ತಿನ್ನಿಸುತ್ತಾನಂತೇ. ಇವರಿಗೂ ಕೂಡಾ ಇಬ್ಬರೂ ಮಕ್ಕಳು ಇದ್ದಾರಂತೆ.

ಜೋಲಿಸನ್ ಮತ್ತು ಈವಂ: ಈ ಜೋಡಿ ಮಾತ್ರ ತುಂಬಾ ವಿಚಿತ್ರ ಎಂದು ಹೇಳಬಹುದು. ಜೋಲಿಸನ್ ಎತ್ತರ ಏಳು ಫೀಟ್ ಇದ್ದು ವಿಶ್ವದ ಮೂರನೇ ಅತೀ ಎತ್ತರದ ವ್ಯಕ್ತಿ ಎಂಬ ಹೆಸರಿಗೆ ಪಾತ್ರನಾಗಿದ್ದಾನೇ.

ಕ್ವಂಟಿನ್ ದೇಹರ್ ಮತ್ತು ಅನಸ್ತೆಸಿಯ; ಈ ಜೋಡಿ ಗೆ ಚಿಕ್ಕ ವಯಸ್ಸಿನಿಂದಲೂ ಗೊಂಬೆಗಳು ಅಂದರೆ ಬಹಳ ಇಷ್ಟವಂತೆ. ಹಾಗಾಗಿ ಇವರೂ ಕೂಡಾ ಗೊಂಬೆಗಳ ಹಾಗೆ ಇರಬೇಕು ಎಂದು ಆಸೆ ಪಡುತ್ತಾ ಇದ್ದಾರಂತೆ. ಗೊಂಬೆಗಳ ಹಾಗೆ ಇರಬೇಕು ಅಂತ ಅನ್ನಿಸಿದರೆ ಸಾಲದು ಎಂದು ಇಬ್ಬರೂ ಕೂಡಾ ಕ್ವಂಟಿನ್ ದೇಹರ್ ಕೆಂಡಾಲ್ ತರ ಸರ್ಜರಿ ಮಾಡಿಕೊಂಡಿದ್ದಾರಂತೆ. ಇನ್ನು ಅನಸ್ತೆಸಿಯ ಕೂಡಾ ತಾನೇನೂ ಕಡಿಮೆ ಇಲ್ಲ ಎನ್ನುವ ಹಾಗೆ ಬಾರ್ಬಿ ಡಾಲ್ ತರ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಇಬ್ಬರಿಗೂ ದುಡ್ಡು ಹೇಳಲಾರದಷ್ಟು ಇದ್ದು, ಹೀಗಿರುವಾಗ ಕ್ವಂಟಿನ್ ದೇಹರ್ ಗೆ ಅನಸ್ತೆಸಿಯ ಪರಿಚಯ ಆಗುತ್ತದೆ. ಇಬ್ಬರೂ ಜೊತೆ ಆಗುತ್ತಾರೆ ಹಾಗೇ ಈಗ ಇಬ್ಬರೂ ಬೇರೆ ಕೂಡಾ ಆಗಿದ್ದಾರೆ. ಇದಕ್ಕೆ ಕಾರಣ ಅನಸ್ತೆಸಿಯ ಕೂದಲಿಗೆ ಬಣ್ಣ ಬದಲಿಸಿದ್ದು ಇವರಿಬ್ಬರೂ ದೂರ ಆಗಲೂ ಕಾರಣ.

ಸೇನ್ನಲ್ ಮತ್ತು ಹೆಲೆನ್: ಇವರ ಹೆಸರುಗಳು ವಿಚಿತ್ರ ಎಂದರೆ ಈ ಜೋಡಿ ಮಾಡಿದ ಕೆಲಸ ಇನ್ನೂ ವಿಚಿತ್ರವಾಗಿದೆ. 62 ವರ್ಷದ ಹೆಲೆನ್ 9 ವರ್ಷದ ಸೆನ್ನೆಲ್ ಅನ್ನು ವಿವಾಹ ಆಗುವ ಮುನ್ನ ಇವಳಿಗೆ ಮದುವೆ ಆಗಿ ಐದು ಜನ ಮಕ್ಕಳು ಇದ್ದಾರಂತೆ. ಸೇನ್ನಲ್ ಪೂರ್ವಜರ ಆತ್ಮಗಳು ಹೆಲೆನ್ ಜೊತೆ ವಿವಾಹ ಆಗುವಂತೆ ಹೇಳಿದ್ದಾರಂತೆ. ಅದಕಾಗಿ ಇವರಿಬ್ಬರ ವಿವಾಹ ಆಗಿದೆ.

ಎಲ್ಜಿಬತ್ ಒಡ್: 42 ವರ್ಷದ ಎಲ್ಜಿಬತ್ ಯೂಕೆ ಅಲ್ಲಿ ಇದ್ದು ನಾಲ್ಕು ಜನರ ಜೊತೆ ವಿವಾಹ ಆಗಿದ್ದು , ನಾಲ್ಕು ಜನ ಗಂಡಂದಿರಿಗೆ ವಿಚ್ಛೇದನ ನೀಡಿ , ಯಾವುದೂ ಶಾಶ್ವತ ಅಲ್ಲ ಮತ್ತು ಪುರುಷರು ಒಳ್ಳೆಯವರು ಅಲ್ಲಾ ಎಂದು ಒಂದು ನಾಯಿಯ ಜೊತೆಗೆ ವಿವಾಹ ಆಗಿದ್ದಾರಂತೆ. ಅದೂ ಸಾಲದು ಅಂತಾ ಒಂದು ಬ್ರಿಟೀಷ್ ಟಿವಿ ಯಲ್ಲಿ ಲೈವ್ ನಲ್ಲಿ ವಿವಾಹ ಆಗಿದ್ದಾರಂತೆ. ಈಕೆಗೆ 25 ವರ್ಷದ ಮಗ ಕೂಡಾ ಇದ್ದಾನಂತೆ.

ಅಕಿಹಿಕೊ ಕೊಂಡೋ ಮತ್ತು ಮಿಕು: ಟೋಕಿಯೋ ಮೂಲದ ಕೊಂಡೊ ಒಬ್ಬ ವಿಡಿಯೋ ಗೇಮ್ ಡೆವಲಪರ್ ಆಗಿದ್ದ. ಈತ ಮಾಡುವ ಇಂದು ಗೇಮ್ ಕ್ಯಾರೆಕ್ಟರ್ ನೋಡಿ ಇವನಿಗೆ ಆ ಕ್ಯಾರೆಕ್ಟರ್ ಮೇಲೆ ತುಂಬಾ ಲವ್ ಆಗಿತ್ತು. ನಿಜಕ್ಕೂ ವಿಚಿತ್ರ ಇದು. ಮಿಕೂ ಎನ್ನುವ ಗೊಂಬೆ ತಯಾರಿಸಿ ಅವರಲ್ಲಿರುವ ಶಾಸ್ತ್ರ ಸಂಪ್ರದಾಯದ ಹಾಗೇ ಉಂಗುರ ತೊಡಿಸಿ ಮದುವೆ ಆಗಿದ್ದಾನೆ. ದಂಪತಿಗಳ ಹಾಗೇ ಜೀವನ ಕೂಡಾ ನಡೆಸುತ್ತಾ ಇದ್ದಾರೆ. ಎಂತಹ ವಿಚಿತ್ರ ಜನರು ಇರುತ್ತಾರೆ ನಮ್ಮ ಈ ಜಗತ್ತಿನಲ್ಲಿ

By

Leave a Reply

Your email address will not be published. Required fields are marked *