ಕನ್ನಡ ಸಿನಿಮಾ ನಟ ಧ್ರುವ ಸರ್ಜಾ ಅವರು ಹೊಸ ಸಿನಿಮಾ ಒಂದರಲ್ಲಿ ನಟನೆ ಮಾಡುತ್ತಿದ್ದು ಆ ಸಿನಿಮಾದ ಬಗ್ಗೆ ಹಾಗೂ ಚಿರು ಸರ್ಜಾ ಬಗ್ಗೆ ಅವರ ಮಾತನ್ನು ಈ ಲೇಖನದ ಮೂಲಕ ತಿಳಿಯೋಣ.

ಧ್ರುವ ಸರ್ಜಾ ಅವರ 5 ನೇ ಸಿನಿಮಾ ದುಬಾರಿ ಸಿನಿಮಾ. ಈ ಸಿನಿಮಾದಲ್ಲಿ ಪೊಗರು ಸಿನಿಮಾದ ಟೆಕ್ನಿಷಿಯನ್ಸ್ ಕೆಲಸ ಮಾಡುತ್ತಿದ್ದಾರೆ. ನಂದ ಕಿಶೋರ್ ಸರ್ ದುಬಾರಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡಣ್ಣ, ತಾರಮ್ಮಾ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಂದನ್ ಅವರ ಮ್ಯೂಸಿಕ್ ಈ ಸಿನಿಮಾದಲ್ಲಿದೆ. ಈ ಸಿನಿಮಾದಲ್ಲಿ ಬಹಳ ಪರಿಶ್ರಮದಿಂದ ಡೈಲಾಗ್ಸ್, ಕ್ಯಾಮೆರಾ ಹೀಗೆ ಎಲ್ಲರೂ ತಮ್ಮ ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಧ್ರುವ ಸರ್ಜಾ ಅವರು ಹೇಳಿದರು. ಈ ಸಿನಿಮಾಗೆ ದುಬಾರಿ ಎಂಬ ಹೆಸರು ಇಟ್ಟಿದ್ದು ನಂದಕಿಶೋರ್ ಸರ್. ಮುಂದಿನ ದಿನಗಳಲ್ಲಿ ಧ್ರುವ ಸರ್ಜಾ ಅವರು ವರ್ಷಕ್ಕೆ 2-3 ಸಿನಿಮಾದಲ್ಲಿ ನಟಿಸಬೇಕು ಎಂದು ಅಂದುಕೊಂಡಿದ್ದಾರೆ. ಡಿಸೆಂಬರ್ ಮೊದಲ ವಾರದಿಂದ ದುಬಾರಿ ಸಿನಿಮಾದ ಶೂಟಿಂಗ್ ಪ್ರಾರಂಭವಾಗುತ್ತದೆ ಎಂದು ಧ್ರುವ ಸರ್ಜಾ ಅವರು ಹೇಳಿದರು.

ಧ್ರುವ ಸರ್ಜಾ ಅವರು ತಮ್ಮ ಅಣ್ಣ ಚಿರು ಸರ್ಜಾ ಅವರ ಪುಟೇಜ್ ಗಳನ್ನು ಸುಮ್ಮನೆ ಬಳಸುವುದು ಇಷ್ಟವಿಲ್ಲ, ಫ್ಯಾಮಿಲಿಯಲ್ಲಿ ಎಲ್ಲರೂ ನೋಡುತ್ತಾರೆ ಎಲ್ಲರಿಗೂ ಫ್ಯಾಮಿಲಿ ಇದೆ ಅಣ್ಣನ ಪುಟೇಜ್ ಸೆನ್ಸಿಟಿವ್ ಆಗಿ ಬಳಸಬೇಕು ಎಂದು ಅವರು ಸ್ವಲ್ಪ ಖಾರವಾಗಿಯೇ ಹೇಳಿದರು. ಅಣ್ಣನನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ, ಅವರ ನೆನಪು ಆಗುತ್ತದೆ ಎಂದು ಧ್ರುವ ಸರ್ಜಾ ಅವರು ತಮ್ಮ ಮಾತನ್ನು ಹೇಳಿಕೊಂಡರು. ಚಿರು ಸರ್ಜಾ ಅವರು ಇಲ್ಲದಿರುವುದು ಕನ್ನಡ ಚಿತ್ರರಂಗ ಹಾಗೂ ಅವರ ಕುಟುಂಬದವರಿಗೆ ಈಗಲೂ ಬಹಳಷ್ಟು ದುಃಖವಿದೆ ಧ್ರುವ ಸರ್ಜಾ ಅವರ ಸಿನಿಮಾಗಳು ಯಶಸ್ಸನ್ನು ತಂದುಕೊಡಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *