Ultimate magazine theme for WordPress.

ಎಲ್‌ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ, ಕೇವಲ 634 ರೂಪಾಯಿಗೆ LPG ಸಿಲಿಂಡರ್ ಖರೀದಿಸುವ ಅವಕಾಶ

0 1

ನಮ್ಮ ದೇಶದಲ್ಲಿ ಪ್ರತಿ ಮಹಿಳೆ ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡಬೇಕು ಕಟ್ಟಿಗೆ ಒಲೆಯನ್ನು ಉರಿಸಬಾರದು ಎಂದು ಮೋದಿ ಅವರು ಉಜ್ವಲ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಅಡುಗೆ ಸಿಲಿಂಡರ್ ನ ಬೆಲೆ ಏರಿಕೆ ಆಗುತ್ತಲೆ ಇರುತ್ತದೆ. ಆದರೆ ಕಡಿಮೆ ತೂಕದ, ಕಡಿಮೆ ಬೆಲೆಯ ಸಿಲಿಂಡರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಎಲ್‌ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಕೇವಲ 634 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ಖರೀದಿಸುವ ಅವಕಾಶ ಗ್ರಾಹಕರಿಗೆ ಸಿಗುತ್ತಿದೆ. ಹಣದುಬ್ಬರದ ಈ ಯುಗದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಗ್ರಾಹಕರಿಗೆ ಅಗ್ಗದ ಸಿಲಿಂಡರ್‌ಗಳನ್ನು ತಂದಿದೆ. ಈ ವಿಶೇಷ ಸಿಲಿಂಡರ್‌ನ ಬಗ್ಗೆ ಗ್ರಾಹಕರು ತಿಳಿಯಲೆಬೇಕು.ಈ ಸಿಲಿಂಡರ್ ಹಗುರ ಮತ್ತು ಅಗ್ಗವಾಗಿದೆ. ಈ ಸಿಲಿಂಡರ್ ಮಹಿಳೆಯರಿಗೆ ಸಹಾಯವಾಗುತ್ತದೆ.

ಈ ಸಿಲಿಂಡರ್‌ನ ಹೆಸರು ಕಾಂಪೋಸಿಟ್ ಸಿಲಿಂಡರ್. ಇದು 14 ಕೆಜಿ ಸಿಲಿಂಡರ್‌ಗಿಂತ ಹಗುರವಾಗಿದೆ, ಈ ಸಿಲಿಂಡರ್ ನ ತೂಕ ಕೇವಲ 10 ಕೆ.ಜಿ. ಇದನ್ನು ಒಂದು ಕೈಯಿಂದ ಎತ್ತಬಹುದು ಮಹಿಳೆಯರು ಈ ಸಿಲಿಂಡರ್ ಅನ್ನು ಸುಲಭವಾಗಿ ಬೆಳಸಬಹುದು. ಸಿಲಿಂಡರ್ ನೋಡಲು ಚೆನ್ನಾಗಿ ಕಾಣುತ್ತದೆ. ಇದರ ವಿನ್ಯಾಸ ಗ್ರಾಹಕರಿಗೆ ಇಷ್ಟವಾಗಲಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಈ ಸಿಲಿಂಡರ್‌ನ ವಿಶೇಷತೆ ಎಂದರೆ ಅವು ಪಾರದರ್ಶಕವಾಗಿದೆ. ಈ ಸಿಲಿಂಡರ್ ನ ಬೆಲೆಯೂ ಬಹಳ ಕಡಿಮೆ ಇದೆ.

ಈ ಸಿಲಿಂಡರ್ ಹಗುರವಾದ ಕಾರಣ ಅದನ್ನು ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದು. ಸಣ್ಣ ಕುಟುಂಬಗಳು ಮತ್ತು ಸಿಂಗಲ್ ವ್ಯಕ್ತಿಗಳಿಗೆ ಕಂಪೋಸಿಟ್ ಸಿಲಿಂಡರ್ ಉತ್ತಮ ಆಯ್ಕೆಯಾಗಿದೆ. ಇದರ ವಾಸ್ತವಿಕ ಬೆಲೆ 633.5 ರೂಪಾಯಿ ಆಗಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಸಿಲಿಂಡರ್ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರ ತೂಕ ಬಹಳ ಕಡಿಮೆ ಅಲ್ಲದೆ ಇದು ಸ್ಫೋಟಗೊಳ್ಳುವುದಿಲ್ಲ. ಇವು ಪಾರದರ್ಶಕ ಸಿಲಿಂಡರ್‌ಗಳಾಗಿರುವುದರಿಂದ, ಈ LPG ಅನ್ನು ನೋಡಿದಾಗ ಎಷ್ಟು ಉಳಿದಿದೆ ಮತ್ತು ಎಷ್ಟು ಖಾಲಿಯಾಗಿದೆ ಎಂದು ತಿಳಿಯುತ್ತದೆ. ಮಾರ್ಚ್ 1 ರಂದು ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿದೆ. ಅನಿಲ ಕಂಪನಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 105 ರೂಪಾಯಿ ಹೆಚ್ಚಿಸಿವೆ. ಇದರ ಬೆಲೆ ಈಗ ದೆಹಲಿಯಲ್ಲಿ 2,012 ರೂಪಾಯಿ. ಮುಂಬೈನಲ್ಲಿ 1,963 ರೂಪಾಯಿ ಮತ್ತು ಕೋಲ್ಕತ್ತಾದಲ್ಲಿ 2,095 ರೂಪಾಯಿ ಆಗಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಅದರಲ್ಲೂ ಮಹಿಳೆಯರಿಗೆ ತಿಳಿಸಿ

Leave A Reply

Your email address will not be published.