ಮಹಾಭಾರತದ ಶಕುನಿ ನಿಜಕ್ಕೂ ಕೆಟ್ಟವನಾ? ಓದಿ.

0 9

ಮಹಾಕಾವ್ಯ ಮಹಾಭಾರತದ ಶಕುನಿಯು ಕೆಟ್ಟವನಾಗಲು ಕಾರಣವೇನು ಅವನ ಜೀವನದ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಮಹಾಭಾರತದ ಶಕುನಿಯನ್ನು ನಂಬುವವರಿದ್ದಾರೆ. ಈಗಿನ ಅಫ್ಘಾನಿಸ್ತಾನದ ಖಂದಾಹಾರ ಆಗಿನ ಕಾಲದ ಗಾಂಧಾರವಾಗಿತ್ತು. ಶಕುನಿ ಗಾಂಧಾರದ ರಾಜ ಸುಬಲನ ಪುತ್ರನು. ಸುಬಲನಿಗೆ ನೂರು ಜನ ಗಂಡುಮಕ್ಕಳು ಒಬ್ಬಳು ಮಗಳಿದ್ದಳು ಅವಳೆ ಗಾಂಧಾರಿ. ಶಕುನಿ ಸುಬಲನ ನೂರನೆ ಮಗನಾಗಿದ್ದು, ಉಳಿದ ಸಹೋದರರಿಗಿಂತ ಬುದ್ಧಿವಂತನಾಗಿದ್ದು, ಗಾಂಧಾರಿಯ ಪ್ರೀತಿಯ ಸಹೋದರನಾದಗಿದ್ದನು. ಗಾಂಧಾರ ರಾಜ ಹಸ್ತಿನಾಪುರದ ಅಧಿಪತ್ಯಕ್ಕೆ ಒಳಪಟ್ಟಿದ್ದನು. ಭೀಷ್ಮ ಪಿತಾಮಹನು ತನ್ನ ಮಗ ಧೃತರಾಷ್ಟ್ರನಿಗೆ ಕನ್ಯೆಯನ್ನು ಹುಡುಕುತ್ತಿದ್ದರು. ಆದರೆ ಯಾವ ರಾಜನು ತನ್ನ ಮಗಳನ್ನು ಅಂಧನಿಗೆ ಕೊಡಲು ಮುಂದಾಗಲಿಲ್ಲ.

ಕೊನೆಗೆ ಭೀಷ್ಮ ಗಾಂಧಾರ ರಾಜ ಸುಬಲನ ಬಳಿ ಕನ್ಯೆಯನ್ನು ಕೇಳಿದಾಗ ಸುಬಲನು ಈ ಪ್ರಸ್ತಾವನೆಯನ್ನು ಒಪ್ಪುತ್ತಾನೆ. ಗಾಂಧಾರಿ ತನ್ನ ಮದುವೆಯಾಗುವ ವರನು ಜಗತ್ತನ್ನು ನೋಡದಿರುವಾಗ ತಾನೇಕೆ ಕಣ್ಣುಗಳನ್ನು ಹೊಂದಬೇಕು ಎಂದು ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾಳೆ. ಶಕುನಿಗೆ ತನ್ನ ತಂಗಿ ಜೀವನದುದ್ದಕ್ಕೂ ಕುರುಡಿಯಾಗಿರಬೇಕು ಎಂಬುದು ಬೇಸರವಾಗುತ್ತದೆ ಇದಕ್ಕೆ ಕಾರಣನಾದ ಭೀಷ್ಮನ ಮೇಲೆ ಅಸಮಾಧಾನವಿರುತ್ತದೆ. ಧೃತರಾಷ್ಟ್ರನಿಗೆ ಮದುವೆಯ ನಂತರ ತಿಳಿಯುತ್ತದೆ ಗಾಂಧಾರಿ ವಿಧವೆಯೆಂದು. ಗಾಂಧಾರಿಯ ಜಾತಕದಲ್ಲಿ ದೋಷ ವಿರುವುದರಿಂದ ಹಿಂದೆ ಮೇಕೆಯೊಂದಿಗೆ ಮದುವೆ ಮಾಡಿಸಿ ಮೇಕೆಯನ್ನು ಬಲಿಕೊಡುತ್ತಾರೆ.

