ಮಹಾಭಾರತ ಖ್ಯಾತಿಯ ದ್ರೌಪದಿ ಪಾತ್ರ ಮಾಡಿದ ಪೂಜಾ ಶರ್ಮಾ ಅವರು ಈ ಪಾತ್ರಕ್ಕೆ ಹೇಗೆ ಸೆಲೆಕ್ಟ್ ಆದರೂ ಹಾಗೂ ಅವರ ಜೀವನದ ಕೆಲವು ಘಟನೆಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಪೂಜಾ ಶರ್ಮಾ ಹುಟ್ಟಿದ್ದು ದೆಹಲಿಯ ಸಂಸ್ಕಾರವಂತ ಬ್ರಾಹ್ಮಣರ ಮನೆಯಲ್ಲಿ. ಓದಿದ್ದು ಬಿಕಾಂ. ಪಟ ಪಟ ಮಾತಾಡುವ ಇವರು ಕಾಲೇಜ್ ಗಳಲ್ಲಿ ಡಿಬೇಟ್ ಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆಯುತ್ತಿದ್ದರು. ನಂತರ ದೂರದರ್ಶನದ ಟಾಕ್ ಶೋನಲ್ಲಿ ಇದ್ದರು. ನಂತರ ಹಿಂದಿ ಜೂಮ್ ವಾಹಿನಿಯಲ್ಲಿ ಆಂಕರ್ ಆಗಿ ಕೆಲಸ ಮಾಡಿದರು. ಮೊಡಲಿಂಗ್ ಮಾಡುತ್ತಿದ್ದರು. 2012 ರಲ್ಲಿ ತೇರಿ ಮೇರಿ ಲವ್ ಸ್ಟೋರಿ ಧಾರಾವಾಹಿಯಲ್ಲಿ ಸಿಯಾಬೆಲ್ ಪಾತ್ರ ಮಾಡುವ ಮೂಲಕ ಪ್ರೇಕ್ಷಕರ ಮನ ಗೆದ್ದರು. ಆದರೆ ಹೆಚ್ಚು ಜನಪ್ರಿಯವಾಗಿದ್ದು ಸ್ಟಾರ್ ಪ್ಲಸ್ ವಾಹಿನಿಯಲ್ಲಿ ಬರುವ ಮಹಾಭಾರತ ಧಾರವಾಹಿಯ ಮೂಲಕ. ಮಹಾಭಾರತದ ಕೇಂದ್ರಬಿಂದು ಹಾಗೂ ಕುರುಕ್ಷೇತ್ರ ಯುದ್ಧದ ಮೂಲ ದ್ರೌಪದಿ ಪಾತ್ರ ಮಾಡುವುದು ಸುಲಭವಾಗಿರಲಿಲ್ಲ. ಪೂಜಾ ಶರ್ಮಾ ಅವರ ಮುಂದೆ ದ್ರೌಪದಿ ಪಾತ್ರ ಒಂದು ಟಾಸ್ಕ್ ಆಗಿತ್ತು ಪೂಜಾ ಶರ್ಮಾ ಅದನ್ನು ಸೊಗಸಾಗಿ ಪೂರ್ಣಗೊಳಿಸಿದರು. ಪೂಜಾ ಶರ್ಮಾ ಅವರಿಗೆ ಮಹಾಭಾರತ ಟೀಮ್ ನಿಂದ ಕರೆಬಂದಾಗ ಪೂಜಾ ಅವರು ಶಾಕ್ ಆಗಿದ್ದರು ಪೌರಾಣಿಕ ಪಾತ್ರವನ್ನು ಇದುವರೆಗೂ ಮಾಡದ ಕಾರಣ ತಾನು ಈ ಪಾತ್ರವನ್ನು ಮಾಡಿದರೆ ಜನ ನಗುತ್ತಾರೆಂದು ಭಯ ಪಟ್ಟಿದ್ದರು ಕಾಲ್ ನಲ್ಲಿ ಆಡಿಷನ್ ಬರಲು ಹೇಳಿದಾಗ ನೋಡೋಣ ಸರ್ ಎಂದಿದ್ದರು ಪೂಜಾ. ಆಡಿಷನ್ ನಲ್ಲಿ ಹಲವರ ಆಡಿಷನ್ ಮುಗಿದರೂ ಪರ್ಫೆಕ್ಟ್ ದ್ರೌಪದಿ ಸಿಗದೆ ಮಹಾಭಾರತ ಟೀಮ್ ಆತುರದಿಂದಿದ್ದರು. ಕೊನೆಯ ದಿನ ಆಡಿಷನ್ ಗೆ ಬರಲೆಬೇಕು ಎಂದು ಪೂಜಾಗೆ ಮಹಾಭಾರತ ಟೀಮ್ ಮತ್ತೆ ಹೇಳಿದಾಗ ಪೂಜಾ ಅವರು ನೋಡೋಣ ಎಂದು ಕಾಸ್ಟ್ಯೂಮ್ ಹಾಕಿಕೊಂಡು ಆಡಿಷನ್ ಕೊಟ್ಟರಂತೆ. ನಂತರ ಪೂಜಾ ಸೆಲೆಕ್ಟ್ ಆದರು.

