ಲೋ ಬಿಪಿ ಅಥವಾ ಹೈ ಬಿಪಿ ಯಾವುದೇ ಇರಲಿ ಬುಡದಿಂದ ತಗೆದುಹಾಕುತ್ತೆ ಈ ಪವರ್ ಫುಲ್ ಮನೆಮದ್ದು

0 25

ಇತ್ತೀಚಿನ ದಿನಗಳಲ್ಲಿ 40 ವರ್ಷ ದಾಟುತ್ತಿದ್ದಂತೆ ಪ್ರತಿಯೊಬ್ಬರಿಗೂ ರಕ್ತದ ಒತ್ತಡದ ಸಮಸ್ಯೆ ಪ್ರಾರಂಭವಾಗುತ್ತದೆ. ತಮ್ಮ ಬದಲಾದ ಜೀವನ ಶೈಲಿ ಅಥವಾ ಆಹಾರ ಪದ್ಧತಿಯಿಂದ ಹಲವಾರು ದೀರ್ಘ ಕಾಲ ಕಾಡುವ ಕಾಯಿಲೆಗಳು ಮನುಷ್ಯನಿಗೆ ಅಂಟಿಕೊಳ್ಳುತ್ತವೆ. ಮಧುಮೇಹ ರಕ್ತದ ಒತ್ತಡ ಹೃದಯ ಸಂಬಂಧಿ ಸಮಸ್ಯೆಗಳು ಹೀಗೆ ಒಂದಕ್ಕೊಂದು ಸಂಬಂಧ ಇರುವ ಕಾಯಿಲೆಗಳು ಮನುಷ್ಯನ ದೇಹಕ್ಕೆ ಹತ್ತಿರವಾಗುತ್ತವೆ.

ರಕ್ತದ ಒತ್ತಡದ ವಿಷಯಕ್ಕೆ ಬಂದರೆ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವ ಜನರಂತೆ ಕಡಿಮೆ ರಕ್ತದ ಒತ್ತಡದ ಜನರೂ ಸಹ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಆದರೆ ಈಗ ಅತಿ ಕಡಿಮೆ ವಯಸ್ಸಿನಲ್ಲಿಯೇ ಬಿಪಿ, ಶುಗರ್ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಔಷಧಿಗಳನ್ನು ಬಳಸುವುದರಿಂದ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದಲ್ಲದೆ, ಕೆಲವು ಪರಿಣಾಮಕಾರಿ ಮನೆಮದ್ದುಗಳು ಸಹ ನಿಮಗೆ ಪ್ರಯೋಜನವನ್ನು ನೀಡುತ್ತವೆ.

ಹೈ ಬಿಪಿ ಆಗಲಿ ಲೋ ಬಿಪಿ ಆಗಲಿ ಇದ್ದರೆ ಅನುಸರಿಸಬೇಕಾದ ಕ್ರಮಗಳು
ರಕ್ತದ ಒತ್ತಡದ ಸಮಸ್ಯೆ ಜೀವನಶೈಲಿ ಮತ್ತು ಆಹಾರ ಪದ್ಧತಿ ಪ್ರಮುಖ ಕಾರಣವಾಗುತ್ತದೆ. ಒಂದು ವೇಳೆ ಇದರಲ್ಲಿ ಏರುಪೇರು ಉಂಟಾದರೆ ಅಧಿಕ ರಕ್ತದ ಒತ್ತಡ ಮತ್ತು ಕಡಿಮೆ ರಕ್ತದ ಒತ್ತಡ ಮನುಷ್ಯನಿಗೆ ಕಾಡಲು ಪ್ರಾರಂಭವಾಗುತ್ತದೆ. ಆದರೆ ಮನೆಯಲ್ಲಿ ಒಂದು ವೇಳೆ ಬ್ಲಡ್ ಪ್ರೆಶರ್ ರೋಗಿಗಳು ಇದ್ದಾರೆ ಎಂದರೆ, ಅವರನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕಾಗುತ್ತದೆ. ಅವರ ಆರೋಗ್ಯದ ಉತ್ತಮ ಮಾಹಿತಿಗೆ ಅಗತ್ಯವಾಗಿ ಮನೆಯಲ್ಲೊಂದು ಬಿಪಿ ಚೆಕ್ ಮಾಡುವ ಮಷೀನ್ ಇದ್ದರೆ ಒಳ್ಳೆಯದು. ಏಕೆಂದರೆ ಎಲ್ಲಾ ಸಮಯದಲ್ಲೂ ಆಸ್ಪತ್ರೆಗೆ ಹೋಗಲು ಆಗುವುದಿಲ್ಲ. ಹೀಗಾಗಿ ಮನೆಯಲ್ಲಿ ಬಿಪಿ ಚೆಕ್ ಮಾಡಿಕೊಳ್ಳಲು ಅನುಕೂಲವಾಗುವ ಹಾಗೆ ಡಿಜಿಟಲ್ ಬಿಪಿ ಮಷೀನ್ ಗಳು ಮಾರುಕಟ್ಟೆಯಲ್ಲಿ ತಲೆ ಎತ್ತಿವೆ.

