40 ವರ್ಷಕ್ಕೊಮ್ಮೆ ಕಾಣಿಸುವ ಶಿವಲಿಂಗ, ಈ ದೇವಾಲಯದ ಚಮತ್ಕಾರಿ ಪವಾಡ ಕೇಳಿದ್ರೆ ನಿಬ್ಬೆರಗಾಗ್ತೀರಾ

0 3

ನಾವು ನೀವು ಸಾಕಷ್ಟು ಶಿವಲಿಂಗದ ಬಗ್ಗೆ ತಿಳಿದುಕೊಂಡಿದ್ದೇವೆ ಹಾಗೂ ನೋಡಿದ್ದೇವೆ ಕೂಡ ಆದರೆ ಇಲ್ಲಿ ಒಂದು ದೇವಾಲಯದಲ್ಲಿ ಶಿವಲಿಂಗವಿದ್ದು ಅದರ ಚಮತ್ಕಾರಕ್ಕೆ ಎಲ್ಲರೂ ನಿಬ್ಬೆರಗಾಗಿದ್ದಾರೆ. ಹಾಗಾದ್ರೆ ಅಂತಹ ಚಮತ್ಕಾರ ಇರುವ ಶಿವಲಿಂಗ ಯಾವುದು ಎಲ್ಲಿದೆ ,ಅದರ ಮಹಿಮೆ ಏನು ಅನ್ನೋದನ್ನ ನೋಡೋಣ ಬನ್ನಿ.

ದಕ್ಷಿಣ ಕಾಶಿ ಎಂದೇ ಹೆಸರು ವಾಸಿಯಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕರಾವಳಿಯಲ್ಲಿ ಇರುವ ಗೋಕರ್ಣ ವು ಪ್ರವಾಸಿ ತಾಣವೂ ಹೌದು ಹಾಗೆಯೇ ಭಕ್ತಿ ವಲಯವು ಹೌದು. ಗೋಕರ್ಣವನ್ನು ಶಿವ ಹಾಗೂ ಮಹಾವಿಷ್ಣುವಿನ ನಗರ ಅಂತಲೂ ಕರೆಯುತ್ತಾರೆ. ಮಹಾಬಲೇಶ್ವರ ದೇವಾಲಯವು ಗೋಕರ್ಣದ ಅತ್ಯಂತ ಹಳೆಯ ಹಾಗೂ ಅದ್ಭುತ ದೇವಾಲಯವಾಗಿದೆ.ಕನಿಷ್ಠ ಒಂದು ಸಾವಿರದ ಐದುನೂರು ವರ್ಷಗಳಷ್ಟು ಹಳೆಯದು ಎಂದು ಹೇಳಲಾಗಿದೆ.ಅಷ್ಟೇ ಅಲ್ಲದೆ ಈ ದೇವಾಲಯವು ಕರ್ನಾಟಕದ ವಿಮೋಚನಾ ದೇವಾಲಯಗಳಲ್ಲಿ ಇದು ಕೂಡ ಒಂದಾಗಿದೆ.

ಈ ದೇವಾಲಯದಲ್ಲಿರುವ ಶಿವಲಿಂಗವನ್ನು ಆತ್ಮಲಿಂಗ ಎಂದು ಕೂಡ ಕರೆಯುತ್ತಾರೆ. ಈ ಶಿವಲಿಂಗವು ನಲವತ್ತು ವರ್ಷಗಳಿಗೊಮ್ಮೆ ದರ್ಶನ ನೀಡುತ್ತದೆ ಎಂದು ಹೇಳಲಾಗುತ್ತದೆ.ಹಾಗಾಗಿ ಈ ಸ್ಥಳವನ್ನು ದಕ್ಷಿಣದ ಕಾಶಿ ಎಂದು ಕರೆಯುತ್ತಾರೆ. ಈ ಮಹಾಬಲೇಶ್ವರ ದೇವಾಲಯದಲ್ಲಿ ಇರುವ ಈ ಶಿವಲಿಂಗವನ್ನು ಕಾಶಿ ವಿಶ್ವನಾಥ ನಷ್ಟೇ ಪವಿತ್ರ ಕ್ಷೇತ್ರ ಎಂದು ಪರಿಗಣಿಸಲಾಗಿದೆ.

ಲಂಕಾಧಿಪತಿಯಾದ ರಾವಣನಿಗೆ ಈ ಲಿಂಗವನ್ನು ಶಿವನೇ ನೀಡಿದರೆಂದು ಹೇಳಲಾಗುತ್ತದೆ.ಆದರೆ ವರುಣ ದೇವ ಮತ್ತು ಗಣೇಶನು ಈ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದರು.ರಾವಣನು ಆ ಲಿಂಗವನ್ನು ತೆಗೆಯಲು ತನ್ನ ಶಕ್ತಿ ಮೀರಿ ಪ್ರಯತ್ನ ಮಾಡಿದ್ದನು ಆದರೆ ಆ ಲಿಂಗವನ್ನು ಅಲುಗಾಡಿಸಲು ಕೂಡ ಆಗಲಿಲ್ಲ. ಅಂದಿನಿಂದ ಇದು ಶಿವನ ವಾಸಸ್ಥಳ ಎಂದು ನಂಬಲಾಗಿದೆ.ಈ ದೇವಾಲಯದಲ್ಲಿ ಆರು ಅಡಿ ಎತ್ತರದ ಶಿವಲಿಂಗವಿದೆ ಮತ್ತು ಬೆಳ್ಳಿ ಗ್ರಾನೈಟ್ ನನ್ನು ಕೂಡ ಬಳಸಲಾಗಿದೆ.ಹಾಗೂ ಇಲ್ಲಿ ದ್ರಾವಿಡ ವಾಸ್ತು ಶಿಲ್ಪವನ್ನು ಕೂಡ ನೋಡಬಹುದು.

