ಮಿನುಗುತಾರೆ ಕಲ್ಪನಾ ಅವರನ್ನು ನಟನೆಯಲ್ಲಿ ಮೀರಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗಲಾರದು, ಆದರೆ ಕಲ್ಪನಾ ಅವರು ಬೇಗನೆ ತಮ್ಮ ಜೀವನದ ಯಾನವನ್ನು ಮುಗಿಸುತ್ತಾರೆ. ಇದಕ್ಕೆ ಕಾರಣವೇನು ಹಾಗೂ ಅವರ ಜೀವನದ ಕೆಲವು ಘಟನೆಯನ್ನು ಕಲಾತಪಸ್ವಿ ರಾಜೇಶ್ ಅವರು ಹೇಳಿದ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ದೇವಿರಪ್ಪ ಎನ್ನುವವರು ಬರೆದ ಕಾದಂಬರಿ ಬೆಳುವಲದಮಡಿಲಲ್ಲಿ ಇಷ್ಟವಾಗಿ ನಿರ್ಮಾಪಕ ಸೋಮಸುಂದರಂ ಅವರು ಗೀತಪ್ರಿಯ ಅವರನ್ನು ಸಂಪರ್ಕಿಸಿ ಅವರ ತಂದೆ ರಾಜೇಶ್ ಅವರ ಬಳಿ ಈ ಕಾದಂಬರಿಯನ್ನು ಸಿನಿಮಾ ಮಾಡಲಿದ್ದು ಅದರಲ್ಲಿ ಪಾತ್ರ ಮಾಡಲು ಹೇಳಿದರು ರಾಜೇಶ್ ಅವರು ಸಮಯ ಕೇಳಿದರು ಕಾದಂಬರಿ ಓದಲು. ಕಾದಂಬರಿ ಓದಿದ ನಂತರ ಅದ್ಭುತವಾದ ಕಥೆಯಾಗಿತ್ತು ಚಾಲೆಂಜಿಂಗ್ ರೋಲ್ ಆಗಿತ್ತು. ರಾಜೇಶ್ ಅವರು ಈ ಸಿನಿಮಾದಲ್ಲಿ ಕಲ್ಪನಾ ಅವರನ್ನು ನಟಿಯಾಗಿ ಆಯ್ಕೆ ಮಾಡಿದರು. ಆದರೆ ಉಳಿದವರು ಒಪ್ಪಿಕೊಳ್ಳಲಿಲ್ಲ ಕಾರಣ ಕಲ್ಪನಾ ಅವರು ಶೂಟಿಂಗ್ ಗೆ ಲೇಟಾಗಿ ಬರುತ್ತಿದ್ದರು. ರಾಜೇಶ್ ಅವರು ಅವರಿಗೆ ನಾನು ತಿಳಿಸಿ ಹೇಳುತ್ತೇನೆ ಎಂದು ಹೇಳಿದರು ಜೊತೆಗೆ ಬಿಜ್ಜಳ್ಳಿಯಲ್ಲಿ ಶೂಟಿಂಗ್ ನಡೆಯುತ್ತಿರುವುದರಿಂದ ಕಲ್ಪನಾ ಅವರಿಗೂ ಹಾಗೂ ರಾಜೇಶ್ ಅವರಿಗೂ ಬೇರೆಬೇರೆ ವ್ಯವಸ್ಥೆ ಮಾಡಲಾಯಿತು. ಕಲ್ಪನಾ ಹಾಗೂ ರಾಜೇಶ್ ಕಾಂಬಿನೇಷನ್ ನಲ್ಲಿ ಸುಮಾರು 22 ಸಿನಿಮಾಗಳು ನಿರ್ಮಾಣವಾಯಿತು. ಕಲ್ಪನಾ ಅವರು 11ಗಂಟೆಗೆ ಶೂಟಿಂಗ್ ಗೆ ಬರುತ್ತಿದ್ದರು ನಿರ್ಮಾಪಕರು ಬೇಗ ಬರುವಂತೆ ಹೇಳಿದರು ಅವರು ಕೇಳುತ್ತಿರಲಿಲ್ಲ. ಕಲ್ಪನಾ ಅವರು 5 ಗಂಟೆಗೆ ಎದ್ದು ಮೊಟ್ಟೆ ಸ್ನಾನ ಮಾಡಿ ಅರ್ಧಗಂಟೆ ರೆಸ್ಟ್ ಮಾಡಿದನಂತರ ಜ್ಯೂಸ್ ಕುಡಿದು, ಮೇಕಪ್ ಮಾಡಿಕೊಂಡು ಕಾಸ್ಟ್ಯೂಮ್ ಹಾಕಿಕೊಳ್ಳುತ್ತಾರೆ ಇಷ್ಟೆಲ್ಲ ಮಾಡುವವರೆಗೆ 11ಗಂಟೆ ಆಗುತ್ತದೆ ಎಂದು ಕಲ್ಪನಾ ಅವರ ಆಪ್ತ ಸಹಾಯಕಿ ರಾಜೇಶ್ ಅವರ ಹತ್ತಿರ ಹೇಳಿದ್ದರಂತೆ. ಬೆಳುವಲದಮಡಿಲಲ್ಲಿ ಸಿನಿಮಾ ಶೂಟಿಂಗ್ ನಡೆಯುವಾಗ ರಂಗಭೂಮಿ ನಟ, ನಿರ್ಮಾಪಕ ಗುಡಿಗೇರಿ ಬಸವರಾಜ ಎಂಬುವವರು ಅಲ್ಲಿಗೆ ಬರುತ್ತಾರೆ.

