ಮೇಷರಾಶಿ: ಧೈರ್ಯ ಇವರ ಹುಟ್ಟುಗುಣ ಆದ್ರೆ, ಇವರ ಗುಣಸ್ವಭಾವ ಹೇಗಿರತ್ತೆ ಗೊತ್ತಾ

0 8

ದ್ವಾದಶ ರಾಶಿಗಳಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ಗುಣ ಸ್ವಭಾವ, ಭವಿಷ್ಯವನ್ನು ಹೊಂದಿರುತ್ತಾರೆ. ಆಯಾ ರಾಶಿಗೆ ತಕ್ಕಹಾಗೆ ಅವರವರ ಗುಣ ಸ್ವಭಾವ, ಒಳ್ಳೆಯ ಮತ್ತು ಕೆಟ್ಟ ಫಲಗಳನ್ನು ಅನುಭವಿಸುತ್ತಾರೆ. ಅದರಂತೆ ಮೇಷ ರಾಶಿಯವರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮೇಷ ರಾಶಿಯವರ ಅಧಿಪತಿ ಮಂಗಳಗ್ರಹನಾಗಿದ್ದಾನೆ. ಮಂಗಳ ಗ್ರಹ ಪರಾಕ್ರಮ ಹಾಗೂ ಉತ್ಸಾಹದ ಪ್ರತೀಕವಾಗಿದ್ದಾನೆ. ಮೇಷ ರಾಶಿಯವರು ನೋಡಲು ಆಕರ್ಷಕರಾಗಿ, ಸುಂದರವಾಗಿರುತ್ತಾರೆ ಹಾಗೂ ಕಲಾತ್ಮಕರಾಗಿರುತ್ತಾರೆ. ಈ ರಾಶಿಯವರು ಸ್ವಾತಂತ್ರವನ್ನು ಇಷ್ಟಪಡುತ್ತಾರೆ. ಇವರು ಯಾವುದೆ ವಿಷಯದ ಬಗ್ಗೆ ಸರಿ ತಪ್ಪುಗಳ ವಿಚಾರದಲ್ಲಿ ತಮ್ಮದೆ ಆದ ದೃಷ್ಟಿಕೋನವನ್ನು ಹೊಂದಿರುತ್ತಾರೆ. ಇವರು ಆಶಾವಾದಿಗಳಾಗಿರುತ್ತಾರೆ ಹಾಗೂ ಮುಗ್ಧರಾಗಿರುತ್ತಾರೆ. ಮೇಷ ರಾಶಿಯವರು ಬಹಳ ಪ್ರಾಮಾಣಿಕರಾಗಿರುತ್ತಾರೆ ಜೊತೆಗೆ ಇವರು ಮೋಸಕ್ಕೆ ಒಳಗಾಗುತ್ತಾರೆ.

ಈ ರಾಶಿಯವರನ್ನು ಬಹಳ ಬೇಗ ಪ್ರಭಾವಿಸಬಹುದು ಜೊತೆಗೆ ಈ ರಾಶಿಯವರು ತಾವುಗಳು ಇಷ್ಟಪಡುವವರ ಮೇಲೆ ಅಧಿಕಾರ ಚಲಾಯಿಸುತ್ತಾರೆ. ಮೇಷ ರಾಶಿಯವರು ಸ್ವಾಭಿಮಾನಿಗಳಾಗಿರುತ್ತಾರೆ, ಕೀರ್ತಿ ಹಾಗೂ ಲಾಭವನ್ನು ಬೇರೆಯವರಿಂದಾಗಲಿ ಮೋಸದಿಂದಾಗಲಿ ಪಡೆಯಲು ಇಷ್ಟಪಡುವುದಿಲ್ಲ. ಈ ರಾಶಿಯವರು ತಮ್ಮದೆ ಆದ ನೀತಿ ನಿಯಮಗಳನ್ನು ಇಟ್ಟುಕೊಂಡು ಅದರಂತೆ ಬದುಕುತ್ತಾರೆ. ಇವರು ಸಂಗೀತ ಕಲೆಯನ್ನು ಇಷ್ಟಪಡುತ್ತಾರೆ.

ಮೇಷ ರಾಶಿಯವರು ಪರಿಶ್ರಮಿಗಳಾಗಿದ್ದಾರೆ ಹಾಗೂ ತಮ್ಮ ಸ್ನೇಹಿತರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ, ಸ್ನೇಹಿತರಿಗಾಗಿ ಹಣ ಸಮಯವನ್ನು ಮೀಸಲಿಡುತ್ತಾರೆ. ಮೇಷ ರಾಶಿಯವರಿಗೆ ಸಮಯಪ್ರಜ್ಞೆ ಚೆನ್ನಾಗಿರುತ್ತದೆ, ಇವರು ಸುಳ್ಳು ಹೇಳುವುದಿಲ್ಲ. ಮೇಷ ರಾಶಿಯವರು ಶಿಸ್ತಿನಿಂದ ಜೀವನ ನಡೆಸುತ್ತಾರೆ. ಇವರು ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಈ ರಾಶಿಯವರಿಗೆ ಯಾರಾದರೂ ಮೋಸ ಮಾಡಿದರೆ ಬಹಳ ದುಃಖ ಪಡುತ್ತಾರೆ ಜೊತೆಗೆ ಬಹಳ ಬೇಗನೆ ಮರೆತುಬಿಡುತ್ತಾರೆ. ಇವರು ಬೇರೆಯವರ ಆದೇಶವನ್ನು ಪಡೆಯಲು ಇಷ್ಟ ಪಡುವುದಿಲ್ಲ. ಬೇರೆಯವರ ಮುಂದೆ ಬಗ್ಗದೆ ಇರುವ ಇವರ ಈ ಗುಣ ಇವರನ್ನು ಆಕರ್ಷಿತರನ್ನಾಗಿ ಮಾಡುತ್ತದೆ.

