ನಿಮ್ಮ ಜಮೀನಿನ ನಕ್ಷೆಯನ್ನು ಮೊಬೈಲ್ ನಲ್ಲೆ ಪಡೆಯುವ ಸುಲಭ ವಿಧಾನ

0 13,728

ಸ್ನೇಹಿತರೆ ನಾವಿಂದು ಸುಲಭವಾಗಿ ನಿಮ್ಮಜಮೀನಿನ ನಕ್ಷೆಯಬಗ್ಗೆ ತಿಳಿಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.ನಿಮ್ಮ ಜಮೀನಿನ ನಕ್ಷೆ ಯಾವುದು ಹೊಲದ ನಕ್ಷೆ ಯಾವುದು ಕಾಲುದಾರಿ ಯಾವುದು ಅದು ಎಲ್ಲಿಂದ ಹಾದು ಹೋಗುತ್ತದೆ ನಿಮ್ಮ ಜಮೀನಿನ ಸುತ್ತ ಮುತ್ತ ಯಾವ ಯಾವ ಸರ್ವೇ ನಂಬರ್ ಬರುತ್ತದೆ ಇವುಗಳನ್ನೆಲ್ಲಾ ತಿಳಿದುಕೊಳ್ಳಲು ಮೊದಲು ಎಷ್ಟೋ ತಿರುಗಾಟಗಳನ್ನು ಮಾಡಬೇಕಾಗಿತ್ತು. ಆದರೆ ಈಗ ನಿಮ್ಮ ಬಳಿಯಲ್ಲಿರುವ ಮೋಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಸುಲಭವಾಗಿ ಮಾಹಿತಿಯನ್ನು ತಿಳಿಯಬಹುದಾಗಿದೆ ಅದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಭೂಮಾಪನಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಮೂಲಕ ಭೂಕಂದಾಯ ಇಲಾಖೆಯು ಸಿದ್ಧಪಡಿಸಿದ ನಕ್ಷೆಯ ವ್ಯವಸ್ಥೆಯಿಂದ ನಿಮ್ಮಜಮಿನಿನ ಬಗ್ಗೆ ತಿಳಿದುಕೊಳ್ಳಲು ನಿಮ್ಮ ಬಳಿ ಇರುವ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಗೂಗಲ್ ನ್ನು ತೆರೆದು ಭೂಮಿ ಅಂತ ಟೈಪ್ ಮಾಡಿ ಸರ್ಚ್ ಮಾಡಿ ಆಗ ಅಲ್ಲಿ ಕೆಳಗಡೆ ಒಂದಿಷ್ಟು ಮಾಹಿತಿ ಬರುತ್ತದೆ ಅದರಲ್ಲಿ ನೀವು ರೆವೆನ್ಯೂ ಡಿಪಾರ್ಟ್ಮೆಂಟ್ ಅನ್ನುವುದನ್ನು ಆಯ್ಕೆ ಮಾಡಿ ಅದರ ಮೇಲೆ ಕ್ಲಿಕ್ ಮಾಡಿದಾಗ ಆಗ ಅಲ್ಲಿ ಒಂದು ಸಂಪೂರ್ಣ ವಾದ ಆಫಿಶಿಯಲ್ ವೆಬ್ ಸೈಟ್ ತೆರೆದುಕೊಳ್ಳುತ್ತದೆ ಅದರಲ್ಲಿ ಲ್ಯಾಂಡ್ ರೆಕಾರ್ಡ್ ರೆವೆನ್ಯೂ ಡಿಪಾರ್ಟ್ಮೆಂಟ್ ಅನ್ನುವುದು ಕಾಣಿಸುತ್ತದೆ.

