ನೀವು ಹುಟ್ಟಿದ ದಿನಾಂಕದ ಮೇಲೆ ನಿಮ್ಮ ಮದುವೆಯ ಬಗ್ಗೆ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಆ ಅಂತ ತಿಳಿದುಕೊಳ್ಳಬಹುದು. ಅದರ ಬಗ್ಗೆ ಮತ್ತಷ್ಟು ಹೆಚ್ಚು ವಿಷಯಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಹುಟ್ಟಿದ ದಿನಾಂಕದ ಆಧಾರದ ಮೇಲೆ ಜೀವನದ ಗುಟ್ಟನ್ನು ಕಂಡು ಹಿಡಿಯಬಹುದು. ವ್ಯಕ್ತಿಗಳ ಜನ್ಮ ದಿನಾಂಕವನ್ನು ಆಧಾರಿಸಿ ಅವರು ಲವ್ ಮ್ಯಾರೇಜ್ ಆಗುತ್ತಾರ ಅಥವಾ ಅರೇಂಜ್ ಮ್ಯಾರೇಜ್ ಆಗುತ್ತಾರ ಅನ್ನೋದನ್ನ ತಿಳಿಯಬಹುದು. ನಿಮ್ಮ ಹುಟ್ಟಿದ ದಿನಾಂಕ ೬ ಆಗಿದ್ದರೆ ನಿಮ್ಮ ಸಂಖ್ಯೆ ೬, ನಿಮ್ಮ ಹುಟ್ಟಿದ ದಿನಾಂಕ ೧೩ ಆಗಿದ್ದರೆ, ನಿಮ್ಮ ಸಂಖ್ಯೆ ೧+೩=೪ ಆಗಿರತ್ತೆ. ಅದೇ ರೀತಿ ನಿಮ್ಮ ಹುಟ್ಟಿದ ದಿನಾಂಕ ೨೩ ಆಗಿದ್ದರೆ ೨+೩=5 ಆಗ ನಿಮ್ಮ ಸಂಖ್ಯೆ ೫ ಆಗತ್ತೆ. ಇದರಿಂದ ನಿಮ್ಮದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಆ ಅಂತ ತಿಳಿದುಕೊಳ್ಳಬಹುದು.

ಸಂಖ್ಯೆ ೧ ಒಂದನೇ ಸಂಖ್ಯೆಯನ್ನು ಸೂರ್ಯನಿಗೆ ಹೋಲಿಸುತ್ತಾರೆ. ಇವರು ತುಂಬಾ ನಾಚಿಕೆಯ ಸ್ವಭಾವದವರಾಗಿದ್ದು ಯಾವತ್ತೂ ತಮ್ಮ ಪ್ರೀತಿಯನ್ನು ತಿಳಿಸುವುದಿಲ್ಲ. ಇದರಿಂದಾಗಿ ಇವರು ಲವ್ ಮ್ಯಾರೇಜ್ ನಿಂದ ದೂರ ಇರುತ್ತಾರೆ. ಸಂಖ್ಯೆ ೨. ಇದನ್ನ ಚಂದ್ರನಿಗೆ ಹೋಲಿಸುತ್ತಾರೆ. ಇವರಿಗೆ ನಿಧಾನವಾಗಿ ಪ್ರೀತಿ ಹುಟ್ಟತ್ತೆ ಹಾಗಿದ್ದೂ ಗಂಭೀರವಾಗಿ ಪ್ರೀತಿಯಲ್ಲಿ ಬಿದ್ದವರಿಗೆ ಲವ್ ಮ್ಯಾರೇಜ್ ಆಗುವುದಂತು ಖಂಡಿತ.

ಸಂಖ್ಯೆ ೩ ಗುರುವಿಗೆ ಹೋಲಿಸುತ್ತಾರೆ. ಈ ಸಂಖ್ಯೆಯವರೂ ಲವ್ ಮ್ಯಾರೇಜನಲ್ಲಿ ಹೆಚ್ಚು ಸಫಲರಾಗುತ್ತಾರೆ‌. ಆದರೆ ಇವರಿಗೆ ಸ್ವಲ್ಪ ಸಹಾಯದ ಅವಶ್ಯಕತೆ ಇದ್ದು ನಂತರ ಮದುವೆಯಾಗುತ್ತಾರೆ. ಇವರ ವೈವಾಹಿಕ ಜೀವನ ಕೂಡ ಸುಂದರವಾಗಿರತ್ತೆ. ಇನ್ನೂ ೪ನೇ ಸಂಖ್ಯೆ ೪ನೇ ಸಂಖ್ಯೇ ರಾಹು. ಇವರು ಒಬ್ಬರಿಗಿಂತ ಹೆಚ್ಚು ಜನರನ್ನು ಪ್ರೀತಿಸುತ್ತಾರೆ. ಅಂದರೇ ಇವರು ಯಾವತ್ತೂ ಪ್ರೇಮ ವಿವಾಹದ ಬಗ್ಗೆ ಆಲೋಚನೆ ಮಾಡಿಯೇ ಇರಲ್ಲ. ಆದರೆ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಆದರೆ ಉತ್ತಮ ಪ್ರೇಮಿ ಆಗಬಹುದು.