ಹಿಂದೂ ಪುರಾಣದಲ್ಲೂ ಕೂಡ ಈ ದೇವಾಲಯದ ಬಗ್ಗೆ ಉಲ್ಲೇಖನ ಮಾಡಲಾಗಿದೆ. ದಕ್ಷಿಣಕಾಶಿ ಎಂದು ಬಿರುದು ಕೂಡ ಪಡೆದಿದೆ. ಈ ದೇವಾಲಯಕ್ಕೆ ತೆರಳುವ ಮುನ್ನ ಕಾರವಾರದ ಕಡಲತೀರದಲ್ಲಿ ಅಭ್ಯುಜಯನ ಮುಗಿಸಿ ದೇವಾಲಯದ ಮುಂಭಾಗ ಇರುವ ಮಹಾಗಣಪತಿಯ ದರ್ಶನ ಪಡೆದ ನಂತರವೇ ಮಹಾಬಲೇಶ್ವರ ನ ದರ್ಶನ ಪಡೆಯುವುದು ಅಲ್ಲಿನ ವಾಡಿಕೆಯಾಗಿದೆ.ಗಣೇಶನೇ ಆ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದರಿಂದ ಗಣೇಶನ ಗುಡಿಯನ್ನು ನಿರ್ಮಿಸಿದ್ದರು. ಗೋಕರ್ಣದಲ್ಲಿ ಇನ್ನೂ ಅನೇಕ ದೇವಾಲಯಗಳಿದ್ದು ಅವುಗಳು ಕೂಡ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಭಕ್ತಿ ಹಾಗೂ ನಂಬಿಕೆಯನ್ನು ಹೊಂದಿದ್ದಾವೆ. ಇದೇ ಸ್ಥಳದಲ್ಲಿ ರಾವಣನು ಗಣೇಶನ ಮೇಲೆ ದಾಳಿ ನಡೆಸಿದ ಎಂದು ಕಥೆಯು ಹೇಳುತ್ತದೆ.

ಈ ದೇವಾಲಯದಲ್ಲಿ ಉಮಾಮಹೇಶ್ವರಿ ದೇವಾಲಯ ,ಭದ್ರಕಾಳಿ ದೇವಾಲಯ ,ವರದರಾಜ ದೇವಾಲಯ ಕಾಮಗೌರಿ ದೇವಾಲಯ ಇತ್ಯಾದಿ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಇವುಗಳಷ್ಟೇ ಅಲ್ಲದೆ ಗೋಕರ್ಣದ ಸೇಜೇಶ್ವರ ,ಮುರುಡೇಶ್ವರ ,ಗುಣವಂತೇಷ್ವರ,ಮತ್ತು ಧಾರೇಶ್ವರ ದೇವಾಲಯಗಳನ್ನು ಕೂಡ ನೋಡಬಹುದು.ಮಹಾಬಲೇಶ್ವರ ದೇವಾಲಯ ಮತ್ತು ಈ ನಾಲ್ಕು ದೇವಾಲಯಗಳನ್ನು ಒಟ್ಟಾಗಿ ಪಂಚಮಹಾಕ್ಷೇತ್ರ ಎಂದು ಕರೆಯಲಾಗುತ್ತದೆ.

ದೇವಾಲಯದ ಒಳಗೆ ಹಿಂಭಾಗದಲ್ಲಿ ಸ್ವಯಂಭೂ ಶಿವಲಿಂಗದ ಮುಂಭಾಗವನ್ನು ನೋಡಬಹುದಾಗಿದೆ ಹಾಗೂ ಅದಕ್ಕೆ ಪೂಜೆ ಕೂಡ ಸಲ್ಲಿಸಲ್ಪಡುತ್ತದೆ. ಈ ವಿಗ್ರಹವು ಜಿಂಕೆಯಂತಿದ್ದು ಪಾತಾಳ ಲೋಕಕ್ಕೆ ತಪಸ್ಸಿಗೆಂದು ಹೋದ ಶಿವನು ಗೋವಿನ ಕಿವಿಯಿಂದ ಹೊರಬರುತ್ತಾನೆ ಹಾಗಾಗಿ ಈ ಪ್ರದೇಶವನ್ನು ಗೋಕರ್ಣ ಎಂದು ಕರೆಯುತ್ತಾರೆ. ಇಲ್ಲಿಗೆ ನೀವು ಜೀನ್ಸ್ ಪ್ಯಾಂಟ್ ಮತ್ತು ಶರ್ಟ್ ತೊಟ್ಟು ಹೋಗುವಂತಿಲ್ಲ. ಬೆಳ್ಳಗೆ ಆರರಿಂದ ಮಧ್ಯಾನ್ಹ ಹನ್ನೆರಡರವರೆಗೆ ತೆರೆದಿರುತ್ತದೆ.ನಂತರ ಸಂಜೆ ಐದರಿಂದ ರಾತ್ರಿ ಎಂಟರವರೆಗೆ ಈ ದೇವಾಲಯದ ಬಾಗಿಲನ್ನು ತೆರೆದಿರುತ್ತಾರೆ.ಆದರೆ ಇಲ್ಲಿರುವ ಶಿವಲಿಂಗವನ್ನು ನಲವತ್ತು ವರ್ಷಗಳಿಗೊಮ್ಮೆ ಮಾತ್ರ ನೋಡಲಾಗುತ್ತದೆ.ಇದರ ರಹಸ್ಯವೇನು ಎಂಬುದು ಇಲ್ಲಿಯವರೆಗೂ ಯಾರಿಗೂ ತಿಳಿದಿಲ್ಲ

Leave A Reply

Your email address will not be published.