ನೀವು ಪೋರ್ಟಬಲ್ ಆಗಿದ್ದು, ಹೊರಗಡೆ ಎಲ್ಲಾದರೂ ಪ್ರವಾಸ ಹೋದಾಗಲೂ ಕೂಡ ಇವುಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬಹುದು. ಸಾಮಾನ್ಯವಾಗಿ ಕಡಿಮೆ ರಕ್ತದ ಒತ್ತಡ ಎಂದರೆ ವೈದ್ಯಕೀಯ ಭಾಷೆಯಲ್ಲಿ ‘ಹೈಪೋಟೆಂಶನ್’ ಎಂದು ಕರೆಯುತ್ತಾರೆ. ಇದರ ಪ್ರಕಾರ ಹೃದಯಕ್ಕೆ, ಮೆದುಳಿಗೆ ಮತ್ತು ದೇಹದ ಇನ್ನಿತರ ಬಹು ಮುಖ್ಯ ಅಂಗಾಂಗಗಳಿಗೆ ಅಗತ್ಯಕ್ಕಿಂತ ಕಡಿಮೆ ರಕ್ತ ಸಂಚಾರ ಆಗುತ್ತದೆ. ಇದರಿಂದ ತಲೆ ಸುತ್ತು ಬರುವುದು, ವಾಕರಿಕೆ, ವಾಂತಿ ಮತ್ತು ಮಾನಸಿಕ ಸ್ಥಿತಿಯ ಅಸಮತೋಲನದಂತಹ ಸಮಸ್ಯೆಗಳು ತಲೆದೋರುತ್ತವೆ.

ಕೆಲವೊಂದು ಪ್ರಕರಣಗಳಲ್ಲಿ ಕಡಿಮೆ ರಕ್ತದ ಒತ್ತಡ ಹೊಂದಿರುವ ವ್ಯಕ್ತಿಗಳಿಗೆ ಯಾವುದೇ ಗುಣ ಲಕ್ಷಣಗಳು ಕಂಡು ಬರುವುದಿಲ್ಲ.ಕಡಿಮೆ ರಕ್ತದೊತ್ತಡ ಬೇರೆ ಕಾರಣಗಳ ಜೊತೆಗೆ ಬರುವಂಥದು. ಮಾನಸಿಕ ಒತ್ತಡ, ಆತಂಕ ಆದಾಗ ಬರುತ್ತದೆ. ಆದ್ದರಿಂದ ಕಾರಣ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಹೈ ಬಿಪಿ ಆಗಲಿ ಲೋ ಬಿಪಿ ಆಗಲಿ ಇದ್ದರೆ ಹೈ ಬಿಪಿ ಕಡಿಮೆ ಮಾಡಲು ಸಾಧ್ಯವಾದಷ್ಟು ಸಸ್ಯಜನ್ಯ ಆಹಾರ ಸೇವಿಸಬೇಕು. ಅದರಲ್ಲೂ ಸಾಮಾನ್ಯವಾಗಿ ತಿನ್ನುತ್ತಿದ್ದ ತರಕಾರಿಯ ಮೂರು ಪಟ್ಟು ಹೆಚ್ಚು ತರಕಾರಿ ಸೇವಿಸಬೇಕು. ಹಾಗಂತ ತಿನ್ನುವುದು ಜಾಸ್ತಿ ಮಾಡುವುದು ಬೇಡ. ಅದೇ ಸಮಯದಲ್ಲಿ ಮಾಂಸಾಹಾರ ಹಾಗೂ ಅನ್ನ ಕಡಿಮೆ ಮಾಡಿ ಬ್ಯಾಲೆನ್ಸ್ ಮಾಡಿ.