ಸಂಖ್ಯೇ ೫. ಬುಧ ಅಂತ ಹೇಳ್ತಾರೆ. ಇವರು ಪಾರಂಪರಿಕ ಸಂಬಂಧವನ್ನು ಸರಿದೂಗಿಸಿಕೊಂಡು ಹೋಗಲೂ ನೋಡುತ್ತಾರೆ. ಮನೆಯವರ ಒಪ್ಪಿಗೆ ಪಡೆದು ವಿವಾಹ ಆಗುತ್ತಾರೆ‌ . ಇವರ ವೈವಾಹಿಕ ಜೀವನ ಪ್ರೇಮ ವಿವಾಹದ ಯೋಗ ಇರತ್ತೆ.

ಸಂಖ್ಯೆ ೬.ಇದನ್ನ ಶುಕ್ರನಿಗೆ ಹೋಲಿಸುತ್ತಾರೆ. ಇವರು ಒಂದಕ್ಕಿಂತ ಹೆಚ್ಚು ಪ್ರೇಮ ಸಂಬಂಧ ಹೊಂದಿದ್ದು, ಪ್ರೇಮ ವಿವಾಹ ಆಗುತ್ತಾರೆ. ಹಾಗಾಗಿ ಕೆಲವೊಮ್ಮೆ ಸೂಕ್ತ ಸಂಗಾತಿಯನ್ನ ಕಳೆದುಕೊಳ್ಳುತ್ತಾರೆ‌. ಆದರೂ ಶೇಕಡಾ ೮೦ ರಷ್ಟು ಜನರು ಪ್ರೇಮ ವಿವಾಹ ಆಗುತ್ತಾರೆ. ಇನ್ನೂ ೭ ನೇ ಸಂಖ್ಯೆಗೆ ಬಂದರೇ ಇದನ್ವ ಕೇತು ಅಂತ ಹೇಳ್ತಾರೆ‌ . ಇವರು ತುಂಬಾ ಸಂಕುಚಿತ ಸ್ವಭಾವ ಹೊಂದಿದ್ದು ತಮ್ಮ ಸ್ಟೇಟಸ್ ಗೆ ತಕ್ಕ ಸಂಗಾತಿಯನ್ನ ವಿವಾಹವಾಗುತ್ತಾರೆ. ೮ನೇ ಸಂಖ್ಯೆ. ಶನಿಯ ಸಂಖ್ಯೆ ಇದು‌. ಈ ಸಂಖ್ಯೆಯವರು ಕಡಿಮೆ ಪ್ರೇಮ ಸಂಬಂಧ ಹೊಂದಿರುತ್ತಾರೆ. ಆದರೆ ಒಂದುವೇಳೆ ಪ್ರೀತಿ ಮಾಡಿದರೇ ಸಾಯುವವರೆಗೂ ತಮ್ಮ ಪ್ರೀತಿಯನ್ನ ಉಳಿಸಿಕೊಳ್ಳುತ್ತಾರೆ‌.

ಸಂಖ್ಯೆ ೯. ಮಂಗಳನ ಸಂಖ್ಯೆ. ಮಂಗಳದಾಯಕವಾದ ಇವರು ಯಾವದೇ ರೀತಿಯ ವಿವಾದದಲ್ಲಿ ಬೀಳಲೂ ಇಷ್ಟ ಪಡಲ್ಲ. ಪ್ರೇಮದಲ್ಲಿ ವಿವಾದಗಳು . ಆದರೆ ಪ್ರೀತಿಗೆ ಸಂಬಂಧಿಸಿ ಉದಾಸೀನರಾಗಿರುತ್ತಾರೆ‌ ಹ್ರದಯದಲ್ಲಿ ತುಂಬಾ ಇಚ್ಚೆ ಇದ್ದರೂ ಭಯ ಪಡುತ್ತಾರೆ. ಇವರಲ್ಲಿ ಪ್ರೇಮವಿವಾಹ ನಡೆಯುವುದು ಕಷ್ಟ.

By

Leave a Reply

Your email address will not be published. Required fields are marked *