ಹಾಲಿನ ಜೊತೆ ಬೆಲ್ಲವನ್ನು ಸೇರಿಸಿ ಕುಡಿಯುವುದರಿಂದ ಆಗುವ ಉಪಯೋಗಗಳು

0 2

ಸಾಮಾನ್ಯವಾಗಿ ಜಗತ್ತಿನಲ್ಲಿ ಬಹುತೇಕ ಜನರು ಹಾಲಿನ ಜೊತೆಗೆ ಸಕ್ಕರೆಯನ್ನು ಸೇರಿಸಿ ಕುಡಿಯುವುದನ್ನು ನಾವು ನೋಡಿರುತ್ತೇವೆ ಮತ್ತು ನಾವುಗಳು ಕೂಡ ಮಾಡುತ್ತಿರುವುದು ಅದೇ ಆಗಿರುತ್ತದೆ, ಆದರೆ ಸಕ್ಕರೆಯನ್ನು ಬಿಟ್ಟು ನಾವು ಹಾಲಿನೊಂದಿಗೆ ಬೆಲ್ಲವನ್ನು ಸೇರಿಸಿ ಕುಡಿಯುವುದು ಅತ್ಯಂತ ಉಪಯಾಕಾರಿಯೂ ಹೌದು ಎಂದರೆ ನೀವು ನಂಬುತ್ತಿರಾ ಹೌದು ನಂಬಲೆ ಬೇಕು. ಯಾಕಂದ್ರೆ ಭಾರತದಲ್ಲಿ ಬೆಲ್ಲಕ್ಕೆ ಮತ್ತು ಹಾಲಿಗೆ ಅದರದ್ದೇ ಆದ ಮಹತ್ವವಿದೆ ಆದ್ದರಿಂದಲೇ ಶುಭಕಾರ್ಯಗಳಲ್ಲಿ ಹೆಚ್ಚಾಗಿ ಹಾಲನ್ನು ಮತ್ತು ಬೆಲ್ಲವನ್ನು ಸಹ ಬಳಸಲಾಗುತ್ತದೆ.

ಹೊಸ ಮನೆಯ ಗೃಹ ಪ್ರವೇಶದ ಸಮಯದಲ್ಲಿ ಒಲೆಯ ಮೇಲೆ ಹಾಲನ್ನು ಉಕ್ಕಿಸಿ ಪ್ರಾರಂಭಿಸಲಾಗುತ್ತದೆ, ಯಾಕಂದ್ರೆ ಹಾಲು ಅಮೃತಕ್ಕೆ ಸಮಾನ ಅಲ್ಲದೇ ಬೆಲ್ಲವೂ ಕೂಡ ಒಂದು ಮುಖ್ಯವಾದ ವಸ್ತು ಮದುವೆಯಾದ ಹೆಣ್ಣು ಮನೆಯೊಳಗೆ ಬರುವ ಮುನ್ನ ಅಕ್ಕಿ ಬೆಲ್ಲ ತುಂಬಿದ ಸೇರನ್ನೇ ಹೊದ್ದು ಮನೆಯ ಒಳಗೆ ಪ್ರವೇಶ ಮಾಡುವುದು, ಹಾಗಾದ್ರೆ ಬೆಲ್ಲವನ್ನು ಹಾಲಿನ ಜೊತೆ ಸೇರಿಸಿ ಕುಡಿಯುವುದರಿಂದ ನಮ್ಮ ದೇಹಕ್ಕೆ ಆಗುವ ಲಾಭಗಳ ಬಗ್ಗೆ ಒಂದಷ್ಟು ಆರೋಗ್ಯಕಾರಿ ಉಪಯೋಗಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಹಾಲಿನ ಜೊತೆ ಬೆಲ್ಲವನ್ನು ಸೇರಿಸಿ ಪ್ರತಿನಿತ್ಯ ಎರಡೂ ಬಾರಿ ಅಥವಾ ಒಂದು ಬಾರಿಯಾದರೂ ಕುಡಿಯುವುದರಿಂದ ಬೆಲ್ಲದಲ್ಲಿರುವ ಅಧಿಕ ಕಬ್ಬಿಣದ ಅಂಶವು ನಮ್ಮ ದೇಹದಲ್ಲಿನ ಸ್ನಾಯುಗಳು ಮತ್ತು ಮೂಳೆಗಳನ್ನು ಗಟ್ಟಿಗೊಳಿಸುತ್ತದೆ ಮತ್ತು ಮನುಷ್ಯನ ದೇಹವನ್ನು ಶಕ್ತಿಯುತವಾಗಿಡಲು ಇದು ಬಹಳ ಸಹಾಯಕಾರಿಯಾಗಿರುತ್ತದೆ. ಇನ್ನು ರಕ್ತದಲ್ಲಿರುವ ಬೇಡವಾದ ಕೊಬ್ಬಿನ ಅಂಶವನ್ನು ಇದು ತೆಗೆದುಹಾಕುವುದಲ್ಲದೇ ರಕ್ತವನ್ನು ಇದು ಶುದ್ಧೀಕರಿಸುತ್ತದೆ ಮತ್ತು ಒಣ ಕೆಮ್ಮು ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ.