ಅದನ್ನು ಕೆಳಗಡೆ ಸರಿಸಿದಾಗ ಅಲ್ಲಿ ರೆವೆನ್ಯೂ ಮ್ಯಾಪ್ಸ್ ಕಂದಾಯ ನಕ್ಷೆಗಳು ಎನ್ನುವುದು ಕಾಣಿಸುತ್ತದೆ ಅಂದರೆ ನೀವು ನಿಮ್ಮ ಜಮೀನಿನ ಸಂಪೂರ್ಣ ನಕ್ಷೆಯನ್ನು ನೋಡಬಹುದು ಅದರ ಮೆಲೆ ಕ್ಲಿಕ್ ಮಾಡಬೇಕು ಆಗ ರೆವೆನ್ಯೂ ಮ್ಯಾಪ್ಸ್ ಆನ್ಲೈನ್ ಅನ್ನುವುದು ತೆರೆದುಕೊಳ್ಳುತ್ತದೆ ಇಲ್ಲಿ ನಿಮ್ಮ ಜಮೀನಿನ ಸಂಪೂರ್ಣ ಮಾಹಿತಿ ಸಿಗುತ್ತದೆ. ಅಲ್ಲಿ ಕೆಳಗೆ ನೀವು ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ನಿಮ್ಮ ತಾಲೂಕು ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು ಅದಾದನಂತರ ನಿಮ್ಮ ಹೊಬಳಿಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ನಂತರ ಮ್ಯಾಪ್ಸ್ ಟೈಪ್ ಅನ್ನುವುದಿರುತ್ತದೆ ಅಲ್ಲಿ ಅಲ್ ಎನ್ನುವುದನ್ನು ಆಯ್ಕೆ ಮಾಡಿಕೊಂಡು ಹುಡುಕಿ.

ಅಲ್ಲಿ ಕೆಳಗೆ ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮದ ಹೆಸರು ಮತ್ತುಅದರ ಎದುರು ಪಿಡಿಎಫ್ ಫೈಲ್ ಇರುತ್ತದೆ. ನೀವು ಆಯ್ಕೆ ಮಾಡಿದ ಹೋಬಳಿ ಕೇಂದ್ರದಲ್ಲಿ ಬರುವ ಗ್ರಾಮಗಳ ಹೆಸರು ಅಲ್ಲಿ ಇರುತ್ತದೆ ನೀವು ನಿಮ್ಮ ಜಮೀನು ಯಾವ ಗ್ರಾಮದಲ್ಲಿದೆ ಅಥವಾ ನಿಮ್ಮ ಊರಿನ ಹೆಸರನ್ನು ಆಯ್ಕೆ ಮಾಡಿ ಅದರ ಎದುರು ಇರುವ ಪಿಡಿಎಫ್ ಫೈಲ್ ನ್ನೂ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮೆದುರು ಸಂಪೂರ್ಣವಾದ ನಿಮ್ಮ ಊರಿನ ನಕ್ಷೆ ತೆರೆದುಕೊಳ್ಳುತ್ತದೆ.

ಇದು ಕರ್ನಾಟಕ ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ ಅಂದರೆ ಇದು ಸರ್ಕಾರದ ಹತ್ತಿರ ಇರುವ ನಕ್ಷೆ ಇದನ್ನು ಯಾರು ಕೈಯಿಂದ ತಯಾರಿಸಿರುವುದಿಲ್ಲ ಇದು ಸಂಪೂರ್ಣವಾಗಿ ಸರ್ಕಾರದ ಅಧೀನದಲ್ಲಿರುವ ನಕ್ಷೆ. ಈಗ ನಿಮ್ಮ ಮುಂದೆ ಇರುವ ನಿಮ್ಮ ಊರಿನ ನಕ್ಷೆಯಲ್ಲಿ ನಿಮ್ಮ ಸರ್ವೇ ನಂಬರ್ ಅನ್ನು ಹುಡುಕಬೇಕಾಗುತ್ತದೆ ಅದಕ್ಕೂ ಮುನ್ನ ನಕ್ಷೆಯ ಪಕ್ಕದಲ್ಲಿ ಕೊಟ್ಟಿರುವ ಚಿನ್ಹೆಗಳು ಯಾವವು ಅಲ್ಲಿರುವ ಬಣ್ಣಗಳು ಏನನ್ನು ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.