ಪೂಜಾ ಶೂಟಿಂಗ್ ವೇಳೆಯಲ್ಲಿ ಅಳುತ್ತಿದ್ದರಂತೆ ಏಕೆಂದರೆ ಮಣಭಾರ ಕಾಸ್ಟ್ಯೂಮ್. 25 ಕೆ.ಜಿ ಕಾಸ್ಟ್ಯೂಮ್ ಹಾಕುತ್ತಿದ್ದರು ಇದರಿಂದ ಚರ್ಮದ ಮೇಲೆ ರಾಶಸ್ ಆಗುತಿತ್ತು. ಪೂಜಾ ಈ ಪಾತ್ರಕ್ಕಾಗಿ ಸಿದ್ಧತೆ ಮಾಡಿಕೊಂಡರು, ದ್ರೌಪದಿ ಇದ್ದ ಸಿನಿಮಾ, ಧಾರಾವಾಹಿಗಳನ್ನು ನೋಡುತ್ತಿದ್ದರು ಅಲ್ಲದೇ ಪೌರಾಣಿಕ ಪುಸ್ತಕಗಳನ್ನು ಓದುತ್ತಿದ್ದರು. ಕೆ.ಜಿಗಟ್ಟಲೆ ಕಾಸ್ಟ್ಯೂಮ್ ಹಾಕಿಕೊಂಡೆ ಶಸ್ತ್ರಾಭ್ಯಾಸ ಮಾಡುತ್ತಿದ್ದರು. ದ್ರೌಪದಿ ಭಾವೋದ್ವೇಗದ ಕಡಲು, ಹುಟ್ಟಿದ ಕ್ಷಣವೇ ತಂದೆಯಿಂದ ತಿರಸ್ಕೃತಗೊಳ್ಳುವುದು. ಮೋಹಪಟ್ಟು ವರಿಸಿದ ಅರ್ಜುನನ ಜಾಗದಲ್ಲಿ ಉಳಿದ 4 ಜನರಿಗೆ ಅದೇ ಸ್ಥಾನ ನೀಡುವುದು, ಪ್ರೀತಿಸಿದ ಅರ್ಜುನನು ಸುಭದ್ರೆಯನ್ನು ವಿವಾಹವಾಗಿ ಕರೆತಂದಾಗಾ ಆಗುವ ಯಾತನೆ, ವಸ್ತ್ರಾಪಹರಣ ಜ್ವಾಲೆಯಲ್ಲಿದ್ದು ಪ್ರತಿಜ್ಞೆ ಪೂರ್ಣವಾಗುವವರೆಗೆ ಕಾಯುವುದು, ಹೆತ್ತ ಮಕ್ಕಳನ್ನು ಕಳೆದುಕೊಳ್ಳುತ್ತೇವೆ ಎಂದು ಗೊತ್ತಿದ್ದರೂ ಕುರುಕ್ಷೇತ್ರ ಯುದ್ಧಕ್ಕೆ ಸಜ್ಜಾಗುವುದು, ಈ ಎಲ್ಲ ಸಂದರ್ಭದಲ್ಲಿ ಅಮೋಘವಾಗಿ ನಟಿಸಿದ್ದಾರೆ ಪೂಜಾ. ವಸ್ತ್ರಾಪಹರಣದ ಸಮಯದಲ್ಲಿ ಪೂಜಾ ಪರಕಾಯ ಪ್ರವೇಶ ಮಾಡಿದ್ದಾರೆ. ಈ ಪಾತ್ರದಿಂದ ಪೂಜಾ ಅವರ ಜೀವನದಲ್ಲಿ ಬದಲಾವಣೆಯಾಗಿದೆ. ಸಣ್ಣ ಸಣ್ಣ ಸಮಸ್ಯೆಗಳಿಗೆ ಚಿಂತೆ ಮಾಡುತ್ತೇವೆ ಆದರೆ ದ್ರೌಪದಿ ಎಷ್ಟು ಅವಮಾನಗಳನ್ನು ಸಹಿಸಿ ಆತ್ಮಗೌರವ ಕಾಪಾಡಿಕೊಳ್ಳುತ್ತಾಳೆ, ಒಬ್ಬ ಸ್ತ್ರೀ ಎಷ್ಟು ಗಟ್ಟಿಗಿತ್ತಿಯಾಗಿರಬೇಕು ಎಂದು ದ್ರೌಪದಿ ಸಾರಿ ಸಾರಿ ಹೇಳಿದಳು ಇದು ಪೂಜಾ ಜೀವನವನ್ನು ನೋಡುವ ದೃಷ್ಟಿ ಕೋನ ಬದಲಾಯಿತು. ಈ ಪಾತ್ರದಿಂದ ಪೂಜಾ ಅವರಿಗೆ ಹೆಚ್ಚಿನ ಅವಕಾಶಗಳು ದೊರೆಯಿತು. ಮಹಾಕಾಳಿ ಧಾರಾವಾಹಿಯಲ್ಲಿ ಕಾಳಿ ರೋಲ್ ದೊರೆಯಿತು. ಅವರ ಜೀವನದಲ್ಲಿ ಯಶಸ್ಸನ್ನು ಪಡೆಯಲಿ ಎಂದು ಹಾರೈಸೋಣ.t

Leave a Reply

Your email address will not be published. Required fields are marked *