ಮಾರುತಿ ಸುಜುಕಿ ಸೆಲೆರಿಯೊ ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಕಾರು ಎಂದು ಗುರುತಿಸಿಕೊಂಡಿದೆ. ಕಂಪನಿಯು ಒಂದು ಲೀಟರ್ ಪೆಟ್ರೋಲ್‌ನಲ್ಲಿ ಅತ್ಯಧಿಕ ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ. ಹೊಸ ವರ್ಷದ ಎರಡನೆ ತಿಂಗಳು ಆರಂಭವಾಗಿದ್ದು, ಈಗ ಕಂಪನಿಗಳು ಕಳೆದ ವರ್ಷದ ಸ್ಟಾಕ್ ಕ್ಲಿಯರ್ ಮಾಡುವಲ್ಲಿ ನಿರತವಾಗಿವೆ. ಹಲವಾರು ವಾಹನ ತಯಾರಕರು ತಮ್ಮ 2021 ರ ಮಾದರಿ ವರ್ಷದ ವಾಹನಗಳ ಮೇಲೆ ಬಲವಾದ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಅದೆ ರೀತಿ ಮಾರುತಿ ಸುಜುಕಿ ಕಂಪನಿಯ ರಿಯಾಯಿತಿಯ ಬಗ್ಗೆ ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿಯೋಣ

ಜನಪ್ರಿಯ ಮಾರುತಿ ಸುಜುಕಿ ಕಂಪನಿ ಕೂಡ ವಾಹನಗಳ ಮೇಲೆ ರಿಯಾಯಿತಿ ನೀಡುತ್ತಾ ಬಂದಿದೆ. ಮಾರುತಿ ಸುಜುಕಿಯು 2021 ಮಾಡೆಲ್ ಸೆಲೆರಿಯೊದಲ್ಲಿ 35,000 ರೂಪಾಯಿವರೆಗಿನ ಕೊಡುಗೆಗಳನ್ನು ನೀಡಿದೆ. ಇದು ಫೆಬ್ರವರಿ 28 ರವರೆಗೆ ಅಥವಾ ಸ್ಟಾಕ್ ಉಳಿಯುವವರೆಗೆ ಮಾತ್ರ ಇರುತ್ತದೆ. ಡೀಲರ್‌ಶಿಪ್ ಮಾದರಿ ನಗರವನ್ನು ಅವಲಂಬಿಸಿ ಈ ಕೊಡುಗೆಗಳ ಬದಲಾವಣೆಗೆ ಒಳಪಟ್ಟಿರುತ್ತದೆ. ಮಾರುತಿ ಸುಜುಕಿ ಸೆಲೆರಿಯೊ ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಕಾರು ಆಗಿದೆ. ಇದರಲ್ಲಿ K10C ಎಂಜಿನ್ ಅಳವಡಿಸಲಾಗಿದೆ. ಕಂಪನಿಯು ಒಂದು ಲೀಟರ್ ಪೆಟ್ರೋಲ್‌ನಲ್ಲಿ ಅತ್ಯಧಿಕ ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ. ಈ ಮೈಲೇಜ್ 2021 ರ ಮಾದರಿಗಿಂತ 15-23 ಶೇಕಡಾ ಹೆಚ್ಚು ಇರಲಿದೆ.

ಎಆರ್‌ಎಐ ಈ ಕಾರು ಒಂದು ಲೀಟರ್ ಪೆಟ್ರೋಲ್‌ನಲ್ಲಿ 26.68 ಕಿಮೀ ಓಡಬಲ್ಲದು ಎಂದು ಹೇಳಿಕೊಂಡಿದೆ. ಅಂದಹಾಗೆಯೆ ಹೊಸ ಪೀಳಿಗೆಯ ಸೆಲೆರಿಯೊ ಇಂಧನದ ವಿಷಯದಲ್ಲಿ ಅತ್ಯಂತ ಆರ್ಥಿಕವಾಗಿ ಬಲಿಷ್ಟ ಕಾರು ಆಗಿ ಗುರುತಿಸಿಕೊಂಡಿದೆ. ಈ ಕಾರಿನಲ್ಲಿ ಕಂಪನಿಯು ನೀಡಿರುವ ಕೊಡುಗೆಗಳ ಕುರಿತು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಹತ್ತಿರದ ಮಾರುತಿ ಸುಜುಕಿ ಡೀಲರ್‌ಶಿಪ್ ಅನ್ನು ಸಂಪರ್ಕಿಸುವುದು ಒಳ್ಳೆಯದು.

