ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಬಿಸಿನೆಸ್ ವುಮೆನ್ ಹಾಗೂ ವಿಲನ್ ಆಗಿ ನಟಿಸಿದ ಮಾನಸ ಅರ್ಜುನ್ ಅವರು ನಟನೆಯ ಜೊತೆ ಮಾಡೆಲಿಂಗ್ ಕೂಡ ಮಾಡುತ್ತಾರೆ ಅದರ ಬಗ್ಗೆ ಅವರ ಮಾತನ್ನು ಈ ಲೇಖನದ ಮೂಲಕ ತಿಳಿಯೋಣ.

ಮಾನಸ ಅರ್ಜುನ್ ಅವರಿಗೆ ಆಕ್ಟಿಂಗ್ ಮಾಡುವಾಗ ಮೊಡಲಿಂಗ್ ನಲ್ಲೂ ಅವಕಾಶ ಬಂದಿತು. ಮೊದಲು ಸಣ್ಣ ಪುಟ್ಟ ಪ್ರಿಂಟ್ ಶೂಟ್ಸ್ ಮಾಡುತ್ತಿದ್ದರು. 2014 ರಲ್ಲಿ ಮಿಸ್ ಕರ್ನಾಟಕ ಆಡಿಷನ್ ನಡೆಯುತ್ತಿರುವುದು ತಿಳಿಯುತ್ತದೆ. ಹೇಗಿರುತ್ತದೆ ನೋಡೋಣ ಎಂದು ಆಡಿಷನ್ ಕೊಡುತ್ತಾರೆ. ನಂತರ 14-16 ಜನರನ್ನು ಆಯ್ಕೆ ಮಾಡಿದರು ಅದರಲ್ಲಿ ಮಾನಸ ಅವರನ್ನು ಆಯ್ಕೆ ಮಾಡಿದರು ಮೊದಲು ಟ್ರೇನಿಂಗ್ ಕೊಡುತ್ತಾರೆ. ನಂತರ ಮೇನ್ ಇವೆಂಟ್ ಇರುತ್ತದೆ ಅದರಲ್ಲಿ ಮೂರು ರೌಂಡ್ ಇರುತ್ತದೆ ಮೊದಲನೇ ರೌಂಡ್ ನಲ್ಲಿ ಡ್ರೆಸ್, ರಾಂಪ್ ವಾಕ್ ಇರುತ್ತದೆ ಎರಡನೇ ರೌಂಡ್ ನಲ್ಲಿ ಪ್ರಶ್ನೆ ಕೇಳುತ್ತಾರೆ, ಮೂರನೇ ರೌಂಡ್ ನಲ್ಲಿ ಹೇರ್ ಸ್ಟೈಲ್, ಬೊಡಿ, ವಾಕ್ ನೋಡಿ ಅದರ ಪ್ರಕಾರ ಜಡ್ಜ್ ಮಾರ್ಕ್ಸ್ ಕೊಡುತ್ತಾರೆ. ಅದರಲ್ಲಿ ಟ್ಯಾಲೆಂಟ್ ರೌಂಡ್ ಇರುತ್ತದೆ ಅದರಲ್ಲಿ ಹಾಡು ಹೇಳಲು ಬರುವವರು ಹಾಡು, ಡ್ಯಾನ್ಸ್ ಹೀಗೆ ಅವರ ಟ್ಯಾಲೆಂಟ್ ತೋರಿಸಬಹುದು. ಆ ಸಮಯದಲ್ಲಿ ಮಾನಸ ಅವರು ಒಂದು ಟಾಪಿಕ್ ಬಗ್ಗೆ ಮಾತನಾಡಿದ್ದರು ಅದರಲ್ಲಿ ವಿನ್ ಆಗಿ ಮಿಸ್ ಕರ್ನಾಟಕ ಟೈಟಲ್ ಸಿಕ್ಕಿತು ಎಂದು ಅವರು ಹೇಳಿದರು.

ನಂತರ ಮೊಡೆಲಿಂಗ್ ಫೀಲ್ಡ್ ನಲ್ಲಿ ಹೆಚ್ಚು ಅವಕಾಶ ದೊರೆಯಿತು. ಅವರು ರಾಂಪ ಮಾಡೆಲಿಂಗ್ ಬಗ್ಗೆ ಆಸಕ್ತಿ ವಹಿಸಲಿಲ್ಲ ರಾಂಪ್ ಮೊಡೆಲಿಂಗ್ ಮಾಡಬೇಕಾದರೆ ಹೆಚ್ಚು ಎತ್ತರ ಇರಬೇಕು. ಕೆಲವರು ಮಿಸ್ ಇಂಡಿಯಾ ಇಂತಹ ಕಾರ್ಯಕ್ರಮಗಳಲ್ಲಿ ವಿನ್ ಆದರೆ ಅಳುತ್ತಾರೆ ಆದರೆ ನಾನು ಮಿಸ್ ಕರ್ನಾಟಕ ಕಾರ್ಯಕ್ರಮದಲ್ಲಿ ವಿನ್ ಆದಾಗ ಅಳುವಷ್ಟು ಏನು ಅನಿಸಲಿಲ್ಲ ವಿನ್ನರ್ ಆಗದೆ ಇದ್ದರು ರನ್ನರ್ ಆಗುತ್ತೇನೆ ಎಂದು ಅಂದುಕೊಂಡಿದ್ದೆ ಮಿಸ್ ಕರ್ನಾಟಕ ಎಂದು ಟೈಟಲ್ ಕೊಟ್ಟಾಗ ತುಂಬಾ ಖುಷಿಯಾಯಿತು ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ ನನಗೆ ಸಿಕ್ಕಿದ್ದು ಬಹಳ ಸಂತೋಷವಾಗಿದೆ ಅಲ್ಲದೆ ನನಗೆ ಮರೆಯಲಾಗದ ಘಟನೆ ಎಂದು ಮಾನಸ ಅವರು ಹೇಳಿಕೊಂಡಿದ್ದಾರೆ. ನಾನು ಆಕ್ಟಿಂಗ್ ಗೆ ಮೊದಲ ಆದ್ಯತೆ ಕೊಡುತ್ತೇನೆ ಎಂದು ಅವರು ಹೇಳಿದ್ದಾರೆ. ಮಾನಸ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿ ಎಂದು ಹಾರೈಸೋಣ.

By

Leave a Reply

Your email address will not be published. Required fields are marked *