ಈಗ ಕೊರೊನಾ ಎಂಬ ಮಹಾಮಾರಿಯು ಇಡೀ ಜಗತ್ತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗೆ ಇದರ ಬಗ್ಗೆ ಕೆಲವು ಜ್ಯೋತಿಷಿಗಳು ಹೇಳುವುದೇನೆಂದರೆ ಸುಮಾರು ಮೇ ತಿಂಗಳಿನ ತುದಿಯಲ್ಲಿ ಕೊರೊನಾ ಸುಮಾರು ಹತೋಟಿಗೆ ಬರಬಹುದು. ಈ ಸಾಂಕ್ರಾಮಿಕ ರೋಗಗಳು ಅಷ್ಟು ಸುಲಭವಾಗಿ ಮನುಷ್ಯನನ್ನು ಬಿಟ್ಟು ಹೋಗುವುದಿಲ್ಲ.ಪ್ರತಿಯೊಂದು ತಿಂಗಳುಗಳು ಕೆಲವೊಂದು ರಾಶಿಗಳಿಗೆ ಅನುಕೂಲ ಇರುತ್ತದೆ. ಇಲ್ಲಿ ನಾವು ಮೇ ತಿಂಗಳ ರಾಶಿ ಭವಿಷ್ಯವನ್ನು ನೋಡೋಣ.

ಮೇಷ:– ಈ ರಾಶಿಯವರಿಗೆ ಈ ತಿಂಗಳು ಒಳ್ಳೆಯದೇ ಇದೆ. ಇವರು ದಿನಾಲೂ ಸೂರ್ಯ ನಮಸ್ಕಾರ ಮಾಡಿದರೆ ಒಳ್ಳೆಯದು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಒಳ್ಳೆಯ ಫಲಿತಾಂಶ ನೀಡುತ್ತದೆ.ಸೂರ್ಯನ ಮಂತ್ರಗಳನ್ನು ಹೇಳಿದರೆ ಒಳ್ಳೆಯದು.

ವೃಷಭ:-ಹಣಕಾಸಿನ ವಿಚಾರದಲ್ಲಿ ಒಳ್ಳೆಯದಾಗುತ್ತದೆ.ನಿಮಗೆ ಯಾರಾದರೂ ಹಣ ಕೊಡುವುದಿದ್ದರೆ ಅದು ನಿಮ್ಮ ಕೈಗೆ ಬರುತ್ತದೆ. ಕೆಲಸಗಳಲ್ಲಿ ವಿಘ್ನಗಳು ಜಾಸ್ತಿ.ಈ ತಿಂಗಳಿನ ನಾಲ್ಕು ಬುಧವಾರ ದಿನಕ್ಕೊಂದು ಬಾರಿ ಉಪವಾಸ ಮಾಡುವುದು ಒಳ್ಳೆಯದು.

ಮಿಥುನ:-ಅನಾವಶ್ಯಕ ಖರ್ಚುಗಳು ಜಾಸ್ತಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾತ್ರೆ ಔಷಧಿಗಳ ಖರ್ಚು ಹೆಚ್ಚಾಗುತ್ತದೆ. ಪ್ರತಿ ಶುಕ್ರವಾರ ತುಪ್ಪದ ದೀಪ ಹಚ್ಚುವುದು ಒಳ್ಳೆಯದು. ದೇವಸ್ಥಾನದಲ್ಲಿ ಹಚ್ಚಿದರೆ ಇನ್ನೂ ಒಳ್ಳೆಯದು.

ಕಟಕ:- ಇವರಿಗೆ ಸ್ವಲ್ಪ ಆಲಸ್ಯ ಜಾಸ್ತಿ. ನಿದ್ದೆಯಲ್ಲಿ ಹೆಚ್ಚು ಮುಳುಗಿರುತ್ತಾರೆ.ಇದರಿಂದ ಹೊರಬರಬೇಕೆಂದರೆ ಪ್ರತಿ ಮಂಗಳವಾರ ರಾಹುಕಾಲದ ಸಮಯದಲ್ಲಿ ದುರ್ಗಾಸಹಸ್ರನಾಮ ಹೇಳಿಕೊಂಡು ತುಪ್ಪದ ದೀಪ ಹಚ್ಚಬೇಕು.

ಸಿಂಹ:-ಈ ರಾಶಿಯವರಿಗೆ ಕಾರಣವಿಲ್ಲದೆ ಮೂಡ್ ಒಫ್ ಆಗುತ್ತದೆ. ಹುಣ್ಣಿಮೆ ಚಂದ್ರನ ದರ್ಶನ ಮಾಡುವುದು ಒಳ್ಳೆಯದು. ನಿಮ್ಮ ತಾಯಿಗೆ ಏನಾದರೂ ಉಡುಗೊರೆ ಕೊಟ್ಟರೆ ಒಳ್ಳೆಯದು.

ಕನ್ಯಾ:- ಈ ರಾಶಿಯವರು ಮಾತ್ರೆ, ಔಷಧಿಗಳನ್ನು ದಾನ ಮಾಡಬೇಕು. ನೀರನ್ನು ಹೆಚ್ಚಾಗಿ ದಾನ ಮಾಡಬೇಕು.ದಾನ ಮಾಡಿದ ಪುಣ್ಯ ಮುಂದೆ ನಿಮ್ಮನ್ನು ಕಾಪಾಡುತ್ತದೆ.

ತುಲಾ:-ಈ ರಾಶಿಯವರಿಗೆ ಅನಾವಶ್ಯಕ ಖರ್ಚುಗಳು ಬರುತ್ತವೆ. ಯಾವುದಕ್ಕೋ ಅಂದುಕೊಂಡರೆ ಯಾವುದಕ್ಕೋ ಖಾಲಿಯಾಗುತ್ತದೆ.ಆದ್ದರಿಂದ ಹಸುಗಳಿಗೆ ಏನಾದರೂ ತಿನ್ನಿಸಬೇಕು.ಶುಕ್ರವಾರ ಶುಕ್ರವಾರ ನೆಲ್ಲಿಕಾಯಿ ದೀಪ ಹಚ್ಚಬೇಕು.

ವೃಶ್ಚಿಕ:-ಈ ರಾಶಿಯವರು ವಾಹನ ಚಾಲನೆಯಿಂದ ದೂರ ಇರುವುದು ಒಳಿತು.ಅನಾಹುತಗಳು ಆಗುವ ಸಾಧ್ಯತೆ ಇದೆ. ದಿನಾ ಬೆಳಿಗ್ಗೆ ಎದ್ದ ತಕ್ಷಣ ಜೇನುತುಪ್ಪ ಅಥವಾ ಖರ್ಜೂರ ತಿನ್ನುವುದು ಒಳ್ಳೆಯದು.

ಧನಸ್ಸು:– ವ್ಯಾಪಾರ ವ್ಯವಹಾರಗಳಲ್ಲಿ ಹೂಡಿಕೆ ಮಾಡುವಾಗ ತುಂಬಾ ಎಚ್ಚರಿಕೆ ವಹಿಸುವುದು ಒಳಿತು.ಪತಿಪತ್ನಿಯರಲ್ಲಿ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಪ್ರತಿ ಶುಕ್ರವಾರ ತೆಂಗಿನಕಾಯಿಯಲ್ಲಿ ದೀಪ ಹಚ್ಚಿದರೆ ಒಳ್ಳೆದಾಗುತ್ತದೆ.

ಮಕರ:-ಈ ರಾಶಿಯವರಿಗೆ ನೀಚತನ ಕಡಿಮೆ ಮಾಡಿ ಮದ ಹೆಚ್ಚು ಮಾಡುತ್ತಾನೆ ಶನಿ.ಆದ್ದರಿಂದ ಕಂಬಳಿಯನ್ನು ದಾನ ಮಾಡಿದರೆ ಒಳ್ಳೆಯದು.

ಕುಂಭ:-ಈ ರಾಶಿಯವರು ವಯಸ್ಸಾದವರಿಗೆ ಊಟ ದಾನ ಮಾಡಬೇಕು. ಅದು ಈ ಸಮಯದಲ್ಲಿ ತುಂಬಾ ಒಳ್ಳೆಯದು. ನಿಮಗೇನಾದರೂ ಕೊಡಬೇಕು ಅನಿಸಿದರೆ ಕೊಟ್ಟುಬಿಡಿ ಮುಂದೆ ಒಳ್ಳೆಯದೇ ಆಗುತ್ತದೆ.

ಮೀನ:-ಈ ರಾಶಿಯವರು ಸುಬ್ರಹ್ಮಣ್ಯನ ಮಂತ್ರ ಹೇಳುವುದು ಒಳಿತು. ತೊಗರಿಬೇಳೆಯನ್ನು ದಾನ ಮಾಡಿ.ಮಂಗಳವಾರ ಸುಬ್ರಹ್ಮಣ್ಯನ ದೇವಸ್ಥಾನಕ್ಕೆ ಹೋಗುವುದು ಒಳಿತು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!