ಹೆಚ್ಚಾಗಿ ಹಾಲಿನ ಜೊತೆಗೆ ಬೆಲ್ಲವನ್ನು ಸೇರಿಸಿ ಸೇವಿಸುವುದರಿಂದ ಇದು ದೇಹದಲ್ಲಿನ ನಮ್ಮ ಜೀರ್ಣ ಕ್ರಿಯೆಗೆ ಸಹಾಯಕರಿಯಾಗಿರುತ್ತದೆ ಮತ್ತು ಮನುಷ್ಯನ ದೇಹಕ್ಕೆ ತಕ್ಷಣದಲ್ಲಿ ಶಕ್ತಿಯನ್ನು ಒದಗಿಸುವುದಲ್ಲದೇ, ಮಹಿಳೆಯರಲ್ಲಿ ಉಂಟಾಗುವ ಋತು ಚಕ್ರ ಕ್ರಿಯೆಯಿಂದ ಮಹಿಳೆಯರ ದೇಹದಲ್ಲಿ ಮತ್ತು ಗರ್ಭ ಕೋಶದಲ್ಲಿ ಉಂಟಾಗುವ ನೋವನ್ನು ಇದು ಕಡಿಮೆ ಮಾಡುತ್ತದೆ.

ಹಲವಾರು ಜನರು ಅನೀಮಿಯಾ ಕಾಯಿಲೆಯಿಂದ ಬಳಲುವುದನ್ನು ನಾವು ಕಂಡಿದ್ದೇವೆ ಅಂತವರು ಹಾಲಿನ ಜೊತೆಗೆ ಬೆಲ್ಲವನ್ನು ಸೇರಿಸಿ ದಿನದಲ್ಲಿ ಒಂದು ಬಾರಿಯಾದರೂ ಕುಡಿಯುವುದರಿಂದ ಅವರಲ್ಲಿರುವ ಆನಿಮೀಯ ಕ್ರಮೇಣ ಕಡಿಮೆಯಾಗಿ ಉತ್ತಮ ಆರೋಗ್ಯವನ್ನು ತಾವು ಹೊಂದಬಹುದಾಗಿದೆ, ಈ ರೀತಿ ಬೆಲ್ಲವನ್ನು ಸೇರಿಸಿದ ಹಾಲನ್ನು ಕುಡಿಯುವುದರಿಂದ ವಯಸ್ಸಾದವರಲ್ಲಿ ಮತ್ತು ಗೃಹಿಣಿಯರಲ್ಲಿ ಕಂಡು ಬರುವ ಕೀಲು ನೋವು ಅತ್ಯಂತ ಸುಲಭ ರೀತಿಯಲ್ಲಿ ಕಡಿಮೆಯಾಗುವುದರಲ್ಲಿ ಎರಡು ಮಾತಿಲ್ಲ ಮತ್ತು ದೇಹದಲ್ಲಿ ಹೊಸ ರಕ್ತದ ಕಣಗಳನ್ನು ಉತ್ಪತ್ತಿ ಮಾಡುವುದರಲ್ಲಿ ಸಹಾಯ ಮಾಡುತ್ತದೆ ಮತ್ತು ಚರ್ಮಕೆ ಉತ್ತಮ ಕಾಂತಿಯನ್ನು ನೀಡುವುದಲ್ಲದೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಆಸ್ತಮಾ ಇರುವವರಿಗಂತೂ ಇದು ಉತ್ತಮ ಮನೆಮದ್ದು ಆಗಿದೆ ನಿಮ್ಮ ಆತ್ಮೀಯರಿಗೂ ಇದನ್ನು ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

Leave A Reply

Your email address will not be published.