ಹೀಗೆ ಸಸ್ಯಜನ್ಯ ಆಹಾರ ಸೇವಿಸುವಾಗ ಪೊಟ್ಯಾಶಿಯಂ ಹಾಗೂ ಮೆಗ್ನೀಶಿಯಂ ಅಧಿಕವಿರುವ ಆಹಾರ ಆಯ್ದುಕೊಳ್ಳಿ. ಗೆಣಸು, ಪಾಲಕ್, ಬೀಟ್‌ರೂಟ್, ಮೊಳಕೆಕಾಳುಗಳಲ್ಲಿ ಈ ಮಿನರಲ್ಸ್ ಹೆಚ್ಚಿರುತ್ತದೆ. ದಿನಕ್ಕೆ ಕನಿಷ್ಠ 300 ಎಂಜಿಯಂತೆ ಮೂರು ತಿಂಗಳು ಮೆಗ್ನೀಶಿಯಂ ಸೇವಿಸಿದರೂ ಹೈ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ, ಮೆಗ್ನೀಶಿಯಂ ಒತ್ತಡ ಕಡಿಮೆ ಮಾಡಿ ರಿಲ್ಯಾಕ್ಸೇಶನ್ ಪ್ರೋತ್ಸಾಹಿಸುತ್ತದೆ.

ರಕ್ತದೊತ್ತಡ ಕಡಿಮೆ ಮಾಡಬೇಕೆಂದರೆ ವೈದ್ಯರು ಮೊದಲು ಹೇಳುವುದೇ ತೂಕ ಇಳಿಸಿ ಎಂದು. ತೂಕ ಹೆಚ್ಚಾದಷ್ಟೂ ಬಿಪಿ ಹೆಚ್ಚುವ ಸಾಧ್ಯತೆಗಳು ಜಾಸ್ತಿ. ಹಾಗಂತ ತೂಕ ಹೆಚ್ಚಾದೊಡನೆ ಬಿಪಿ ಹೆಚ್ಚುತ್ತದೆ, ತೂಕ ಇಳಿದೊಡನೆ ಬಿಪಿ ಇಳಿಯುತ್ತದೆ ಎಂದು ಆಗಲ್ಲ ಹೀಗಾಗಿ, ತೂಕ ಇಳಿಸುವುದೊಂದೇ ಗುರಿ ಮಾಡಿಕೊಳ್ಳುವ ಬದಲು ಆರೋಗ್ಯಕರ ಆಹಾರ ತಿನ್ನುವುದರತ್ತ ಗಮನ ಹರಿಸುವುದು ಒಳ್ಳೆಯದು.
ಲೋ ಬಿಪಿ ಇದ್ದವರು ಊಟ, ತಿಂಡಿಯಲ್ಲಿ ಸ್ವಲ್ಪ ಉಪ್ಪಿನಂಶ ಹೆಚ್ಚು ಇದ್ದರೆ ಒಳ್ಳೆಯದು ಕೂಡ. ಮೇಲುಪ್ಪು ಹಾಕಿಕೊಳ್ಳಬಹುದು. ವಿಶ್ರಾಂತಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಚೆನ್ನಾಗಿ ನಿದ್ರೆಯನ್ನು ಮಾಡಬೇಕು.