ಕಲ್ಪನಾ ಅವರು 11ಗಂಟೆಗೆ ಶೂಟಿಂಗ್ ಗೆ ಬರುವುದರಿಂದ ನಿರ್ಮಾಪಕರಿಗೆ ಬೇಸರವಾಗಿ ಬೇಡಿಕೆ ಕಡಿಮೆಯಾಯಿತು. ಈ ಸಮಯದಲ್ಲಿ ಬಸವರಾಜ ಅವರು ನಾಟಕದಲ್ಲಿ ಅಭಿನಯಿಸಲು ಕಲ್ಪನಾ ಅವರೊಂದಿಗೆ ಒಪ್ಪಂದ ಮಾಡಿಕೊಂಡರು. ಕಲ್ಪನಾ ಅವರು ನಾಟಕದಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ದಿನಕಳೆದಂತೆ ಬಸವರಾಜ ಹಾಗೂ ಕಲ್ಪನಾ ಅವರ ನಡುವೆ ಪ್ರೀತಿ ಬೆಳೆಯಿತು ಮದುವೆಯಾಯಿತು, ಆದರೆ ಇಬ್ಬರ ನಡುವೆ ಜಗಳಗಳು ಆಗುತ್ತಿತ್ತು ಹೊಡೆದಾಟಕ್ಕೂ ತಿರುಗಿತು. ಕಲ್ಪನಾ ಅವರು ಒಮ್ಮೆ ನಾಟಕದ ಕಂಪನಿಯಲ್ಲಿಯೇ ಮರಣಹೊಂದಿದರು ಕೆಲವರು ಅವರು ವಿಷ ಕುಡಿದು ಸತ್ತರು ಎಂದು ಹೇಳುತ್ತಾರೆ. ಇನ್ನು ಕೆಲವರು ಬಸವರಾಜ ಅವರು ಹೊಡೆದು ಸಾಯಿಸಿದರು ಎಂದು ಹೇಳುತ್ತಾರೆ. ಕಲ್ಪನಾ ಅವರು ಅಭಿನಯದಲ್ಲಿ ಅವರಿಗೆ ಅವರೇ ಸಾಟಿ ಆಗಿದ್ದರು ಎಂದು ರಾಜೇಶ್ ಅವರು ಹೇಳಿದರು. ಬೆಳವಲದಮಡಿಲಲ್ಲಿ ಸಿನಿಮಾವನ್ನು ರೇಡಿಯೋದಲ್ಲಿ ಧಾರವಾಹಿಯಾಗಿ ಪ್ರಸಾರ ಮಾಡಲಾಯಿತು. ಕಲಾತಪಸ್ವಿ ರಾಜೇಶ್ ಅವರು ಪಿತಾಮಹ, ಕಲಿಯುಗ, ಸೊಸೆ ತಂದ ಸೌಭಾಗ್ಯ ಇನ್ನು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಲಿಯುಗ ಸಿನಿಮಾವನ್ನು ಬೇರೆ ಬೇರೆ ಭಾಷೆಗಳಲ್ಲಿ ಡಬ್ಬಿಂಗ್ ಮಾಡಿದ್ದಾರೆ ಎಲ್ಲ ಭಾಷೆಗಳಲ್ಲಿಯೂ ಈ ಸಿನಿಮಾ ಹಿಟ್ ಆಗಿದೆ ಇದಕ್ಕೆ ಕಾರಣ ಚಿತ್ರಕಥೆ ಎಂದು ರಾಜೇಶ್ ಅವರು ತಮ್ಮ ಸಿನಿಮಾ ಬಗ್ಗೆ ಹೇಳಿಕೊಂಡರು.

Leave a Reply

Your email address will not be published. Required fields are marked *