ಬಟ್ಟೆ ವ್ಯಾಪಾರ ಮಾಡುವುದು ಹೇಗೆ, ಇದರಿಂದ ಲಾಭ ಗಳಿಸಬಹುದೇ ನೋಡಿ

0 104

ಎಲ್ಲಾ ವಸ್ತುಗಳಿಗೂ ಅದರದೆ ಆದ ಬೆಲೆಯನ್ನು ನಿಗದಿ ಮಾಡಿರುತ್ತಾರೆ. ಅದನ್ನು ನಿಖರವಾಗಿ ಇಂತಿಷ್ಟು ಬೆಲೆ ಇದೆ ಎಂದು ಹೇಳಬಹುದು. ಆದರೆ ಕೆಲವೊಂದು ವಸ್ತುಗಳ ಬೆಲೆ ನಿಖರವಾಗಿ ಹೇಳಲಾಗುವುದಿಲ್ಲ. ಅಂತಹ ವಸ್ತುಗಳಲ್ಲಿ ‌ಬಟ್ಟೆಯು ಒಂದು. ಬಟ್ಟೆಯ ಬೆಲೆ ವ್ಯಾಪಾರಿ ಕೊಳ್ಳುವವನಿಗೆ ಕೇಳುವ ಹಣ ಇಲ್ಲವೇ ಚೌಕಾಸಿಗೆ ಕೊಳ್ಳುವವರು ಕೊಟ್ಟ ಹಣ ಇದೇ ಬಟ್ಟೆಯ ನಿಗದಿತ ಬೆಲೆ ಆಗಿರುತ್ತದೆ. ಬಟ್ಟೆಯಿಂದ ಬರುವ ಲಾಭ ಬೇರೆ ಯಾವುದೇ ವಸ್ತುಗಳಿಗೆ ಇಲ್ಲವೆಂದೆ ಹೇಳಬಹುದು. ಟಾಟಾ ಹಾಗೂ ಅಂಬಾನಿಯಂತಹ ದೊಡ್ಡ ವ್ಯಾಪಾರಿಗಳು ವೃತ್ತಿ ಜೀವನ ಪ್ರಾರಂಭಿಸಿದ್ದು ಬಟ್ಟೆ ವ್ಯಾಪಾರದಿಂದಲೆ. ಹಾಗಾದರೆ ಯಾವ ಬಟ್ಟೆಗಳಿಗೆ ಯಾವ ಬೆಲೆ ಇದೆ ಎಂಬುದು ಕೆಲವರಿಗೆ ಗೊತ್ತಿರಬಹುದು, ಇನ್ನೂ ಕೆಲವರಿಗೆ ಗೊತ್ತಿಲ್ಲದೆಯೂ ಇರಬಹುದು. ಬಟ್ಟೆಯ ವ್ಯಾಪಾರಿಗಳಿಗೂ ಹಾಗೂ ಕೊಳ್ಳುವವರಿಗೆ ಉತ್ತಮ ಉಪಯೋಗ ಸಿಗುವಂತಹ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ನೋಡಿ.

