ಕಣ್ಣಿನ ಕೆಳಗೆ ಇರುವ ಕಪ್ಪು ಕಲೆ ನಿವಾರಿಸಲು ಮನೆ ಮದ್ಧು
ಸಾಮಾನ್ಯವಾಗಿ ಜನರ ಅತ್ಯಾಧುನಿಕ ಜೀವನ ಶೈಲಿಯಿಂದಲೋ ಅಥವಾ ಯುವಕರು ಹೆಚ್ಚಿನ ಧೂಮಪಾನ ಮಾಡುವುದರಿಂದಲೋ ದೇಹದಲ್ಲಿನ ವಿಟಮಿನ್ ಸಿ ನ ಕೊರತೆಯಿಂದಲೋ ರಾತ್ರಿ ಇಡೀ ಕಂಪ್ಯೂಟರ್ ನ ಮುಂದೆ ಕುಳಿತು ಕೆಲಸ ಮಾಡುವುದರಿಂದಲೋ ಅಥವಾ ಹೆಚ್ಚು ಹೊತ್ತು ರಾತ್ರಿ ವೇಳೆಯಲ್ಲಿ ಮೊಬೈಲ್ ಬಳಸುವುದರಿಂದಲೋ ಹೆಚ್ಚಿನ ಜನರಲ್ಲಿ ಕಣ್ಣಿನ ಕೆಳ ಭಾಗದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ, ಕಣ್ಣಿನ ರಕ್ಷಣೆಯನ್ನು ಮಾಡಬೇಕಾದದ್ದು ನಮ್ಮ ಕರ್ತವ್ಯವೂ ಕೂಡ ಯಾವುದೇ ಕಾರಣಕ್ಕೂ ಹೀಗೆ ಕಪ್ಪಾದ ಕಣ್ಣಿನ ಕೆಳ ಭಾಗವನ್ನು ಉಜ್ಜಿಕೊಳ್ಳುವುದಾಗಲಿ ಅಥವಾ ಬೇರೇ ಯಾವುದೇ ರೀತಿಯ ಒರಟಾಗಿ ಅದನ್ನು ತೀಡುವುದಾಗಲಿ ಮಾಡಬಾರದು.
ಯಾಕಂದ್ರೆ ಕಣ್ಣು ಬಹಳ ಸೂಕ್ಷ್ಮವಾದ ಮಾನವನ ಒಂದು ಅಂಗ ಆದ್ದರಿಂದ ಕಣ್ಣಿನ ಕೆಳ ಭಾಗದಲ್ಲಿ ಉಂಟಾಗುವ ಕಪ್ಪು ಕಲೆಗಳನ್ನು ನಾವು ಬಹಳ ಸೂಕ್ಷ್ಮವಾಗಿ ನಿಭಾಯಿಸುವುದು ಒಳಿತು ಮತ್ತು ಈ ರೀತಿಯಾದ ಕಣ್ಣಿನ ಕೆಳಭಾಗದಲ್ಲಿ ಉಂಟಾಗುವ ಕಲೆಯನ್ನು ನಾವು ಬಹಳ ಸುಲಭವಾಗಿ ಮನೆಯಲ್ಲಿಯೇ ವಾಸಿ ಮಾಡಿಕೊಳ್ಳಬಹುದು, ಹಾಗಾದರೆ ಈ ಕಪ್ಪು ಕಳೆಗಳನ್ನು ನಿವಾರಿಸಿಕೊಳ್ಳುವ ಬಗೆಗಳ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಕಾಲು ಚಮಚ ಬಾದಾಮಿ ಎಣ್ಣೆಗೆ ಕಾಲು ಚಮಚ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಕಪ್ಪಾಗಿರುವ ಕಣ್ಣಿನ ಕೆಳ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ಆ ಕಲೆಗಳು ಶೀಘ್ರದಲ್ಲಿ ವಾಸಿಯಾಗುತ್ತವೆ, ಇನ್ನು ಕಣ್ಣಿನ ಆಯಾಸ ಕಡಿಮೆ ಮಾಡಲು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು, ನಂತರ ತಣ್ಣನೆ ನೀರಿನಿಂದ ಕೂಡ ಕಣ್ಣನ್ನು ತೊಳೆಯಿರಿ. ಇದು ರಕ್ತ ಸಂಚಲನವನ್ನು ಸುಗಮವಾಗಿಸುವುದರ ಮೂಲಕ ಕಪ್ಪು ವೃತ್ತ ಹೋಗಲಾಡಿಸುತ್ತದೆ.

ಅಡುಗೆಗೆ ಬಳಸುವಂತ ಸೌತೆಕಾಯಿಯನ್ನು ಡಾರ್ಕ್ ಸರ್ಕಲ್ ಅಂದರೆ ಕಣ್ಣಿನ ಸುತ್ತಲೂ ಆಗಿರುವಂತ ಕಪ್ಪು ಕಲೆ ನಿವಾರಿಸಲು ಬಳಸಬಹುದು ಹೇಗೆ ಅನ್ನೋದನ್ನ ನೋಡುವುದಾದರೆ, ಸೌತೆಕಾಯಿಯ ರಸವನ್ನು ಪ್ರತಿದಿನ ಕಣ್ಣಿನ ಸುತ್ತ ಹಚ್ಚಿ ಮತ್ತು ಹತ್ತು ನಿಮಿಷದ ನಂತರ ಶುದ್ಧವಾದ ನೀರಿನಿಂದ ಟೊಎದುಕೊಳ್ಳಬೇಕಾಗುತ್ತದೆ..
ಇನ್ನು ಮತ್ತೊಂದು ಮನೆಮದ್ದು ಯಾವುದು ಅನ್ನೋದನ್ನ ನೋಡುವುದಾದರೆ ನಿಂಬೆ ಹಣ್ಣು ಮತ್ತು ಸೌತೆ ಕಾಯಿ ಹೌದು ಈ ಎರಡನ್ನು ತಗೆದುಕೊಂಡು ಸಮಪ್ರಮಾಣದಲ್ಲಿ ಬೆರೆಸಿ ಅದರ ರಸವನ್ನು ಪ್ರತಿದಿನ ಹಚ್ಚಿ ಮತ್ತು ಹತ್ತು ನಿಮಿಷಗಳ ನಂತರ ನೀರಿನಲ್ಲಿ ತೊಳೆದುಕೊಂಡರೆ ಕಣ್ಣಿನ ಸುತ್ತಲಿನ ಕಪ್ಪು ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.