ಕುಂದ್ರಾದಿ ಬೆಟ್ಟ, ಇದು ಭೂಲೋಕದ ಸ್ವರ್ಗ ಅಂತಾರೆ ಪ್ರವಾಸಿಗರು

0 4

ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯನ್ನು ನೋಡಲು ಬಹಳಷ್ಟು ಸುಂದರ, ಹೀಗಿರುವಾಗ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಂದಾದ್ರಿ ಬೆಟ್ಟ ನಿಸರ್ಗದ ಸೌಂದರ್ಯ ಸವಿಯಲು ಹೇಳಿಮಾಡಿಸಿದ ಜಾಗದಂತಿದೆ ಈ ಬೆಟ್ಟದ ಬಗ್ಗೆ ಅನೇಕ ಸ್ವಾರಸ್ಯಕರ ವಿಷಯವನ್ನು ಈ ಲೇಖನದಲ್ಲಿ ನೋಡೋಣ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಂದಾದ್ರಿ ಬೆಟ್ಟಕ್ಕೆ ಒಮ್ಮೆ ಆದರೂ ಭೇಟಿ ನೀಡಲೇಬೇಕು. ಇಲ್ಲಿ ಮೋಡಗಳು ನಮ್ಮನ್ನು ಸೀಳಿಕೊಂಡು ಹೋಗುವ ಅನುಭವ ರೋಮಾಂಚನ. ಸೂರ್ಯೋದಯ ಮತ್ತು ಚಂದ್ರಾಸ್ತ ಏಕಕಾಲಕ್ಕೆ ನೋಡಲು ಸಾಧ್ಯವಾಗುತ್ತದೆ. ಕುಂದಾದ್ರಿ ಬೆಟ್ಟಕ್ಕೆ ಚಾರಣಿಗರು, ಪ್ರವಾಸಿಗರು ಮಾತ್ರವಲ್ಲದೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ಸ್ಥಳವು ಜೈನರ ಪ್ರಮುಖ ಯಾತ್ರಾ ಸ್ಥಳವಾಗಿದೆ. ಕುಂದಾದ್ರಿ ಬೆಟ್ಟದಲ್ಲಿ ಜೈನ ಧರ್ಮೀಯರ ಆರಾಧ್ಯ ಗುರುಗಳಾದ ಕುಂದಕುಂದಾಚಾರ್ಯರು ಸುಮಾರು 24 ವರ್ಷಗಳ ಕಾಲ ತಪಸನ್ನು ಕೈಗೊಂಡು ತಮ್ಮ 95ನೇ ವಯಸ್ಸಿನಲ್ಲಿ ಐಕ್ಯರಾಗಿದ್ದಾರೆ ಅವರು ತಪಸ್ಸು ಮಾಡಿದ ಸ್ಥಳವಾದ ಈ ಬೆಟ್ಟಕ್ಕೆ ಕುಂದಾದ್ರಿ ಬೆಟ್ಟ ಎಂಬ ಹೆಸರು ಬಂದಿತು. ಈ ಬೆಟ್ಟದಲ್ಲಿ ಪಾರ್ಶ್ವನಾಥ ದಿಗಂಬರ ಜೈನ ದೇವಾಲಯವಿದೆ. ಇದು 3,000 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಮಂದಿರದಲ್ಲಿರುವ ಪಾರ್ಶ್ವನಾಥ ತೀರ್ಥಂಕರರ ಏಕಶಿಲಾ ವಿಗ್ರಹವು 2,800 ವರ್ಷಗಳ ಇತಿಹಾಸವನ್ನು ಹೊಂದಿದೆ. ಸೂರ್ಯೋದಯದ ಸಮಯದಲ್ಲಿ ಸೂರ್ಯನ ಮೊದಲ ಕಿರಣ, ಸೂರ್ಯಾಸ್ತದ ಸಮಯದಲ್ಲಿ ಸೂರ್ಯನ ಕಿರಣವು ಪಾರ್ಶ್ವನಾಥ ತೀರ್ಥಂಕರರ ವಿಗ್ರಹದ ಪಾದದ ಮೇಲೆ ಬೀಳುವುದು ಇಲ್ಲಿಯ ವಿಶೇಷವಾಗಿದೆ. ಜೈನ ಮಂದಿರದ ಹಿಂಭಾಗದಲ್ಲಿ ಕುಂದಕುಂದಾ ಮಹರ್ಷಿಗಳು ತಪಸ್ಸು ಮಾಡಿದ ಸ್ಥಳವಿದೆ. ಇಲ್ಲಿ ಕುಂದಕುಂದಾ ಮಹರ್ಷಿಗಳ ಪಾದುಕೆಯನ್ನು ಇಟ್ಟು ಪೂಜಿಸಲಾಗುತ್ತದೆ.