ಮಾನಸಿಕ ಒತ್ತಡದಿಂದ ಕಡಿಮೆ ರಕ್ತದೊತ್ತಡ ಉಂಟಾದರೆ ಏನಾದರೂ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕು. ಓದುವುದು, ಸಂಗೀತ ಕೇಳುವುದು, ಗಿಡಗಳನ್ನು ಬೆಳೆಸುವುದು, ಬೇರೆಬೇರೆ ಕೆಲಸಗಳನ್ನು ಮಾಡುವುದು ಹೀಗೆ ಏನಾದರೂ ಮಾಡಬೇಕು. ಪ್ರತಿದಿನ ಕನಿಷ್ಠ ಅರ್ಧಗಂಟೆ ಸಾಮಾನ್ಯ ನಡಿಗೆ ಅಥವಾ ವ್ಯಾಯಾಮ ಮಾಡಬೇಕು. ಒಟ್ಟಾರೆ ಹೇಳುವುದಾದರೆ ನಮ್ಮ ದೇಹ ಮತ್ತು ಮನಸ್ಸಿಗೆ ಸಾಕಷ್ಟು ವಿಶ್ರಾಂತಿ ನೀಡಬೇಕು. ಸಾಕಷ್ಟು ನೀರನ್ನು ಕುಡಿಯಬೇಕು. ಅಗತ್ಯ ಪೋಷಕಾಂಶಗಳಿರುವ ಆಹಾರ ಸೇವನೆ ಬಹಳ ಮುಖ್ಯ. ಮಸಾಲೆ ಹೆಚ್ಚಾಗಿರುವ ಪದಾರ್ಥಗಳನ್ನು ತಿನ್ನಬಾರದು.

ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆ, ಸಹನೆ ಮತ್ತು ಸಮಾಧಾನಗಳನ್ನು ಬೆಳೆಸಿಕೊಂಡರೆ ಮಾನಸಿಕ ಒತ್ತಡ ಮತ್ತು ಕಡಿಮೆ ರಕ್ತದೊತ್ತಡ ನಮ್ಮ ಹತ್ತಿರವೂ ಸುಳಿಯುವುದಿಲ್ಲ. ಕಡಿಮೆ ರಕ್ತದೊತ್ತಡ ಉಂಟಾದಾಗ ಒಂದು ಲೋಟ ನೀರಿಗೆ ಅರ್ಧ ಚಮಚ ಉಪ್ಪು ಹಾಕಿ ಕುಡಿಯಬೇಕು. ಅಲ್ಲದೇ ಒಂದು ಲೋಟ ನೀರಿಗೆ ಅರ್ಧ ಚಮಚ ಸಕ್ಕರೆ ಹಾಕಿಯೂ ಕುಡಿಯಬಹುದು. ಒಂದು ಲೋಟ ನೀರಿಗೆ ಒಂದು ಚಮಚ ಸಕ್ಕರೆ ಮತ್ತು ಅರ್ಧ ಚಮಚ ಉಪ್ಪು ಹಾಕಿಯೂ ಸೇವಿಸಬಹುದು.

ಲೋ ಬಿಪಿ ಇರುವವರು ನೀರಿನಂಶ ಹೆಚ್ಚಿರುವ ನಿಂಬೆ, ಮೂಸಂಬಿ, ಕಿತ್ತಲೆ ಹಣ್ಣಿನ ಜೂಸ್ ಮತ್ತು ಎಳನೀರನ್ನು ತೆಗೆದುಕೊಳ್ಳಬೇಕು. ದೇಹದಲ್ಲಿ ನಿರ್ಜಲೀಕರಣ ಆಗುವುದರಿಂದ ನೀರಿನಂಶ ಹೆಚ್ಚಿಸುವ ಶರಬತ್ತುಗಳನ್ನು ಸೇವಿಸಬೇಕು. ನೀರನ್ನು ಆದಷ್ಟು ಸ್ವಲ್ಪ ಹೆಚ್ಚು 3-4 ಲೀಟರ್ ಪ್ರತಿದಿನ ಕುಡಿಯಬೇಕು. ಒಂದು ಚಮಚ ಅಶ್ವಗಂಧ ರಸಾಯನ ಇಲ್ಲವೇ ಅಶ್ವಗಂಧ ಚೂರ್ಣದ ಜೊತೆಗೆ ಒಂದು ಚಮಚ ಜೇನುತುಪ್ಪ ಬೆರೆಸಿ ದಿನಕ್ಕೆ ಎರಡು ಬಾರಿ ಊಟದ ನಂತರ ಸೇವಿಸಬಹುದು. ಶತಾವರಿ ರಸಾಯನ/ ಚೂರ್ಣ ಮತ್ತು ಜೇನುತುಪ್ಪ ಬೆರೆಸಿ ತೆಗೆದುಕೊಳ್ಳಬಹುದು.