ನಂತರ ಕೆಳಗಡೆ ಕ್ರಯ ರೂಪಾಯಿ ಎನ್ನುವುದಿರುತ್ತದೆ ಅಲ್ಲಿ ಮೂಲನಕ್ಷೆ ತಯಾರಿಸಿದವರು ಮತ್ತು ಒದಗಿಸಿದವರು ಭೂಮಾಪನಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಕರ್ನಾಟಕ ಸರ್ಕಾರ ಅಂತಾ ಇರುತ್ತದೆ ಅಂದರೆ ಇದನ್ನು ಯಾವುದೇ ವ್ಯಕ್ತಿಗಳು ತಯಾರಿಸಿರುವುದಲ್ಲ . ನಂತರದಲ್ಲಿ ಗಣಕೀಕೃತ ನಕ್ಷೆ ತಯಾರಿಸಿದವರು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಅಂತ ಇರುತ್ತದೆ ಅಲ್ಲಿ ಗಣಕೀಕೃತ ನಕ್ಷೆ ತಯಾರಿಸಿದ ವರ್ಷವನ್ನೂ ತಿಳಿಸಿರುತ್ತಾರೆ .

ಈ ರೀತಿಯಾಗಿ ನಿಮ್ಮ ಊರಿನ ನಕ್ಷೆಯನ್ನು ತಯಾರಿಸುತ್ತಾರೆ ಅಲ್ಲಿ ನಿಮ್ಮ ಸರ್ವೇ ನಂಬರ್ ಕನ್ನಡ ಸಂಖ್ಯೆಯಲ್ಲಿರುತ್ತದೆ ನಿಮ್ಮ ಸರ್ವೇ ನಂಬರ್ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಂಡು ನೀವು ನಿಮ್ಮ ಸಂಪೂರ್ಣ ನಕ್ಷೆಯನ್ನು ನೋಡಬಹುದು ನಿಮ್ಮ ಸರ್ವೇ ನಂಬರ್ ಯಾವುದಿದೆ ಅನ್ನುವುದನ್ನು ನೋಡಿಕೊಂಡು ನಿಮ್ಮ ಜಮೀನ ಡೊಣ ಅಂದರೆ ಬೇಲಿ ಯಾವ ರೀತಿ ಯಾಗಿದೆ ಎಲ್ಲಿದೆ ಮತ್ತು ಎಷ್ಟಿದೆ ಅನ್ನುವುದನ್ನು ನೀವು ತಿಳಿದುಕೊಳ್ಳಬಹುದು ಮತ್ತು ಹಳ್ಳ ಕೊಳ್ಳಗಳು ಯಾವ ಬದಿ ಇದೆ ಗಿಡಮರಗಳು ಎಲ್ಲಿವೆ ಬಾವಿ ಎಲ್ಲಿದೆ ಅನ್ನೋದನ್ನು ಈ ಒಂದು ನಕ್ಷೆಯ ಮೂಲಕ ತಿಳಿದುಕೊಳ್ಳಬಹುದು.

ಈ ರೀತಿಯಾಗಿ ನೀವು ಯಾವುದೇ ತಿರುಗಾಟಗಳಿಲ್ಲದೆ ಸುಲಭವಾಗಿ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಭೂದಾಖಲೆಗಳ ಇಲಾಖೆ ಕರ್ನಾಟಕ ಸರ್ಕಾರ ರಚಿಸಿರುವ ನಿಮ್ಮ ಜಮೀನಿನ ನಕ್ಷೆಯ ಸಂಪೂರ್ಣಮಾಹಿತಿಯನ್ನೂ ತಿಳಿದುಕೊಳ್ಳಬಹುದಾಗಿದೆ.

Leave A Reply

Your email address will not be published.