ಇವತ್ತಿನ ದಿನಮಾನದಲ್ಲಿ ನಾವು ಕುಳಿತಲ್ಲಿಯೇ ಆನ್ಲೈನ್ ಮೂಲಕ ನಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಜೊತೆಗೆ ನಾವು ಇಂದು ಯಾವುದೇ ಯೋಜನೆಗಳ ಲಾಭವನ್ನು ಪಡೆಯಬೇಕಾದರೆ ಆಧಾರ್ ಕಾರ್ಡ್ ಪ್ರಮುಖವಾಗಿ ಬೇಕಾಗುತ್ತದೆ ರೈತರಿಗೂ ಕೂಡ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ತಮ್ಮ ಜಮೀನಿನ ದಾಖಲೆಗಳೊಂದಿಗೆ ಆಧಾರ್ ಜೋಡಣೆ ಮಾಡಿಕೊಳ್ಳುವುದು ಅವಶ್ಯವಾಗಿದೆ. ಇಂದು ನಿಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆಯನ್ನು ಹೇಗೆ ಜೋಡಣೆ ಮಾಡುವುದು ಎಂಬುದನ್ನು ನಾವಿವತ್ತು ತಿಳಿದುಕೊಳ್ಳೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..

ನಿಮ್ಮ ಜಮೀನಿನ ಪಹಣಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದರಿಂದ ಸರ್ಕಾರದಿಂದ ಬರುವಂಥ ಸೌಲಭ್ಯಗಳು ನೇರವಾಗಿ ನಿಮಗೆ ಎಸ್ಎಂಎಸ್ ಮೂಲಕ ತಲುಪುತ್ತವೆ ಬಹಳಷ್ಟು ಸೌಲಭ್ಯಗಳ ಬಗ್ಗೆ ಮಾಹಿತಿ ನಿಮಗೆ ಸಿಗುತ್ತದೆ ಹಾಗಾಗಿ ಸರ್ವೆ ನಂಬರ್ ಗಳಿಗೆ ಆಧಾರ್ ಸಂಖ್ಯೆಯನ್ನು ಹೇಗೆ ಜೋಡಣೆ ಮಾಡುವುದು ಎಂಬುದನ್ನು ನೋಡುವುದಾದರೆ, ಮೊದಲಿಗೆ ನೀವು https://www.landrecords.karnataka.gov.in/service4/CitizenRegistrationLogin.aspx ಈ ಲಿಂಕನ್ನು ತೆರೆಯಬೇಕಾಗುತ್ತದೆ ಅಲ್ಲಿ ಭೂಮಿ ಆನ್ಲೈನ್ ರಿಜಿಸ್ಟ್ರೇಷನ್ ಪುಟ ತೆರೆದುಕೊಳ್ಳುತ್ತದೆ

ನಂತರ ನಿಮ್ಮ ಸರ್ವೇ ನಂಬರ್ ಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದಕ್ಕೆ ಏನೆಲ್ಲ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ನೋಡುವುದಾದರೆ ಮೊದಲಿಗೆ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು ಆಧಾರ್ ನಂಬರ್ ಅನ್ನು ನಮೂದಿಸಿದ ನಂತರ ಆಟೋಮೆಟಿಕ್ ಆಗಿ ಸಿಟಿಜನ್ ಹೆಸರು ಬರುತ್ತದೆ. ನಂತರ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರ್ ಅನ್ನು ನಮೂದಿಸಿ ಜನರೇಟ್ ಓಟಿಪಿ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಮೊಬೈಲ್ಗೆ ಒಂದು ಓಟಿಪಿ ಬರುತ್ತದೆ ಅದನ್ನು ನಮೂದಿಸಿ ವೇರಿಫೈ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಅದು ಮುಂದಿನ ಸ್ಕ್ರೀನ್ ಗೆ ಹೋಗುತ್ತದೆ.