ಬಟ್ಟೆಗಳನ್ನು ನಾಲ್ಕು ವಿಧವಾಗಿ ವಿಂಗಡಿಸಲಾಗಿದೆ. ಮೊದಲನೆಯದಾಗಿ ಸೀರೆ, ಎರಡನೆಯದಾಗಿ ರೆಡಿಮೆಡ್ ಬಟ್ಟೆಗಳು, ಕುರ್ತ ಮತ್ತು ಕಟ್ ಪೀಸ್ ಮುಂತಾದವು. ಮೂರನೆಯದಾಗಿ ಪುರುಷರ ಹಾಗೂ ಮಕ್ಕಳ ಬಟ್ಟೆಗಳು ಹಾಗೂ ನಾಲ್ಕನೆಯದಾಗಿ ಪ್ರಿಂಟೆಡ್ ಟೀ ಶರ್ಟ್ ಗಳು. ಯಾವುದೆ ಅಂಗಡಿ ಹಾಕುವುದಿರಲಿ, ತಳ್ಳುವ ಗಾಡಿಯ ವ್ಯಾಪಾರವಿರಲಿ, ಬಟ್ಟೆಗಳನ್ನು ತರಿಸಿ ಆನ್ಲೈನ್ ನಲ್ಲಿ ಮಾರುವುದಿರಲಿ, ಇಲ್ಲವೆ ಪ್ರಿಂಟ್ ಮಾಡಿ ಮಾರುವುದಿರಲಿ, ಈ ನಾಲ್ಕು ವಿಧಗಳನ್ನು ಮಾಡಿಕೊಳ್ಳುವುದು ಉತ್ತಮ. ಮೊದಲನೆ ಎರಡು ವಿಧಗಳಿಗೆ ಹೆಚ್ಚು ಮಹತ್ವ ನೀಡಿದರೆ ಲಾಭ ಖಂಡಿತ. ಪ್ರಿಂಟ್ ಮಾಡಿದ ಟೀ ಶರ್ಟ್ ಟ್ರೆಂಡ್ ಇತ್ತಿಚೆಗೆ ಶುರುವಾಗಿದೆ ಹಾಗಾಗಿ ಇದನ್ನು ಮಾಡುವುದಿದ್ದರೆ ಬೇರೆಯಾಗಿಯೆ ಉಳಿದ ವಿಧಗಳೊಂದಿಗೆ ಸೇರಿಸ ಮಾಡುವುದು ಉತ್ತಮ. ಬಟ್ಟೆಗಳು ಅತಿ ಕಡಿಮೆಗೆ ಸಿಗುವ ಜಾಗ ಎಂದರೆ ಗುಜರಾತ್ ನ ಸೂರತ್ ಹಾಗೂ ಬೆಂಗಳೂರಿನ ಚಿಕ್ಕಪೇಟೆ. ಮೊದಲನೆ ವಿಧವಾದ ಸೀರೆ ಬಗ್ಗೆ ಹೇಳುವುದಾದರೆ, ಮೂಲವಾಗಿ ಎಲ್ಲಿ ಸೀರೆ ತಯಾರಿ ಆಗುವುದೊ ಅಲ್ಲಿಂದ ಸೀರೆ ತೆಗೆದುಕೊಂಡರೆ 300 ರೂಪಾಯಿಗೆ ಅಂಗಡಿಯಲ್ಲಿ ಸಿಗುವ ಸೀರೆ ಅಲ್ಲಿ 50 ರೂಪಾಯಿಗೆ ಸಿಗುತ್ತದೆ. 300 ರಿಂದ 10ಸಾವಿರ ರೂಪಾಯಿಗೆ ಅಂಗಡಿಗಳಲ್ಲಿ ಸಿಗುವ ಸೀರೆಗಳು ಮೂಲ ಬೆಲೆಯಲ್ಲಿ 50 ರೂಪಾಯಿ ಇಂದ 5 ಸಾವಿರ ರೂಪಾಯಿಗಳಿಗೆ ಸಿಗುತ್ತದೆ.

