ತುಂಬು ಗರ್ಭಿಣಿ ಆಗಿರುವ ಮೇಘನಾ ರಾಜ್ ಅವರು ಈಗ ಹೇಗಿದ್ದಾರೆ, ಮನೆಯಲ್ಲಿ ಇವರು ಎನು ಮಾಡುತ್ತಾ ಇದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಿಗೆ ಇದ್ದೆ ಇರುತ್ತದೆ. ಚಿರು ಹೋದಮೇಲೆ ಅಭಿಮಾನಿಗಳು ಮೇಘನಾ ಅವರನ್ನು ತಮ್ಮ ಮನೇ ಮಗಳಂತೆ ಪ್ರೀತಿ ಕಾಳಜಿ ತೋರುತ್ತಿದ್ದಾರೆ. ಅಷ್ಟೊಂದು ಮೇಘನಾ ಅವರನ್ನು ಹಚ್ಚಿಕೊಂಡಿದ್ದು ಮಗುವಿನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಸರ್ಜಾ ಕುಟುಂಬ ಮಾತ್ರ ಅಲ್ಲದೆ ಇಡೀ ಕರುನಾಡೆ ಕಾಯುತ್ತಿದೆ ಎಂದರೆ ತಪ್ಪಾಗಲಾರದು. ತಮ್ಮ ಅಭಿಮಾನಿಗಳಿಗೆ ಮೇಘನಾ ರಾಜ್ ಆಗಲೀ, ಸರ್ಜಾ ಕುಟುಂಬ ಆಗಲೀ ಯಾವುದೇ ರೀತಿಯಲ್ಲಿ ನೋವುಂಟು ಮಾಡಲಿಲ್ಲ. ಸರ್ಜಾ ಕುಟುಂಬದ ಮನೆಯ ಬಳಿ ಪ್ರತೀ ದಿನ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನೀಗಳು ಸೇರುತ್ತಾರೆ. ಯಾರ ಜೊತೆಗೂ ಯಾರ ಮನಸ್ಸಿಗೂ ನೋವು ಆಗದ ಹಾಗೇ ಎಲ್ಲರ ಜೊತೆಗೂ ಚೆನ್ನಾಗಿ ಮಾತನಾಡಿಸಿ ಕಳುಹಿಸುತ್ತಾರೆ. ಮೇಘನಾ ಅವರಿಗೆ ಮತ್ತೆ ಗಂಡು ಮಗು ಹುಟ್ಟಲಿ ಚಿರು ಸರ್ಜಾ ಮತ್ತೆ ಹುಟ್ಟಿ ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಾ ಇದ್ದಾರೆ.

ಈಗ ಕರೋನ ಒಂದು ಕಡೆ ಆದರೆ ಮೇಘನಾ ರಾಜ್ ತುಂಬು ಗರ್ಭಿಣಿ. ಹೊರಗಡೆ ಎಲ್ಲೂ ಸುತ್ತಾಡಲು ಹೋಗುವ ಹಾಗೇ ಇಲ್ಲ. ಮನೆಯಲ್ಲಿಯೇ ರೆಸ್ಟ್ ತೆಗೆದುಕೊಳ್ಳಬೇಕು. ಆದರೆ ಮನೆಯಲ್ಲಿಯೇ ಕುಳಿತು ಸಮಯ ಕಳೆಯದೆ, ತಮ್ಮ ಸಮಯ ಕಳೆಯುವ ಸಲುವಾಗಿ ಇವರೇ ಸ್ವತಃ ಒಂದು ಉಪಾಯವನ್ನು ಕಂಡುಕೊಂಡಿದ್ದಾರೆ. ಮೇಘನಾ ಅವರಿಗೆ ಮೊಬೈಲ್ ನಲ್ಲಿ ಗೇಮ್ ಆಡಲು ತುಂಬಾ ಇಷ್ಟವಂತೆ ಹಾಗಾಗಿ ಈಗ ತಮ್ಮ ಸಮಯ ಕಳೆಯಲು ಮೊಬೈಲ್ ನಲ್ಲಿ ಆನ್ಲೈನ್ ಮೂಲಕ ಫ್ರೆಂಡ್ಸ್ ಜೊತೆಗೆ ಲೂಡೋ ಆಟ ಆಡಲು ಆರಂಭಿಸಿದ್ದಾರೆ. ಹಾಗೂ ಆನ್ಲೈನ್ ನಲ್ಲಿ ಸಿನಿಮಾ ಕೂಡಾ ನೋಡುತ್ತಾರಂತೆ ಈ ಮೂಲಕ ಇವರಿಗೆ ಕಾಲ ಹರಣ ಆಗುತ್ತದೆ. ಇನ್ನು ಮೇಘನಾ ಅವರ ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳಾ ಕೂಡಾ ಇವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾ ಇದ್ದು, ಅಕ್ಟೋಬರ್ ತಿಂಗಳಿನಲ್ಲಿ ಮಗು ಬರುವ ನಿರೀಕ್ಷೆಯಲ್ಲಿದ್ದಾರೆ.

ಕೆಲವು ನೆನಪುಗಳನ್ನು ಮರೆಯಲು ಸಾಧ್ಯ ಇಲ್ಲ ಆದರೂ ಮೇಘನಾ ನೆನಪುಗಳ ಜೊತೆಗೆ ಜೀವನ ನಡೆಸಿಕೊಂಡು ಹೋಗುತ್ತಾ ಇದ್ದಾರೆ. ಇನ್ನೂ ಪ್ರತೀ ದಿನ ಕೂಡಾ ಧ್ರುವ ಸರ್ಜಾ ಹಾಗೂ ಅವರ ತಂದೆ ತಾಯಿ ಕೂಡಾ ಫೋನ್ ಮೂಲಕ ಮೇಘನಾ ಜೊತೆ ಮಾತನಾಡುತ್ತಾರೆ. ನೇರವಾಗಿ ಯಾರನ್ನೂ ಭೇಟಿ ಆಗದೇ ಇದ್ದರೂ ಕೂಡಾ ಮೇಘನಾ ಫೋನ್ ಮೂಲಕ ಎಲ್ಲರ ಜೊತೆಗೂ ಸಂಪರ್ಕದಲ್ಲಿ ಇದ್ದಾರೆ. ಪ್ರತೀ ದಿನ ಆನ್ಲೈನ್ ಗೇಮ್ ಆಡುವ ಮೂಲಕ, ಸಿನೆಮಾ ನೋಡುವ ಮೂಲಕ ಸಮಯ ಕಳೆಯುತ್ತಾ ಇದ್ದಾರೆ. ಚಿರು ಅಗಲಿದಾಗ ಮೇಘನಾ ಅವರನ್ನು ಭೇಟಿ ಮಾಡಲು ಚಿತ್ರ ರಂಗದ ಗಣ್ಯರು ಆಗಾಗ ಬಂದು ಮಾತನಾಡಿಸುತ್ತಾ ಇದ್ದರು. ಈಗ ಸಧ್ಯ ಮೇಘನಾ ಅವರ ಯಾವುದೇ ಫೋಟೋಗಳೂ ಕೂಡಾ ಸಾಮಾಜಿಕ ಜಾಲ ತಾಣಗಳಲ್ಲಿ ಲಭ್ಯವಿಲ್ಲ.

By

Leave a Reply

Your email address will not be published. Required fields are marked *