ಸಕ್ಕರೆ ರೋಗ ಇರುವವರು ಜೇನುತುಪ್ಪದ ಬದಲಿಗೆ ಬೆಚ್ಚಗಿನ ನೀರು ಅಥವಾ ಹಾಲನ್ನು ಇಲ್ಲಿ ಬಳಸಬಹುದು.ಧೂಮಪಾನ, ಮದ್ಯಪಾನ, ಕೆಫೀನ್ ಪದಾರ್ಥಗಳ ಸೇವನೆ ಇವುಗಳಿಂದ ದೂರವಿರಿ ಧೂಮಪಾನ ಅಭ್ಯಾಸ ಬಿಡುವುದು ಶ್ವಾಸಕೋಶದ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಮದ್ಯಪಾನ ಹಾಗೂ ಟೀ, ಕಾಫಿ ಮಿತಿಯಲ್ಲಿ ಸೇವಿಸಿ.

ಎಲ್ಲಾ ಬಗೆಯ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಅದರಲ್ಲೂ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಸಬ್ಸಿಗೆ ಸೊಪ್ಪು, ಪಾಲಾಕ್ ಸೊಪ್ಪು ಈ ರೀತಿಯ ಸೊಪ್ಪುಗಳನ್ನು ಹೆಚ್ಚಾಗಿ ಬಳಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಕೊತ್ತಂಬರಿ ಸೊಪ್ಪು ತಿಂದರೆ ತುಂಬಾ ಒಳ್ಳೆಯದು.ಅಕ್ಕಿ, ಗೋಧಿ ನೀವು ಹೆಚ್ಚಾಗಿ ಬಳಸುತ್ತಿದ್ದರೆ ಇವುಗಳ ಬಳಕೆ ಕಡಿಮೆ ಮಾಡಿ ಬದಲಿಗೆ ಸಿರಿಧಾನ್ಯಗಳಾದ ನವಣೆ, ಸಾಮೆ, ಕೊರ್ಲೆ, ಆರ್ಕ, ಊದುರು ಬಳಸಿ. ಈ ಸಿರಿಧಾನ್ಯಗಳನ್ನು ನೀವು ಪ್ರತಿನಿತ್ಯ ಬಳಸಿದ್ದೇ ಆದರೆ ಎಷ್ಟೋ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು.

ಬೊಜ್ಜು ಮೈ ಸಮಸ್ಯೆ ಇರಲ್ಲ, ಕೊಲೆಸ್ಟ್ರಾಲ್‌ ಸಮಸ್ಯೆ ಇರಲ್ಲ. ದೇಹದಲ್ಲಿ ಸಕ್ಕರೆಯಂಶ, ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ. ಈ ಸಿರಿಧಾನ್ಯಗಳನ್ನು ಪುಡಿ ಮಾಡಿ ಹಾಲಿನಲ್ಲಿ ಮಿಶ್ರ ಮಾಡಿ ಸೇವಿಸಬಹುದು ಹಾಗೂ ಉಪ್ಪಿಟ್ಟು, ರೊಟ್ಟಿ ಮುಂತಾದ ಆಹಾರ ಪದಾರ್ಥಗಳನ್ನು ಮಾಡಿ ಸೇವಿಸಬಹುದು.

Leave A Reply

Your email address will not be published.