ಇಂದಿನ ಯುವಕರು ಶಿಕ್ಷಣ ಪಡೆದು ದೂರದ ಊರುಗಳಿಗೆ ಹೋಗಿ ಬೇರೆಯವರ ಕೈ ಕೆಳಗೆ ಕೆಲಸ ಮಾಡುತ್ತಾರೆ. ಊರಿನಲ್ಲಿರುವ ತಮ್ಮ ಜಮೀನು ಹಾಳಾಗುತ್ತದೆ ಆದರೆ ಯೋಗೇಶ್ ಎಂಬ ಯುವಕ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಹೈನುಗಾರಿಕೆಯನ್ನು ಸಹ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ. ಅವರು ಮಾಡಿದ ವ್ಯವಸಾಯ ಮತ್ತು ಹೈನುಗಾರಿಕೆ ಹಾಗೂ ಅವರು ಪಡೆಯುವ ಆದಾಯದ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಯೋಗೇಶ್ ಎಂಬ ಯುವಕ ಮಂಡ್ಯ ಜಿಲ್ಲೆಯ ಹೊಸಕೆರೆ ಗ್ರಾಮದಲ್ಲಿ ಹೈನುಗಾರಿಕೆಯನ್ನು ಪ್ರಾರಂಭಿಸಿದರು. ಅವರು ಬಿಕಾಂ ಡಿಗ್ರಿ ಓದಿದ್ದು ಹೆಚ್ಚಿನ ಶಿಕ್ಷಣ ಪಡೆಯಲು ಮತ್ತು ಬೇರೆ ದೂರದ ಊರಿಗೆ ಹೋಗಿ ಕೆಲಸ ಮಾಡಲು ಇಷ್ಟವಿಲ್ಲದ ಕಾರಣ ಅವರು ಡಿಗ್ರಿ ಮುಗಿಸಿದ ನಂತರ ತಮ್ಮ ಜಮೀನಿನಲ್ಲಿ ಎರಡು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ.

ಅವರಿಗೆ ವ್ಯವಸಾಯದೊಂದಿಗೆ ಹೈನುಗಾರಿಕೆಯಲ್ಲಿ ಬಹಳ ಆಸಕ್ತಿ ಇದೆ. ಯೋಗೇಶ್ ಅವರ ಮನೆಯಲ್ಲಿ ಯೋಗೇಶ್ ಅವರು ಚಿಕ್ಕವನಿದ್ದಾಗಿನಿಂದಲೂ ಸಣ್ಣ ಪ್ರಮಾಣದಲ್ಲಿ ಹೈನುಗಾರಿಕೆ ಮಾಡಿಕೊಂಡು ಬರುತ್ತಿದ್ದರು.

ಈಗ ಯೋಗೇಶ್ ಅವರು ದೊಡ್ಡ ಪ್ರಮಾಣದಲ್ಲಿ ಹೈನುಗಾರಿಕೆಯನ್ನು ಪ್ರಾರಂಭಿಸಿದ್ದಾರೆ. ಯೋಗೇಶ್ ಅವರು ಹೈನುಗಾರಿಕೆ ಜೊತೆ ತಮ್ಮ ಒಂದು ಎಕರೆ ಜಮೀನಿನಲ್ಲಿ ಜೋಳ ಬೆಳೆದಿದ್ದಾರೆ. ಅವರ ಫಾರ್ಮ್ ಹೌಸ್ 25 ಅಡಿ ಉದ್ದ 15 ಅಡಿ ಅಗಲ ಹೊಂದಿದೆ.

ಯೋಗೇಶ್ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ 10-15 ಹಸುಗಳನ್ನು ಸಾಕಿದ್ದಾರೆ. ಒಂದು ಹಸುವಿನ ಬೆಲೆ 50,000 ರಿಂದ 60,000 ರೂಪಾಯಿ. ಯೋಗೇಶ್ ಅವರು ದಿನಕ್ಕೆ 80ರಿಂದ 100 ಲೀಟರ್ ಹಾಲನ್ನು ಡೇರಿಗೆ ಕೊಡುತ್ತಾರೆ. ಒಂದು ತಿಂಗಳಿಗೆ ಆರು ಸಾವಿರ ಲೀಟರ್ ಹಾಲನ್ನು ಡೇರಿಗೆ ಕೊಡುತ್ತಾರೆ ಆದ್ದರಿಂದ ಅವರು 1,50,000 ದಿಂದ 1,65,000 ರೂಪಾಯಿವರೆಗೆ ಆದಾಯ ಗಳಿಸುತ್ತಿದ್ದಾರೆ.

ಯೋಗೇಶ್ ಅವರಿಗೆ ಬೇರೆಯವರ ಕೈ ಕೆಳಗೆ ಕೆಲಸ ಮಾಡಲು ಇಷ್ಟ ಇರಲಿಲ್ಲ ತಮ್ಮ ಮನೆಯಲ್ಲೆ ಇದ್ದುಕೊಂಡು ಏನಾದರೂ ಸಾಧನೆ ಮಾಡಬೇಕು ಎಂಬ ಛಲದೊಂದಿಗೆ ಹೈನುಗಾರಿಕೆ ಮತ್ತು ಕೃಷಿ ಚಟುವಟಿಕೆಗಳನ್ನು ಮಾಡುತ್ತಾ ಕಂಪನಿಗಳಲ್ಲಿ ಕೆಲಸ ಮಾಡುವವರಿಗಿಂತ ಹೆಚ್ಚಿನ ಸಂಪಾದನೆ ಮಾಡುತ್ತಿದ್ದಾರೆ.

ಅವರು ನಮಗೆ ಯಾವ ಕೆಲಸದಲ್ಲಿ ಆಸಕ್ತಿ ಇರುತ್ತದೆಯೋ ಅದನ್ನೆ ಶ್ರದ್ಧೆಯಿಂದ ಮಾಡಬೇಕು ಕಡಿಮೆ ಸಮಯದಲ್ಲಿ ಹೆಚ್ಚು ಆದಾಯ ಗಳಿಸಲು ಕೃಷಿಯಲ್ಲಿ ಅವಕಾಶ ಇರುತ್ತದೆ ಎಂದು ಯುವಕರಿಗೆ ತಿಳಿಸಿದ್ದಾರೆ. ಒಟ್ಟಾರೆಯಾಗಿ ಯೋಗೇಶ್ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ, ಅವರು ಇನ್ನೂ ಹೆಚ್ಚು ವ್ಯವಸಾಯದಲ್ಲಿ ತೊಡಗಿಕೊಳ್ಳಲಿ ಎಂದು ಆಶಿಸೋಣ.

Leave a Reply

Your email address will not be published. Required fields are marked *