ನಂತರ ಡ್ರೆಸ್ ಮೆಟೀರಿಯಲ್ಸ್ ಹಾಗೂ ರೆಡಿಮೆಡ್ ಬಟ್ಟೆಗಳ ಬಳಿ ಬಂದರೆ ಕುರ್ತಾ ಅಂಗಡಿಗಳಲ್ಲಿ ಸಿಗುವುದು ಹೆಚ್ಚು ಕಡಿಮೆ 100 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಆದರೆ ಅದೇ ಕುರ್ತಾಗಳು ಮೂಲ ಬೆಲೆಯಲ್ಲಿ ಮೂವತ್ತು ರೂಪಾಯಿ ಇಂದ 50 ರೂಪಾಯಿಗಳಿಗೆ ಸಿಗುತ್ತದೆ. ಬಟ್ಟೆಯ ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಿ ಶೇಕಡಾ ನೂರರಷ್ಟು ಲಾಭವನ್ನೂ ಪಡೆಯಬಹುದು. ಮೂರನೆಯದಾಗಿ ಪುರುಷರ ಹಾಗೂ ಮಕ್ಕಳ ಬಟ್ಟೆಯ ಕಡೆಗೆ ಬಂದರೆ ಅಂಗಡಿಗಳಲ್ಲಿ 300 ರಿಂದ 500 ರೂಪಾಯಿ ಇರುತ್ತವೆ. ಹೀಗೆ ತರುವ ಶರ್ಟ್ ಅಥವಾ ಟೀ ಶರ್ಟ್ ಮೂಲ ಬೆಲೆಯಲ್ಲಿ 70 ರಿಂದ 100 ರೂಪಾಯಿಗಳು ಆಗಿರುತ್ತದೆ. ಇನ್ನೂ ಮಕ್ಕಳ ಬಟ್ಟೆಗಳು ತುಂಬಾ ಬೆಲೆ ಹೆಚ್ಚಿರುತ್ತದೆ. ಆದರೆ ಅಂಗಡಿಗಳಲ್ಲಿ ಮಕ್ಕಳ ಬಟ್ಟೆಗೆ ಬೆಲೆ 500 ರೂಪಾಯಿ ಇದ್ದರೆ ಮೂಲ ಬೆಲೆ 200 ಆಗಿದ್ದು, ಅಂಗಡಿಗಳಿಗಿಂತ ತುಂಬಾ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ. ಇನ್ನು ಬಂಡವಾಳ ಹಾಕಿ ಬಟ್ಟೆಯ ವ್ಯಾಪಾರ ಮಾಡಬೇಕು ಅಂತ ಇರುವವರಿಗೆ ಮೂರು ಲಿಂಕ್ ಕೊಡಲಾಗಿದೆ ಅದನ್ನು ಬಳಸಿಕೊಳ್ಳಿ‌. ಒಮ್ಮೆ ಸೂರತ್ ಗೆ ಭೇಟಿ ನೀಡಿ ಸಣ್ಣದಾಗಿ ಅಂಗಡಿ ಹಾಕುವವರಿಗೆ ಕೆಳಗಿರುವ ಲಿಂಕ್ ಉಪಯೋಗಿಸಿ ಆನ್ಲೈನ್ ಮೂಲಕ ತರಿಸಿಕೊಳ್ಳಬಹುದು. ಹಾಗೆ ಬಟ್ಟೆ ತರಿಸಿಕೊಳ್ಳುವವರು ಕ್ಯಾಶ್ ಆನ್ ಡಿಲೆವರಿಯನ್ನೆ ಆಯ್ದುಕೊಳ್ಳುವುದು ಉತ್ತಮ. ಕೈಯಾರೆ ತೆಗೆದುಕೊಳ್ಳಬೇಕು ಎನ್ನುವವರು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಕರಿದಿಸಿ. ಇನ್ನೂ ಪ್ರಿಂಟ್ ಟೀ ಶರ್ಟ್ ನ ಕಡೆಗೆ ಬಂದಾಗ ಪ್ಲೇನ್ ಟೀ ಶರ್ಟ್ ತರಿಸಿಕೊಳ್ಳಬೇಕು. ಹಾಗೆಯೆ ಪ್ರಿಂಟ್ ಮಶಿನ್ ಮೂಲಕ ಕೊಳ್ಳುವವರಿಗೆ ಬೇಕಾದ ರೀತಿಯಲ್ಲಿ ಪ್ರಿಂಟ್ ಮಾಡಿ ಮಾರಬೇಕು. ಪ್ರಿಂಟ್ ಮೆಶಿನ್ ಗೆ 11,000 ರೂಪಾಯಿ ಇಂದ ಬೆಲೆ ಇದೆ. ಈ ಪ್ಲೇನ್ ಟೀ ಶರ್ಟ್ ತಯಾರಿಸಲು 70 ರಿಂದ 200 ರೂಪಾಯಿಗಳು ಬೇಕಗುತ್ತದೆ. ಆದರೆ ಆನ್ಲೈನ್ ನಲ್ಲಿ 200 ರಿಂದ 500 ರೂಪಾಯಿಗಳ ವರೆಗೂ ಮಾರಬಹುದು. ನೂರು ನೂರೈವತ್ತಲ್ಲಿ ರೆಡಿಯಾಗುವ ಬಟ್ಟೆಯನ್ನು ಐದು ನೂರರ ವರೆಗೂ ಮಾರಿ ಲಾಭಗಳಿಸಬಹುದು.

Leave A Reply

Your email address will not be published.