ಇದನ್ನು ತಿಳಿದ ಧೃತರಾಷ್ಟ್ರ ಕೆಂಡಾಮಂಡಲನಾಗುತ್ತಾನೆ ಗಾಂಧಾರ ರಾಜ ಸುಬಲ ಹಾಗೂ ಅವನ ಮಕ್ಕಳನ್ನು ಜೈಲಿಗೆ ಹಾಕುತ್ತಾನೆ. ಅವರಿಗೆ ಒಂದು ಕೈ ಹಿಡಿಯಷ್ಟು ಅನ್ನ ಮಾತ್ರ ಕೊಡುತ್ತಾನೆ ಇದರಿಂದ ತಾವ್ಯಾರು ಬದುಕುವುದಿಲ್ಲ ಎಂದು ತಿಳಿದ ಸುಬಲ ಹಾಗೂ ಆತನ 99 ಮಕ್ಕಳು ಒಂದು ಹಿಡಿ ಅನ್ನವನ್ನು ಬುದ್ದಿವಂತ ಹಾಗೂ ಚತುರನಾದ ಶಕುನಿಗೆ ಮೀಸಲಿಟ್ಟು ಅವನನ್ನು ಬದುಕುವಂತೆ ನೋಡಿಕೊಳ್ಳುತ್ತಾರೆ. ತನ್ನ ಮುಂದೆ ಆಹಾರವಿಲ್ಲದೆ ತಂದೆ ಹಾಗೂ ಸಹೋದರರು ಸಾಯುವುದನ್ನು ನೋಡಿದ ಶಕುನಿಗೆ ಭೀಷ್ಮನ ಮೇಲೆ ಸೇಡಿನ ಭಾವನೆ ಹೆಚ್ಚಾಗುತ್ತದೆ.

ಸುಬಲನ 99 ಮಕ್ಕಳು ಸಾಯುತ್ತಾರೆ ಕೊನೆಗೆ ಸುಬಲ ಹಾಗೂ ಶಕುನಿ ಇರುತ್ತಾರೆ ಸುಬಲ ಸಾಯುವ ಮುನ್ನ ಧೃತರಾಷ್ಟ್ರನನ್ನು ಕರೆದು ತನ್ನ ಮಗ ಶಕುನಿಯನ್ನು ಬಿಡುಗಡೆ ಮಾಡುವಂತೆ ಬೇಡಿಕೊಳ್ಳುತ್ತಾನೆ. ಅಲ್ಲದೆ ಕೌರವರ ಉಸ್ತುವಾರಿ ನೋಡಿಕೊಂಡು ಹಸ್ತಿನಾಪುರದಲ್ಲಿರುವಂತೆ ಅನುಮತಿ ಕೇಳುತ್ತಾನೆ ಧೃತರಾಷ್ಟ್ರ ಇದಕ್ಕೆ ಒಪ್ಪುತ್ತಾನೆ. ಶಕುನಿ ತನ್ನ ಸೇಡನ್ನು ಮರೆಯಬಾರದೆಂದು ಸುಬಲ ತನ್ನ ಉರುಗೋಲಿನಿಂದ ಶಕುನಿಯ ಒಂದು ಕಾಲನ್ನು ಮುರಿಯುತ್ತಾನೆ. ಅಲ್ಲದೇ ತಾನು ಸತ್ತ ನಂತರ ತನ್ನ ಮೂಳೆಯಿಂದ ಪಗಡೆಯ ದಾಳಗಳನ್ನು ಮಾಡುವಂತೆ, ಹಾಗೂ ಆ ದಾಳಗಳನ್ನು ಉಪಯೋಗಿಸಿದರೆ ಪಗಡೆಯಾಟದಲ್ಲಿ ಎಂದಿಗೂ ಸೋಲು ಆಗುವುದಿಲ್ಲ ಎಂದು ತಿಳಿಸಿ ಸುಬಲ ಅಸುನೀಗುತ್ತಾನೆ.