ಪೆಟ್ರೋಲ್ ಮಾದರಿಯ ನಂತರ ಮಾರುತಿ ಸುಜುಕಿ ಈ ಕಾರಿನ ಸಿಎನ್‌ಜಿ ಮಾದರಿಯನ್ನು ಈ ಹಿಂದೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಸ್ಟ್ಯಾಂಡರ್ಡ್ ಸೆಲೆರಿಯೊ ಪೆಟ್ರೋಲ್ ವಿನ್ಯಾಸ ಮತ್ತು ಎಲ್ಲಾ ವೈಶಿಷ್ಟ್ಯಗಳನ್ನು ಸೆಲೆರಿಯೊ ಸಿಎನ್‌ಜಿಯೊಂದಿಗೆ ನೀಡಲಾಗಿದೆ. ಕಾರಿನ ಹಿಂಭಾಗದಲ್ಲಿ ಅಳವಡಿಸಲಾಗಿರುವ ಸಿಎನ್‌ಜಿ ಟ್ಯಾಂಕ್ ಮಾತ್ರ ಇದರಲ್ಲಿ ಬದಲಾವಣೆಯಾಗಿದೆ. ಇದು 1.0 ಲೀಟರ್ ಡ್ಯುಯಲ್-ಜೆಟ್ VVT K-ಸರಣಿಯ ಪೆಟ್ರೋಲ್ ಎಂಜಿನ್‌ನೊಂದಿಗೆ ಆಳವಡಿಸಲಾಗಿದ್ದು, 60 ಲೀಟರ್ ಸಾಮರ್ಥ್ಯದ CNG ಟ್ಯಾಂಕ್‌ಗೆ ಜೋಡಿಸಲಾಗಿದೆ.

ಒಂದು ಕೆಜಿ ಸಿಎನ್‌ಜಿಯಲ್ಲಿ ಸೆಲೆರಿಯೊವನ್ನು 35.60 ಕಿಮೀ ವರೆಗೆ ಓಡಿಸಬಹುದು ಎಂದು ಮಾರುತಿ ಸುಜುಕಿ ಹೇಳುತ್ತದೆ. ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ಯ ಎಕ್ಸ್ ಶೋ ರೂಮ್ ಬೆಲೆ 6.58 ಲಕ್ಷ ರೂಪಾಯಿ ಆಗಿದೆ ಮಾರುತಿ ಸುಜುಕಿ ಕಂಪನಿ ಜನಪ್ರಿಯ ಕಂಪನಿಗಳಲ್ಲಿ ಒಂದಾಗಿದೆ. ಭಾರತದಾದ್ಯಂತ ಅನೇಕ ಮಾರುಕಟ್ಟೆಯನ್ನು ತೆರೆಯುವ ಮೂಲಕ ವಾಹನಗಳ ಮಾರಾಟದಲ್ಲಿ ಗುರುತಿಸಿಕೊಂಡಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಸಣ್ಣ ಕಾರುಗಳಿಂದ ಹಿಡಿದು ಅಧಿಕ ಮೈಲೇಜ್​ ನೀಡುವ ಕಾರುಗಳನ್ನು ಪರಿಚಯಿಸುತ್ತಾ ಬಂದಿದೆ.

ಪ್ರತಿ ಬಾರಿ ಮಾರುತಿ ಸುಜುಕಿ ಕಂಪನಿ ಹೊಸ ಕಾರುಗಳನ್ನು ಪರಿಚಯಿಸುತ್ತಾ ಬಂದಿದೆ. ಜೊತೆಗೆ ಅದಕ್ಕೆ ಸ್ಮಾರ್ಟ್​ ತಂತ್ರಜ್ನಾನವನ್ನು ಅಳವಡಿಸುವುದರ ಜೊತೆಗೆ ಬೇಗನೆ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತದೆ. ಈಗಾಗಲೆ ಈ ಕಂಪನಿ ಅನೇಕ ವಾಹನ ಉತ್ಪಾದಕ ಕಂಪನಿಗಳಿಗೆ ಪೈಪೋಟಿ ನೀಡುತ್ತ ಬಂದಿದೆ ಅಷ್ಟೆ ಅಲ್ಲದೆ ಗ್ರಾಹಕರಿಗೆ ಸರಿಯಾದ ಸೇವೆಯನ್ನು ಒದಗಿಸುತ್ತಿದೆ. ಒಟ್ಟಿನಲ್ಲಿ ಮಾರುತಿ ಸುಜುಕಿ ಕಂಪನಿ ಕಾರುಗಳಿಗೆ ಭಾರತದಲ್ಲಿ ತನ್ನದೆ ಆದ ಬೇಡಿಕೆಯಿದೆ ಎಂಬುದನ್ನು ಒಪ್ಪಲೆಬೇಕು. ಕಾರನ್ನು ಖರೀದಿಸುವವರಿಗೆ ಈ ಮಾಹಿತಿಯನ್ನು ತಿಳಿಸಿ.

Leave a Reply

Your email address will not be published. Required fields are marked *