ನಮ್ಮ ಕರ್ನಾಟಕ ಮಾತ್ರವಲ್ಲದೆ ಉತ್ತರ ಭಾರತದ ಅನೇಕ ರಾಜ್ಯಗಳಿಂದ, ದಕ್ಷಿಣ ಭಾರತದ ಆಂಧ್ರ ಪ್ರದೇಶ, ತೆಲಂಗಾಣ, ಮೊದಲಾದ ರಾಜ್ಯಗಳಿಂದ ಜನರು ಬರುತ್ತಾರೆ. ಜೈನ ಬಸದಿಯ ಎಡ ಹಾಗೂ ಬಲ ಭಾಗದಲ್ಲಿ ವರ್ಷವಿಡಿ ತುಂಬಿರುವ ಎರಡು ಪುಷ್ಕರಣಿಗಳು ಇವೆ. ಇವುಗಳಲ್ಲಿ ಒಂದನ್ನು ಪಾಪ ವಿಮೋಚನಾ ಕೆರೆ ಎಂದು, ಮತ್ತೊಂದನ್ನು ತಾವರೆ ಕೆರೆ ಎಂದು ಕರೆಯಲಾಗುತ್ತದೆ. ಈ ಕೆರೆಯಲ್ಲಿ ಯಾವಾಗಲೂ ತಾವರೆ ಪುಷ್ಪಗಳು ಅರಳಿರುತ್ತವೆ. ಉತ್ತರಾಯಣ ಪುಣ್ಯಕಾಲದ ದಿನದಂದು ಪಾಪ ವಿಮೋಚನಾ ಕೆರೆಯ ನೀರನ್ನು ಪ್ರೋಕ್ಷಣೆ ಮಾಡಿಕೊಂಡರೆ ಮನುಷ್ಯನ ಜನುಮ ಪಾವನವಾಗುತ್ತದೆ ಎಂಬ ಪ್ರತೀತಿ ಇದೆ. ಕುಂದಾದ್ರಿ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 3,200 ಅಡಿ ಎತ್ತರದಲ್ಲಿದೆ. ಈ ಬೆಟ್ಟವನ್ನು ತೀರ್ಥಹಳ್ಳಿಯ ಮುಕುಟ ಪ್ರಾಯವೆಂದು ಕರೆಯಲಾಗುತ್ತದೆ. ಈ ಬೆಟ್ಟ ಸಂಪೂರ್ಣವಾಗಿ ಏಕಶಿಲೆಯಿಂದಲೆ ನಿರ್ಮಾಣವಾದ ಬೆಟ್ಟವಾಗಿದೆ, ಸುತ್ತಲೂ ದಟ್ಟವಾದ ಅರಣ್ಯದಿಂದ ಸುತ್ತುವರೆದಿದೆ. ಪ್ರತಿ ಹುಣ್ಣಿಮೆಯ ದಿನದಂದು ಈ ಬೆಟ್ಟದಲ್ಲಿ ಚಂದ್ರಾಸ್ತಮ, ಸೂರ್ಯೋದಯದ ದೃಶ್ಯವನ್ನು ಏಕಕಾಲಕ್ಕೆ ನೋಡಬಹುದು ಅದು ಇಲ್ಲಿಯ ವಿಶೇಷವಾಗಿದೆ. ಕುವೆಂಪು ಅವರು ಕುಂದಾದ್ರಿ ಬೆಟ್ಟವನ್ನು ಭೇಟಿ ಮಾಡಿ ಸೂರ್ಯೋದಯ ನೋಡಿದ ಅನುಭವವನ್ನು ತಮ್ಮ ಆತ್ಮಚರಿತ್ರೆಯಲ್ಲಿ ಹಂಚಿಕೊಂಡಿದ್ದಾರೆ. ಕುಂದಾದ್ರಿ ಬೆಟ್ಟದ ಮೇಲೆ ನಿಂತುಕೊಂಡರೆ ಸುತ್ತಲಿನ ಅಡಕೆ ತೋಟಗಳು, ಅರಣ್ಯಗಳು ಹಸಿರು ಹಾಸಿಗೆಯಂತೆ ಕಾಣುತ್ತದೆ. ಕುಂದಾದ್ರಿ ಬೆಟ್ಟವನ್ನು ನಿಸರ್ಗದ ಸೌಂದರ್ಯದಿಂದ ಭೂಲೋಕದ ಸ್ವರ್ಗ ಎಂದು ಕರೆಯಲಾಗುತ್ತದೆ. ಬೆಟ್ಟದ ಮೇಲೆ ನಿಸರ್ಗದ ಸೌಂದರ್ಯ ಸವಿಯಲು ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಬಹಳಷ್ಟು ಜನರು ಬೆಟ್ಟದಲ್ಲಿ ಪ್ರಕೃತಿ ಸೌಂದರ್ಯ ಸವಿಯುತ್ತಾ ಫೋಟೊ ತೆಗೆಯುತ್ತಾರೆ. ಬೆಟ್ಟದ ತುದಿಗೆ ಮತ್ತು ಕೊಳದ ಸುತ್ತಲೂ ರಕ್ಷಣಾ ಬೇಲಿಗಳನ್ನು ಅಳವಡಿಸಲಾಗಿದೆ. ಬೆಟ್ಟದ ಮೇಲೆ ಆಹಾರ, ನೀರು ಲಭ್ಯವಿಲ್ಲ ಆದ್ದರಿಂದ ಪ್ರವಾಸಿಗರು ಆಹಾರ, ನೀರನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಹಚ್ಚ ಹಸಿರಾಗಿರುವ ಈ ಜಾಗದಲ್ಲಿ ಅನೇಕ ಸಿನಿಮಾ ಚಿತ್ರೀಕರಣ ನಡೆದಿದೆ. ಇಂತಹ ಪ್ರವಾಸಿ ಸ್ಥಳವಾದ ಕುಂದಾದ್ರಿ ಬೆಟ್ಟವನ್ನು ಒಮ್ಮೆಯಾದರೂ ನೋಡಲೆಬೇಕು.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave A Reply

Your email address will not be published.