ಮೇಘನಾ ರಾಜ್ ಅವರು ಚಿರು ಅವರನ್ನು ಕಳೆದುಕೊಂಡ ದುಃಖವನ್ನು ಅವರ ಮಗ ಜ್ಯೂನಿಯರ್ ಚಿರು ಅವರ ಮುಖ ನೋಡಿ ಮರೆತು ಸಂತಸ ಪಡುತ್ತಿದ್ದಾರೆ. ಇದೀಗ ಜ್ಯೂನಿಯರ್ ಚಿರು ಅವರಿಗೆ ಹೆಸರನ್ನಿಡುವ ನಾಮಕರಣ ಕಾರ್ಯಕ್ರಮವನ್ನು ನಡೆಸಿದರು. ಜ್ಯೂನಿಯರ್ ಚಿರು ಅವರ ನಾಮಕರಣದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡು ಮೇಘನರಾಜ್ ಕುಟುಂಬ ಮತ್ತು ಚಿರಂಜೀವಿ ಸರ್ಜಾ ಅವರ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿತ್ತು. ನಂತರ ಚಿರಂಜೀವಿ ಸರ್ಜಾ ಅವರ ಮಗ ಜ್ಯೂನಿಯರ್ ಚಿರು ಬಂದ ನಂತರ ಮಗುವಿನ ಮುಖ ನೋಡಿ ಎರಡು ಕುಟುಂಬದವರು ಸಂತೋಷ ಪಟ್ಟರು. ಇದೀಗ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಮಗನಿಗೆ ಜ್ಯೂನಿಯರ್ ಚಿರು ಎಂದೆ ಕರೆಯಲಾಗುತ್ತಿತ್ತು ಈಗ ಅವನಿಗೆ ರಾಯನ್ ರಾಜ್ ಸರ್ಜಾ ಎಂದು ಅದ್ದೂರಿಯಾಗಿ ನಾಮಕರಣ ಮಾಡಲಾಯಿತು. ಜ್ಯೂನಿಯರ್ ಚಿರು ಅವರ ನಾಮಕರಣವನ್ನು ಕ್ರೈಸ್ತ ಮತ್ತು ಹಿಂದೂ ಸಂಪ್ರದಾಯದ ಪ್ರಕಾರ ನಡೆಸಲಾಯಿತು. ಜ್ಯೂನಿಯರ್ ಚಿರು ಅವರ ಅಜ್ಜನಾದ ಸುಂದರರಾಜ್ ಅವರು ತನ್ನ ಮೊಮ್ಮಗನನ್ನು ಪ್ರೀತಿಯಿಂದ ಚಿಂಟು ಎಂದು ಕರೆಯುತ್ತಾರೆ.

ನಾಮಕರಣದ ಸಂದರ್ಭದಲ್ಲಿ ಮೇಘನಾ ರಾಜ್ ಹಾಗೂ ಚಿರು ಅವರ ಸುಂದರ ಕ್ಷಣಗಳ ವಿಡಿಯೋವನ್ನು ಪ್ಲೆ ಮಾಡಲಾಯಿತು. ಈ ಸಮಯದಲ್ಲಿ ನಟಿ ಮೇಘನಾ ರಾಜ್ ಅವರು ಚಿರು ಅವರನ್ನು ನೆನೆದು ಭಾವುಕರಾದರು. ಜ್ಯೂನಿಯರ್ ಚಿರು ಅವರ ನಾಮಕರಣದಲ್ಲಿ ಅನೇಕ ಗಣ್ಯರು ಭಾಗವಹಿಸಿದ್ದರು. ಮೇಘನಾ ರಾಜ್ ಮತ್ತು ಚಿರು ಅವರ ಕುಟುಂಬದವರು, ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಸರ್ಜಾ ಸಿನಿಮಾ ನಟ ನಟಿಯರು ಭಾಗವಹಿಸಿ ಜ್ಯೂನಿಯರ್ ಚಿರುನನ್ನು ಹರಸಿದರು. ಮೇಘನಾ ರಾಜ್ ಅವರ ಮಗನಿಗೆ ರಾಯನ್ ಎಂದು ಕ್ರೈಸ್ತ ಧರ್ಮದ ಹೆಸರನ್ನು ಇಟ್ಟಿರುವುದರಿಂದ ಜ್ಯೂನಿಯರ್ ಚಿರು ಅವರ ನಾಮಕರಣ ವಿವಾದಕ್ಕೀಡಾಯಿತು.

ಮೇಘನಾ ರಾಜ್ ಹಾಗೂ ಧ್ರುವ ಸರ್ಜಾ ಅವರ ಕುಟುಂಬದವರು ತಾವು ಮಗುವಿಗೆ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದಂತೆ ಹೆಸರನ್ನು ಇಡಲಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಕೆಲವರು ಮಗುವಿನ ನಾಮಕರಣ ವಿಷಯದಲ್ಲೂ ಜಾತಿಮತಗಳ ವಿಚಾರ ಬೇಕಾ ಎಂದು ಪ್ರಶ್ನಿಸಿದ್ದಾರೆ. ಸುಂದರರಾಜ್ ಅವರು ಹಿಂದೂ ಕುಟುಂಬದವರು ಪ್ರಮೀಳಾ ಜೋಷಾಯಿ ಅವರು ಕೂಡ ಮೊದಲು ಹಿಂದೂಧರ್ಮದವರಾಗಿದ್ದರು.

ಕನ್ವರ್ಟ್ ಆದ ನಂತರ ಕ್ರಿಶ್ಚಿಯನ್ ಧರ್ಮದವರಾದರು. ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯಿ ಅವರು ಪ್ರೀತಿಸಿ ಕ್ರಿಶ್ಚಿಯನ್ ಧರ್ಮದಂತೆ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಅವರ ಮಗಳಾದ ಮೇಘನಾ ರಾಜ್ ಅವರು ಮಲಯಾಳಂ ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ನಂತರ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರು ಪ್ರೀತಿಸಿ ಕ್ರಿಶ್ಚಿಯನ್ ಧರ್ಮ ಮತ್ತು ಹಿಂದೂ ಸಂಪ್ರದಾಯದಂತೆ ಮದುವೆಯಾಗುತ್ತಾರೆ. ಇದೀಗ ಮೇಘನಾ ರಾಜ್ ಅವರ ಮಗುವಿನ ನಾಮಕರಣವನ್ನು ಸಹ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದಂತೆ ಮಾಡಿದ್ದಾರೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *