ನಮ್ಮ ದೇಹದಲ್ಲಿ ಹಲವಾರು ಭಾಗಗಳ ಮೇಲೆ ನಾವು ಮಚ್ಚೆಗಳು ಇರುವುದನ್ನು ಕಾಣುತ್ತೇವೆ. ಆದರೆ ಹಲವಾರು ಜನರು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲವರಿಗಂತೂ ಮಚ್ಚೆ ಇರಲಿ ಇಲ್ಲದೆ ಇರಲಿ ಅದರ ಉಪಯೋಗ ಏನು ಎಂದು ತಿಳಿದಿರುವುದಿಲ್ಲ. ಆದರೆ ನಮ್ಮ ದೇಹದ ಒಂದೊಂದು ಭಾಗದ ಮೇಲಿರುವ ಮಚ್ಚೆ ಒಂದೊಂದು ಸೂಚನೆಯನ್ನು ನೀಡುತ್ತದೆ ಅನ್ನೋದು ಸತ್ಯ. ಎಲ್ಲಿ ಮಚ್ಚೆ ಇದ್ದರೆ ಏನಾಗುತ್ತದೆ ಎಂದು ನಾವಿಲ್ಲಿ ತಿಳಿಯೋಣ.

ಮೊದಲನೆಯದಾಗಿ ನಮ್ಮ ಗಡ್ಡದ ಮೇಲೆ ಅಂದರೆ ತುಟಿಗಳ ಕೆಳಗೆ ಮಚ್ಚೆ ಇದ್ದರೆ ಅದು ಅದ್ರಷ್ಟ ಎನ್ನುತ್ತಾರೆ. ಹೆಂಗಸರಿಗೆ ಹಾಗೂ ಗಂಡಸರಿಗೆ ಇಬ್ಬರಿಗೂ ಬಹಳ ಅದ್ರಷ್ಟ ಎನ್ನುತ್ತಾರೆ. ಇಂತಹವರು ಹಣಕಾಸಿನ ವಿಚಾರದಲ್ಲಿ ಬಹಳ ಗಟ್ಟಿಯಾಗಿ ಇರುತ್ತಾರೆ. ಯಾವುದೇ ರೀತಿಯಲ್ಲಿ ಕೂಡ ಹಣದ ಕೊರತೆ ಬರುವುದಿಲ್ಲ. ಹೆಂಗಸರಿಗೆ ಸುಂದರವಾದ ರೂಪವನ್ನು ನೀಡುತ್ತದೆ. ಈ ಮಚ್ಚೆ ಅವರಿಗೆ “ಸೆಂಟರ್ ಒಫ್ ಅಟ್ರಾಕ್ಷನ್” ಅಂತ ಹೇಳಬಹುದು.

ಮೂಗಿನ ಮೇಲೆ ಮಚ್ಚೆ ಇದ್ದರೆ ಅಂದುಕೊಂಡಂತಹ ಕೆಲಸಗಳೆಲ್ಲ ಯಾವುದೇ ರೀತಿಯ ವಿಘ್ನವಿಲ್ಲದೆ ನಡೆ ಯುತ್ತವೆ. ಇಂತಹ ವ್ಯಕ್ತಿಗಳು ಬಹಳಷ್ಟು ಹೃದಯವಂತರು. ಇವರಿಗೆ ದ್ವೇಷ ಎನ್ನುವುದು ಹುಟ್ಟುವುದೇ ಇಲ್ಲ. ಬೆಳೆಯುತ್ತಾ ಬೆಳೆಯುತ್ತಾ ಯಶಸ್ಸು ಪಡೆಯುತ್ತಾರೆ. ಹಾಗೆಯೇ 25ವರ್ಷದ ನಂತರ ಬಹಳಷ್ಟು ಎತ್ತರಕ್ಕೆ ಬೆಳೆಯುತ್ತಾರೆ.ಇನ್ನು ಹೆಂಗಸರು ತಮ್ಮ ವೃತ್ತಿ ಜೀವನದ ಬಗ್ಗೆ ಯೋಚಿಸಿ ಬಹಳಷ್ಟು ಮುಂದಕ್ಕೆ ಬರುತ್ತಾರೆ.

ಇನ್ನು ಕೈ ಮೇಲೆ ಅಂದರೆ ಅಂಗೈಯಲ್ಲಿ ಮಚ್ಚೆ ಇದ್ದರೆ ಬಹಳ ಅದ್ರಷ್ಟ.ಅಂಗೈ ಮುಚ್ಚಿದಷ್ಟು ಮರೆಯಾದರೆ ಅದ್ರಷ್ಟ ಅನ್ನುವುದು ಅವರಕೈಯಲ್ಲಿ ಸದಾ ಕಾಲ ಇರುತ್ತದೆ ಎಂದು ಹೇಳುತ್ತಾರೆ. ಏಕೆಂದರೆ ಇವರು ಹಣವನ್ನು ಅವರ ಅವಶ್ಯಕತೆಗೆ ಹೆಚ್ಚಾಗಿ ಹಣವನ್ನು ಹೇಗೆ ಖರ್ಚು ಮಾಡಬೇಕು ಅನ್ನುವುದರಲ್ಲಿ ಹೆಚ್ಚಿನ ಜ್ಞಾನ ಹೊಂದಿರುತ್ತಾರೆ.ಆದ್ದರಿಂದ ಹಣವನ್ನು ವ್ಯರ್ಥ ಮಾಡದೇ ಸಾಕಷ್ಟು ಹಣವನ್ನು ಉಳಿತಾಯ ಮಾಡುತ್ತಾರೆ.

ಬೆನ್ನಮೇಲೆ ಮಚ್ಚೆ ಇರುವ ವ್ಯಕ್ತಿಗಳು ಪ್ರಯಾಣವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಪ್ರಯಾಣ ಜಾಸ್ತಿ ಮಾಡಿ ಹೆಚ್ಚೆಚ್ಚು ತಮ್ಮ ಹೊರಗಿನ ಪರಿಸರ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಹಾಗೆ ಇವರು ತುಂಬಾ ಗಟ್ಟಿ. ಇವರು ತಮ್ಮ ಕುಟುಂಬವನ್ನು ಬಹಳ ಇಷ್ಟಪಡುತ್ತಾರೆ. ಇಂತಹ ವ್ಯಕ್ತಿಗಳನ್ನು ಪಡೆದ ಕುಟುಂಬ ಬಹಳ ಪುಣ್ಯ ಮಾಡಿರುತ್ತದೆ. ಯಾವುದೇ ಕಷ್ಟ ಬಂದರೂ ಬಿಟ್ಟು ಹೋಗುವುದಿಲ್ಲ. ಈ ನಾಲ್ಕೂ ಭಾಗಗಳಲ್ಲಿ ಮಚ್ಚೆ ಇರುವವರು ಬಹಳ ಒಳ್ಳೆಯವರು ಮತ್ತು ಶ್ರೀಮಂತರು ಆಗಿರುತ್ತಾರೆ.

By

Leave a Reply

Your email address will not be published. Required fields are marked *