ಶೂಟಿಂಗ್ ಕೊನೆಯ ಹಂತದಲ್ಲಿರುವ ಮದಗಜ ಸಿನಿಮಾದ ಬಗ್ಗೆ ರೋರಿಂಗ್ ಸ್ಟಾರ್ ಏನಂದ್ರು ನೋಡಿ

0 0

ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅವರು ಹೊಸ ಸಿನಿಮಾ ಒಂದನ್ನು ಲಾಂಚ್ ಮಾಡಿದರು ಅದು ಯಾವ ಸಿನಿಮಾ, ಲಾಕಡೌನ್ ಬಗ್ಗೆ ಹಾಗೂ ಅವರ ಹೊಸ ಸಿನಿಮಾ ಮದಗಜ ಸಿನಿಮಾ ಬಗ್ಗೆ ಅವರ ಮನದಾಳದ ಮಾತುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ನೋಡಿದವರು ಏನಂತಾರೆ ಎಂಬ ಹೊಸ ಸಿನಿಮಾ ಲಾಂಚ್ ಆಗುತ್ತಿದೆ ಈ ಸಿನಿಮಾವನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅವರು ಲಾಂಚ್ ಮಾಡಿದರು. ಲಾಕಡೌನ್ ನಂತರ ಈಗ ಸಿನಿಮಾ ಲಾಂಚ್ ಮಾಡುತ್ತಿರುವುದು ಖುಷಿಯಾಗುತ್ತಿದೆ, ಸಿನಿಮಾಗಳಿಂದ ಮನರಂಜನೆ ಸಿಗುತ್ತದೆ. ಚಿತ್ರರಂಗದಲ್ಲಿ ಹೆಚ್ಚು ಒಳ್ಳೆಯ ಕಥೆಗಳು, ನಾಯಕ- ನಾಯಕಿಯರು, ಟೆಕ್ನಿಷಿಯನ್ಸ್ ಬಂದಷ್ಟು ಮೊದಲಿನಂತೆ ಆಗುತ್ತದೆ ಈಗ ಮೊದಲಿನಂತೆ ಆಗುತ್ತಿದೆ ಆದಷ್ಟು ಬೇಗ ಮೊದಲಿನಂತೆ ಆಗಲಿ, ಒಳ್ಳೊಳ್ಳೆ ಸಿನಿಮಾಗಳು ಬರಲಿ ಎಂದು ಶ್ರೀ ಮುರಳಿ ಅವರು ಹೇಳಿದರು. ಅವರು ಲಾಕ್ ಡೌನ ಬಹಳಷ್ಟು ತಿಳಿಸಿಕೊಟ್ಟಿದೆ, ಮನೆ ಕೆಲಸದ ಬಗ್ಗೆ ತಿಳಿಸಿಕೊಟ್ಟಿದೆ. ಮನೆಯಲ್ಲಿ ಅಡುಗೆ, ಕ್ಲೀನ್ ಮಾಡುತ್ತಿದ್ದೆ, ಮಕ್ಕಳ ಜೊತೆ ವ್ಯಾಯಾಮ ಮಾಡುತ್ತಿದ್ದೆ, ನನ್ನನ್ನು ನಾನು ಕಂಡುಕೊಂಡೆ ವೈಯುಕ್ತಿಕವಾಗಿ ನನಗೆ ಒಳ್ಳೆಯ ಅನುಭವ ಕೊಟ್ಟಿದೆ ಲಾಕ್ ಡೌನ್ ಸಮಯ ಎಂದು ಹೇಳಿದರು.

ಶ್ರೀ ಮುರುಳಿ ಅವರು ನಟಿಸುತ್ತಿರುವ ಹೊಸ ಸಿನಿಮಾ ಮದಗಜ. ಮೈಸೂರಿನಲ್ಲಿ ಮದಗಜ ಸಿನಿಮಾ ಬಗ್ಗೆ ಪ್ರೋಗ್ರಾಮ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಂದಿದ್ದರು ಅದರ ಬಗ್ಗೆ ಶ್ರೀ ಮುರುಳಿ ಅವರು ಎಲ್ಲರೂ ಬಹಳ ದಿನದ ನಂತರ ಸೇರಿರುವುದು ಬಹಳ ಖುಷಿ ಕೊಟ್ಟಿತು. ಅದು ಒಳ್ಳೆಯ ಘಟನೆಯಾಗಿದೆ, ಅವರೊಂದಿಗೆ ಸಮಯ ಕಳೆದಿದ್ದು ಚೆನ್ನಾಗಿತ್ತು ಎಂದು ಶ್ರೀ ಮುರುಳಿ ಅವರು ಹೇಳಿದರು. ಮದಗಜ ಸಿನಿಮಾದ ಶೂಟಿಂಗ್ ಕೊನೆಯ ಹಂತದಲ್ಲಿದೆ, ಶೀಘ್ರದಲ್ಲಿ ಸಿನಿಮಾ ತೆರೆಯ ಮೇಲೆ ಬರಲಿದೆ, ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಎಂದು ಅವರು ತಮ್ಮ ಸಿನಿಮಾ ಬಗ್ಗೆ ಹೇಳಿದರು. ಅವರ ಸಿನಿಮಾಗಳು ಯಶಸ್ಸನ್ನು ತಂದುಕೊಡಲಿ ಎಂದು ಹಾರೈಸೋಣ.

Leave A Reply

Your email address will not be published.