ನಟಿ ಕಾಜಲ್ ಅಗರ್ವಾಲ್ ಅವರ ಹ’ನಿಮೂನ್ ಫೋಟೋ ಗ್ಯಾಲರಿ

0 0

ತೆಲುಗು ಸಿನಿಮಾ ರಂಗದಲ್ಲಿ ತನ್ನದೆ ಛಾಪೂ ಮೂಡಿಸಿದ ನಟಿಯರಲ್ಲಿ ಕಾಜಲ್ ಅಗರ್ವಾಲ್ ಕೂಡ ಒಬ್ಬರು. ಯಾವುದೇ ರೀತಿಯ ಪಾತ್ರಗಳನ್ನು ತುಂಬಾ ನಾಜೂಕಾಗಿ, ಅಚ್ಚುಕಟ್ಟಾಗಿ ನಿಭಾಯಿಸುವ ಚಾಕಚಕ್ಯತೆ ಇವರಿಗಿದೆ ತೆಲಗು ಚಿತ್ರರಂಗದ ಸಮಾರು ಎಲ್ಲ ನಟರೊಂದಿಗೆ ನಟಿಸಿದ ಖ್ಯಾತಿ ಕಾಜಲ್ ಅವರದು. ಸದ್ಯ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅದರ ವಿಷಯದ ಬಗ್ಗೆ ನಾವೂ ತಿಳಿಯೋಣ.

ಕೆಲವು ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಮುಂಬಯಿನ ತಾಜ್ ಹೋಟೆಲ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ಮೊದಲ ಕರ್ವಾಚೌದ್ ವ್ರತವನ್ನು ಮಾಡುತ್ತಿರುವುದಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಪತಿ ಗೌತಮ್ ಜೊತೆಗೆ ಕಾಜಲ್ ಸುಂದರವಾದ ಫೋಟೊಗಳಲ್ಲಿ ಮಿಂಚಿದ್ದಾರೆ. ಕಾಜಲ್ ಹಾಗೂ ಗೌತಮ್ ಅವರ ಮದುವೆ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ‌ಹರಿದಾಡುತ್ತಿದೆ. ಮದುವೆಯಲ್ಲಿ ಕೆಂಪು ಹಾಗೂ ಗುಲಾಬಿ ಬಣ್ಣಗಳಿಂದ ಕೂಡಿದ ಲೆಹೆಂಗಾದಲ್ಲಿ ನಟಿ ಕಾಜಲ್ ಅಗರ್ವಾಲ್ ಮಿಂಚಿದ್ದಾರೆ. ಇವರ ಈ ಲೆಹೆಂಗಾವನ್ನು ಅನಾಮಿಕ ಖನ್ನ ಅವರು ಡಿಸೈನ್ ಮಾಡಿ ಕೊಟ್ಟಿದ್ದಾರೆ. ಇದರ ಜೊತೆಗೆ ಅದ್ಭುತ ಜ್ಯುವೆಲರಿಗಳೊಂದಿಗೆ ಮಿಂಚಿದ್ದಾರೆ. ಜ್ಯುವೆಲರಿಯನ್ನು ಮೃಣಾಲಿನಿ ಚಂದ್ರ ಅವರು ಡಿಸೈನ್ ಮಾಡಿಕೊಟ್ಟಿದ್ದಾರೆ. ಈ ಹಿಂದೆ ಪ್ರಿಯಾಂಕಾ ಚೋಪ್ರಾ ಹಾಗೂ ಸೋನಮ್ ಕಪೂರ್ ಮತ್ತಿತರರಿಗೆ ಡಿಸೈನ್ ಮಾಡಿ ಕೊಟ್ಟಿದ್ದರು. ಹಸಿರು ಹಾಗೂ ಬಿಳಿ ಬಣ್ಣದ ಹರಳುಗಳಿಂದ ಜ್ಯುವಲರಿ ಕಂಗೊಳಿಸುತ್ತಿತ್ತು. ಈ ಹಿಂದೆ ಮಿಹಿಕಾ ಬಜಾಜ್, ಸೋನಮ್ ಕಪೂರ್ ಹಾಗೂ ಮೀರಾ ಕಪೂರ್ ಅವರಿಗೆ ಸುಂದರವಾದ ಮಧುಮಗಳ ವಸ್ತ್ರಗಳನ್ನು ಅನಾಮಿಕ ಖನ್ನಾ ಡಿಸೈನ್ ಮಾಡಿಕೊಟ್ಟಿದ್ದರು. ಈಗ ಕಾಜಲ್ ಅವರಿಗೂ ಅನಾಮಿಕ ಖನ್ನಾ ಅವರು ಸುಂದರವಾದ ಲೆಹೆಂಗಾ ಡಿಸೈನ್ ಮಾಡಿಕೊಟ್ಟಿದ್ದಾರೆ. ಗೌತಮ್ ಅವರ ಶರ್ವಾನಿಯ ಬೆಲೆ ಒಂದು ಲಕ್ಷ ಹದಿನೈದು ಸಾವಿರ ರೂಪಾಯಿಗಳು. ಮದುವೆಯಲ್ಲಿ ಸೌತ್ ಇಂಡಿಯನ್ ಸಂಪ್ರದಾಯಗಳ ಜೊತೆಗೆ ಪಂಜಾಬಿ ಹಾಗೂ ಕಾಶ್ಮೀರಿ ಪದ್ದತಿಯನ್ನು ಅನುಸರಿಸಲಾಗಿದೆ.

ಡಿಸೈನರ್ ಗಳ ಅದ್ಭುತ ಕೈಚಳಕದಲ್ಲಿ ಸುಂದರವಾಗಿ ಕಾಣಿಸುತ್ತಿದ್ದ ನಟಿ ಕಾಜಲ್ ಅಗರ್ವಾಲ್ ಅವರು ಗೌತಮ್ ಜೊತೆ ಸಪ್ತಪದಿ ತುಳಿದಿದ್ದಾರೆ. ಈಗ ಕರ್ವಾಚೌದ್ ವ್ರತವನ್ನು ಆಚರಿಸುತ್ತಿದ್ದಾರೆ.

Leave A Reply

Your email address will not be published.