ಬೆಂಗಳೂರಿನಲ್ಲಿ ವೈಫ್ ಅದಲು ಬದಲು ದಂದೆ, ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಸಂಗತಿ

0 5

ವಿದೇಶಗಳಲ್ಲಿ ಚರ್ಚೆಗೆ ಗ್ರಾಸವಾಗಿರುವಂತಹ ವೈಫ್ ಸ್ವೈಪಿಂಗ್ ಪ್ರಕರಣ ಕೆಲವು ದಿನಗಳ ಹಿಂದೆ ಕೇರಳದಲ್ಲಿ ಬೆಳಕಿಗೆ ಬಂದು ಅದರಲ್ಲಿ ಕೆಲವು ಜನರು ಸಿಕ್ಕಿಬಿದ್ದಿದ್ದರು. ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುವಂತಹ ವೈಫ್ ಸ್ವೈಪಿಂಗ್ ವೇಶ್ಯಾವಾಟಿಕೆ ದಂಧೆ ಇದೀಗ ಬೆಂಗಳೂರಿನಲ್ಲಿ ಕಂಡುಬಂದಿದೆ. ತನ್ನ ಪತ್ನಿಯನ್ನು ಇನ್ನೊಬ್ಬನ ಪಲ್ಲಂಗಕ್ಕೆ ಕಳುಹಿಸಿ ವಿಕೃತಿ ಮೆರೆಯುವ ದಂದೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ಬೆಂಗಳೂರು ಆಗ್ನೇಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಇದು ಒಂದು ವಿಚಿತ್ರ ಘಟನೆಯಾಗಿದ್ದು ತನ್ನ ಪತ್ನಿ ಇನ್ನೊಬ್ಬನ ಜೊತೆ ಲೈಂ ಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ಪತಿ ನೋಡಬೇಕಂತೆ. ಇಂತಹ ದಂದೆಯಲ್ಲಿ ಬಂಧಿತರಾಗಿರುವಂತವರು ಬೆಂಗಳೂರಿನ ವಿನಯ ಕುಮಾರ್ ದಂಪತಿ.

ಪತಿಯ ವಿಲಕ್ಷಣ ಬಯಕೆಗೆ ಆತನ ಹೆಂಡತಿಯು ಕೂಡ ಸಾಥ್ ನೀಡಿದ್ದಾಳೆ ಇದು ಪೊಲೀಸರನ್ನು ಬೆಚ್ಚಿಬೀಳಿಸಿದೆ. ಪತ್ನಿಯನ್ನು ಫ್ಯಾಂಟಸಿ ಸೆ’ ಕ್ಸ್ ಗೆ ಬಳಸಲು ಪತಿ ಪ್ಲಾನ್ ಮಾಡಿದ್ದ. ಆನ್ಲೈನಲ್ಲಿ ದಂಪತಿಗಳು ವೈಫ್ ಸ್ವೈಪಿಂಗ್ ಹುಡುಕಾಟ ನಡೆಸುತ್ತಿದ್ದರು ಟ್ವಿಟರ್ ಟೆಲಿಗ್ರಾಂ ಖಾತೆಯನ್ನು ತೆರೆದು ವೈಫ್ ಸ್ವೈಪಿಂಗ್ ದಂದೆಗೆ ಆಹ್ವಾನ ನೀಡುತ್ತಿದ್ದರು.

ಈ ವಿಲಕ್ಷಣ ಆಫರ್ ಅನ್ನು ಕಂಡು ಅಚ್ಚರಿಗೊಂಡ ವ್ಯಕ್ತಿ ಟ್ವೀಟ್ ಮೂಲಕ ಪೊಲೀಸರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಕುರಿತು ಸುಮೋಟೋ ಪ್ರಕರಣವನ್ನು ದಾಖಲಿಸಿ ಪೊಲೀಸರು ವಿನಯ್ ಕುಮಾರ್ ಅವರನ್ನು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ಇವರು ಹಲವರ ಜೊತೆ ಲೈಂ ಗಿಕ ಸಂಪರ್ಕ ಹೊಂದಿರುವುದು ಬಯಲಾಗಿದೆ ಅಲ್ಲದೆ ಕೆಲವರಿಂದ ಹಣವನ್ನು ಕೂಡ ಪಡೆದಿದ್ದಾರೆ.

ಆರೋಪಿತನ ಮೊಬೈಲ್ನಲ್ಲಿ ಕೆಲವು ವಿಡಿಯೋಗಳು ಸಿಕ್ಕಿದ್ದು ಪತ್ನಿ ಸರಸವಾಡುವ ದೃಶ್ಯಗಳನ್ನು ಮುಖ ಕಾಣದಂತೆ ವಿಡಿಯೋ ಮಾಡಿದ್ದಾನೆ. ಆನ್ಲೈನಲ್ಲಿ ಆಗಾಗ ಬೆಂಗಳೂರು ಸೇರಿದಂತೆ ಕೆಲವು ಕಡೆಗಳಲ್ಲಿ ಈ ದಂದೆ ಆಗಾಗ ನಡೆಯುತ್ತಿರುತ್ತದೆ. ಬೆಂಗಳೂರಿನಲ್ಲಿ ನಡೆದ ಈ ಘಟನೆಯನ್ನು ಪೊಲೀಸರು ಭೇದಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ.

ವಿದೇಶಗಳಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಪತ್ನಿಯರನ್ನು ಅದಲು-ಬದಲು ಮಾಡಿಕೊಳ್ಳುವ ನೀಚ ಪದ್ಧತಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕಂಡುಬಂದಿದೆ. ಭಾರತ ಸಂಪ್ರದಾಯದ ದೇಶ ಇಲ್ಲಿ ಪ್ರತಿ ಸಂಬಂಧವು ಅಪಾರವಾದ ಮೌಲ್ಯವನ್ನು ಹೊಂದಿವೆ. ಆದರೆ ಸಮಾಜವೇ ತಲೆತಗ್ಗಿಸುವಂತಹ ಈ ರೀತಿಯ ಕೆಟ್ಟ ದಂದೆಗಳು ಇನ್ನು ಮುಂದೆ ಎಲ್ಲಿಯೂ ನಡೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ.

Leave A Reply

Your email address will not be published.