ಈ ರಾಶಿಯವರಿಗೆ ತಾಳ್ಮೆ ಬಹಳ ಕಡಿಮೆ ಇವರಿಗೆ ಕೋಪ ಹೆಚ್ಚು ಬರುತ್ತದೆ, ಇವರನ್ನು ಬೇಗನೆ ಶಾಂತಗೊಳಿಸಬಹುದು. ಇವರು ತಮಗೆ ಕೊಟ್ಟ ಕೆಲಸವನ್ನು ಮುಗಿಸದೆ ವಿಶ್ರಾಂತಿ ಪಡೆಯುವುದಿಲ್ಲ. ಇವರು ತಮ್ಮ ಸಂಗಾತಿಯನ್ನು ಸ್ನೇಹಿತರಂತೆ ನೋಡುತ್ತಾರೆ. ಇವರು ಯಾರಿಗೂ ಮೋಸ ಮಾಡುವುದಿಲ್ಲ ಹಾಗೂ ಇವರಿಗೆ ಮೋಸ ಮಾಡುವವರನ್ನು ಕಂಡರೆ ಆಗುವುದಿಲ್ಲ. ಇವರು ಉತ್ತಮ ಸಲಹೆಗಾರರಾಗಿರುತ್ತಾರೆ. ಇವರು ಬೇರೆಯವರಿಂದ ಸಹಾಯ ಪಡೆಯಲು ಇಷ್ಟ ಪಡುವುದಿಲ್ಲ. ಇವರು ಹೊರಗಿನಿಂದ ಬಹಳ ಶಿಸ್ತುಬದ್ಧರಂತೆ ಕಾಣುತ್ತಾರೆ ಆದರೆ ಇವರಿಗೆ ಪ್ರೀತಿ, ಕರುಣೆ ಇರುತ್ತದೆ.

ಮೇಷ ರಾಶಿಯವರು ಭಾವನಾತ್ಮಕ ಜೀವಿ ಆಗಿರುತ್ತಾರೆ. ಇವರಿಂದ ಹಿಂದೆ ಉಳಿಯಲು, ಸೋಲಲು ಆಗುವುದಿಲ್ಲ. ಇವರು ಕ್ಲೀನ್ ಆಗಿರುವುದನ್ನು ಇಷ್ಟ ಪಡುತ್ತಾರೆ. ಇವರು ಹಠವಾದಿ ಆಗಿರುತ್ತಾರೆ ಮತ್ತು ಬುದ್ಧಿವಂತರು ಆಗಿರುತ್ತಾರೆ. ಇವರು ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುತ್ತಾರೆ. ಇವರು ಜನ್ಮ ಸ್ಥಾನದಿಂದ ದೂರ ಇದ್ದರೆ ಸಫಲಾರಾಗುತ್ತಾರೆ. ಇವರಿಗೆ ತಲೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಖಾಯಿಲೆ ಬರಬಹುದು. ಇವರಿಗೆ ರಾಜಕೀಯ, ಲಾಯರ್, ಪೊಲೀಸ್, ಅಗ್ನಿಗೆ ಸಂಬಂಧಿಸಿದ ಕೆಲಸ, ಟೇಲರಿಂಗ್, ಟೀಚರ್, ಕಂಪನಿಗೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ.

ಇವರು ಕೋಪವನ್ನು ಕಡಿಮೆ ಮಾಡಿಕೊಳ್ಳಬೇಕು. ಯೋಗ, ಧ್ಯಾನ ಮಾಡಬೇಕು. ಇವರು ಸ್ವಾಭಿಮಾನಿಗಳಾಗಿರುವುದರಿಂದ ಬೇರೆಯವರಿಗೆ ಅಹಂಕಾರಿಗಳೆಂದು ಕಾಣಿಸುತ್ತದೆ, ಇವರು ಸ್ವಲ್ಪ ಯೋಚನೆ ಮಾಡಿ ಮಾತನಾಡಬೇಕು. ಈ ರಾಶಿಯವರು ಶಿವ ಮತ್ತು ಸುಬ್ರಮಣ್ಯ ದೇವರ ಆರಾಧನೆ ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ಮೇಷ ರಾಶಿಯವರಿಗೆ ತಿಳಿಸಿ.

Leave A Reply

Your email address will not be published.