ಶಕುನಿ ಹಸ್ತಿನಾಪುರದಲ್ಲಿ ಎಲ್ಲರ ಪ್ರೀತಿ, ವಿಶ್ವಾಸವನ್ನು ಗಳಿಸುತ್ತಾನೆ. ನೂರು ಜನ ಕೌರವರ ಪಾಲನೆ, ಪೋಷಣೆ ನೋಡಿಕೊಳ್ಳುತ್ತಾನೆ. ದುರ್ಯೋಧನನಿಗೆ ಪಾಂಡವರ ಮೇಲೆ ಧ್ವೇಷ ಉಂಟಾಗುವಂತೆ ಮಾಡಿ ತನ್ನ ದಾಳಗಳಿಂದ ದುರ್ಯೋಧನನನ್ನು ಪಗಡೆಯಾಟದಲ್ಲಿ ಗೆಲ್ಲಿಸಿ ಮಹಾಭಾರತ ಯುದ್ಧಕ್ಕೆ ಕಾರಣನಾಗಿ ಕೌರವ ಮನೆತನವನ್ನು ನಾಶ ಮಾಡಿ ಶಕುನಿ ಭೀಷ್ಮನ ಮೇಲಿನ ಸೇಡನ್ನು ತೀರಿಸಿಕೊಳ್ಳುತ್ತಾನೆ. ಹೀಗೆ ಶಕುನಿ ಕೆಟ್ಟವನಾಗಲು ಅವನ ಜೀವನದಲ್ಲಿ ನಡೆದ ಘಟನೆ ಕಾರಣವಾಗುತ್ತದೆ. ಕೇರಳದ ಕೊಲ್ಲಂ ಜಿಲ್ಲೆಯ ಪವಿತ್ರೇಶ್ವರಂನಲ್ಲಿ ಅವನಿಗಾಗಿ ಒಂದು ದೇವಸ್ಥಾನವಿದೆ.

ಮಹಾಭಾರತ ಸಂದರ್ಭದಲ್ಲಿ ಶಕುನಿ ಕೌರವರೊಂದಿಗೆ ಇಲ್ಲಿಗೆ ಬಂದಿದ್ದನು ಹಾಗೂ ಶಕುನಿ ಮಹಾಭಾರತ ಯುದ್ಧದ ನಂತರ ಶಿವ ಭಕ್ತನಾದ ಶಕುನಿ ಶಿವನ ಅನುಗ್ರಹ ಪಡೆದು ಈ ಸ್ಥಳದಲ್ಲಿ ಮೋಕ್ಷ ಪಡೆಯುತ್ತಾನೆ ಎಂದು ನಂಬಲಾಗಿದೆ. ಇಲ್ಲಿ ಶಕುನಿ ಬಳಸುತ್ತಿದ್ದ ಸಿಂಹಾಸನವಿದೆ. ಈ ದೇವಸ್ಥಾನವನ್ನು ಪುರುವರ ಸಮುದಾಯದವರು ನೋಡಿಕೊಳ್ಳುತ್ತಿದ್ದಾರೆ. ಈ ದೇವಸ್ಥಾನದಲ್ಲಿ ಪೂಜೆ ನಡೆಯುವುದಿಲ್ಲ ಆದರೆ ಭಕ್ತರು ರೇಷ್ಮೆವಸ್ತ್ರ, ತೆಂಗಿನಕಾಯಿಗಳನ್ನು ಅರ್ಪಿಸುವುದರ ಮೂಲಕ ಶಕುನಿಗೆ ಗೌರವ ಸಲ್ಲಿಸುತ್ತಾರೆ. ಶಕುನಿ ಬಗೆಗಿನ ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

Leave A Reply

Your email address will not be published.