ಅಲ್ಲಿ ನಿಮ್ಮ ಹೆಸರು ಇರುತ್ತದೆ ನಂತರ ನಿಮ್ಮ ತಂದೆಯ ಹೆಸರು ನಿಮ್ಮ ಆಧಾರ್ ಕಾರ್ಡ್ ಅಥವಾ ಪಹಣಿಯಲ್ಲಿ ಇರುವಂತೆ ನಿಮ್ಮ ತಂದೆಯ ಹೆಸರನ್ನು ನಮೂದಿಸಬೇಕು ನಂತರ ನಿಮ್ಮ ವಿಳಾಸವನ್ನು ನಮೂದಿಸಬೇಕು ನಂತರ ಸೆಲೆಕ್ಟ್ ಡಾಕ್ಯೂಮೆಂಟ್ ಅನ್ನುನ್ನುವುದು ಕಾಣುತ್ತದೆ ಅಲ್ಲಿ ಚುನಾವಣಾ ಗುರುತಿನ ಚೀಟಿ ಪಾನ್ ಕಾರ್ಡ್ ಪಾಸ್ಪೋರ್ಟ್ ಡ್ರೈವಿಂಗ್ ಲೈಸೆನ್ಸ್ ಪಡಿತರ ಚೀಟಿ ಮತ್ತು ಆಧಾರ್ ಚೀಟಿ ಎನ್ನುವ ಆಯ್ಕೆಗಳು ಕಾಣಿಸಿಕೊಳ್ಳುತ್ತದೆ ಅದರಲ್ಲಿ ಯಾವುದಾದರೂ ಒಂದನ್ನು ನೀವು ಅಪ್ಲೋಡ್ ಮಾಡಬೇಕಾಗುತ್ತದೆ ನೀವು ದಾಖಲೆಯನ್ನು ಅಪ್ಲೋಡ್ ಮಾಡಿದ ನಂತರ ಅಲ್ಲಿ ಅಪ್ಲೋಡ್ ಸಕ್ಸಸ್ಫುಲ್ ಎನ್ನುವುದು ಕಾಣಬೇಕು ಅದರ ನಂತರ ಓಕೆ ಮೇಲೆ ಕ್ಲಿಕ್ ಮಾಡಿ.

ನಂತರ ಅಲ್ಲಿ ಎಪಿಕ್ ನಂಬರ್ ಕೇಳುತ್ತದೆ ಎಪಿಕ್ ನಂಬರ್ ಎಂದರೆ ನಿಮ್ಮ ಚುನಾವಣಾ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಬೇಕು ನಂತರ ಪಿನ್ ಕೋಡ್ ಅನ್ನು ನಮೂದಿಸಬೇಕು ಅದಾದನಂತರ ನಿಮ್ಮ ಬಳಿ ಬೇರೆ ಮೊಬೈಲ್ ಸಂಖ್ಯೆ ಇದ್ದರೆ ಅದರ ಸಂಖ್ಯೆಯನ್ನು ನಮೂದಿಸಬೇಕು ತದನಂತರ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ನೀವು ನಿಮ್ಮ ಭೂಮಿ ಎಲ್ಲಿ ಇದೆಯೋ ಆ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಇವುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೇ ನಂಬರ್ ಅನ್ನು ಅಲ್ಲಿ ನಮೂದಿಸಿದ ತಕ್ಷಣ ಅಲ್ಲಿ ನಿಮ್ಮ ಜಮೀನಿನ ಮಾಹಿತಿಗಳು ಕಾಣಿಸಿಕೊಳ್ಳುತ್ತವೆ ನಂತರ ಕೆಳಗಡೆ ಕಾಣಿಸುವ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕು ನಂತರ ಆಡ್ ಎಂಬುದನ್ನು ಕ್ಲಿಕ್ ಮಾಡಬೇಕು ಇಷ್ಟು ಮಾಡಿದ ನಂತರ ನಿಮ್ಮ ಆಧಾರ್ ಸಂಖ್ಯೆ ನಿಮ್ಮ ಸರ್ವೆ ನಂಬರ್ ಜೊತೆ ಜೋಡಣೆ ಆಗಿರುತ್ತದೆ. ನಂತರ ಅಲ್ಲಿ ಸೇವ್ ಎನ್ನುವ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಗೆ ನಿಮ್ಮ ಸರ್ವೆ ನಂಬರ್ ಗೆ ಆಧಾರ್ ಕಾರ್ಡನ್ನು ಜೋಡಿಸುವ ಪ್ರಕ್ರಿಯೆ ಮುಗಿಯುತ್ತದೆ.

ನೊಡಿದಿರಲ್ಲ ಸ್ನೇಹಿತರೆ ಸುಲಭವಾಗಿ ಕುಳಿತಲ್ಲಿಯೇ ನಿಮ್ಮ ಜಮೀನಿನ ಪಹಣಿಗೆ ನಿಮ್ಮ ಆಧಾರ್ ಕಾರ್ಡನ್ನು ಜೋಡಣೆ ಮಾಡುವುದು ಹೇಗೆ ಎಂಬುದನ್ನು ತಿಳಿಸಿ ಕೊಟ್ಟಿದ್ದೇವೆ ನೀವು ಕೂಡ ಇನ್ನೂ ನಿಮ್ಮ ಪಹಣಿಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ತಕ್ಷಣವೇ ಅದಕ್ಕೆ ಆಧಾರ್ ಸಂಖ್ಯೆಯನ್ನು ಜೋಡಿಸಿಕೊಂಡು ಸರ್ಕಾರದಿಂದ ರೈತರಿಗಾಗಿ ಬರುವ ಎಲ್ಲಾ ಯೋಜನೆಗಳ ಸೌಲಭ್ಯಗಳನ್ನು ಲಾಭವನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *